January 1, 2011

ನೋವಿಗೆ ಮಿಡಿದ ಜೀವಕ್ಕೆ ಜೀವಾವಧಿ ಶಿಕ್ಷೆ


ಬಡವರ ವೈದ್ಯ ಮತ್ತು ಮಾನವಹಕ್ಕುಗಳ ಹೋರಾಟಗಾರ ಡಾ. ಬಿನಾಯಕ್ ಸೇನ್ ಅವರಿಗೆ ಛತ್ತೀಸಗಡದ ರಾಯ್ಪುರದ ನ್ಯಾಯಾಲಯ ನೀಡಿರುವ ಜೀವಾವಧಿ ಶಿಕ್ಷೆಯ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಇದೇ ಬುಧವಾರ ಬೆಂಗಳೂರಿನಲ್ಲೂ ಅಂತಹದ್ದೊಂದು ಪ್ರತಿಭಟನೆ ನಡೆಯಿತು. ಇತರೆ ನಗರಗಳಲ್ಲಿ ಆಗಿರುವಂತೆ ಇಲ್ಲಿಯೂ ವಿವಿಧ ಸಂಸ್ಥೆ-ಸಂಘಟನೆಗಳ ನೂರಾರು ಕಾರ್ಯಕರ್ತರು ಜೊತೆಗೂಡಿ ಡಾ. ಸೇನ್ ಪರವಾಗಿ ತಮ್ಮ ದನಿ ಎತ್ತಿದ್ದು ಒಂದು ರೀತಿಯಲ್ಲಿ ನೆಮ್ಮದಿಯನ್ನು ತಂದಿತು. ಏಕೆಂದರೆ ಸೇನ್ ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿರುವ ಹಿಂದಿರುವ ಉದ್ದೇಶವೇ ಇತರೆ ಮಾನವಹಕ್ಕು ಮತ್ತು ಜನಪರ ಹೋರಾಟಗಾರರಲ್ಲಿ. ಭಯ ಹುಟ್ಟಿಸುವುದಾಗಿತ್ತು; ಆ ಮೂಲಕ ಯಾರೂ ಸಕರ್ಾರಗಳ ದೌರ್ಜನ್ಯದ ವಿರುದ್ಧ ದನಿ ಎತ್ತದಂತೆ ನೋಡಿಕೊಳ್ಳುವುದೇ ಆಗಿತ್ತು. ಆದರೆ ಆ ಉದ್ದೇಶ ಕಿಂಚಿತ್ತೂ ಈಡೇರಲಿಲ್ಲ. ಬದಲಾಗಿ ಅದಕ್ಕೆ ವಿರುದ್ಧವಾದ ಪರಿಣಾಮ ವನ್ನು ಬೀರಿ ಎಲ್ಲರನ್ನು ಈ ತೀಪರ್ಿನ ವಿರುದ್ಧ ಒಗ್ಗೂಡಿಸಿದೆ.
ಸೇನ್ ಅವರಿಗೆ ಜೀವಾವಧಿ ಶಿಕ್ಷೆ ನೀಡಿರುವ ತೀಪರ್ಿನಲ್ಲಿರುವ ಲೋಪದೋಷಗಳ ಬಗ್ಗೆ ಇದೇ ಸಂಚಿಕೆಯಲ್ಲಿ ನಮ್ಮ ಶಿವಸುಂದರ್ `ಚಾವರ್ಾಕ' ಅಂಕಣದಲ್ಲಿ ವಿವರವಾಗಿ ಚಚರ್ಿಸಿದ್ದಾರೆ. ಈ ಹಿಂದೆ ಸೇನ್ ಅವರಿಗೆ ಜಾಮೀನನ್ನು ನಿರಾಕರಿಸಿ, ಅವರ ಹೃದಯ ಕಾಯಿಲೆಗೆ ಸರಿಯಾದ ಚಿಕಿತ್ಸೆಯನ್ನೂ ನೀಡದೆ ಅವರನ್ನು ಎರಡು ವರ್ಷಗಳ ಕಾಲ ಬಂಧನದಲ್ಲಿಟ್ಟಿದ್ದಾಗ ಅವರ ಬಗ್ಗೆ ಇದೇ ಕಾಲಂನಲ್ಲಿ ನಾನು ಬರೆದಿದ್ದೆ (ಮೇ 20, 2009 ರ ಸಂಚಿಕೆ). ಆದ್ದರಿಂದ ಇಂದು ಸೇನ್ರಂತಹ ನಿಸ್ವಾರ್ಥ ಜನಸೇವಕನನ್ನು, ಮಾನವತಾವಾದಿಯನ್ನು ಜೈಲಿಗೆ ದೂಡುತ್ತಿರುವ ನಮ್ಮ ಪ್ರಜಾತಂತ್ರ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬ ನನ್ನ ಆತಂಕವನ್ನು ಹಂಚಿಕೊಳ್ಳಲು ಇಷ್ಟಪಡುತ್ತೇನೆ.
ಇತ್ತೀಚೆಗೆ ನಮ್ಮ ಮಹಾನ್ ಭಾರತದಲ್ಲಿ ಎತೆಂತಹ ಹಗರಣಗಳು ನಡೆದಿವೆ ನೋಡಿ.
ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಬಲಿಕೊಟ್ಟ ಸೈನಿಕರ ಹೆಸರಲ್ಲಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ರಿಯಲ್ ಎಸ್ಟೇಟನ್ನೇ ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳು ಕಬಳಿಸಿ ಸಿಕ್ಕಿಬಿದ್ದಿದ್ದರು. ಇದನ್ನು `ಆದಶರ್್ ಹಗರಣ' ಎಂದೇ ಕರೆಯಲಾಗುತ್ತಿದೆ. ಅದರಲ್ಲಿ ಎಷ್ಟು ವ್ಯಂಗ್ಯ ಅಡಗಿದೆ ಎಂದರೆ ಈ `ಆದಶರ್್ ಹಗರಣ'ರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಹಾರಾಷ್ಟ್ರದ ಕಾಂಗ್ರೆಸ್ ರಾಜಕಾರಣಿ ಅಶೋಕ್ ಚವಾಣ್ ಅವರಿಗೆ ಆದ `ಶಿಕ್ಷೆ' ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕಾಗಿ ಬಂದದ್ದು, ಅಷ್ಟೇ! ಅವರಿಗೆ ಜೈಲು, ಬೇಲು ತರಹದ ಯಾವ ಸಂಕಷ್ಟಗಳೂ ಎದುರಾಗಲೇ ಇಲ್ಲ. ಸ್ವಲ್ಪ ದಿನಗಳಲ್ಲಿ ಎಲ್ಲ ಹಗರಣಗಳಂತೆ `ಆದಶರ್್' ಹಗರಣವನ್ನೂ ಜನ ಮರೆತ ಮೇಲೆ ಮುಂದೊಂದು ದಿನ ಇದೇ ಅಶೋಕ್ ಚವಾಣ್ ಮತ್ತೆ ಮುಖ್ಯಮಂತ್ರಿಯೋ, ಕೇಂದ್ರ ಮಂತ್ರಿಯೋ ಆಗಿ ತಮ್ಮ `ಆದಶರ್್' ಮಾರ್ಗವನ್ನು ಮುಂದುವರೆಸಿದರೆ ಅಚ್ಚರಿಪಡಬೇಕಿಲ್ಲ.
ಆದರೆ ಚವಾಣ್ರಂತೆ ಕೋಟಿಕೋಟಿ ರೂಪಾಯಿಗಳ ಆಸ್ತಿಯ ಮೋಹಕ್ಕೆ ಬೀಳದೆ ತನ್ನೆಲ್ಲ ವಿದ್ಯೆ ಮತ್ತು ಕಾಳಜಿಯನ್ನು ಬಡವರಲ್ಲೇ ಅತಿ ಬಡವರಾದ ಆದಿವಾಸಿಗಳ ಉದ್ಧಾರಕ್ಕಾಗಿ ಮುಡಿಪಾಗಿಟ್ಟಿದ್ದ ಬಿನಾಯಕ್ ಸೇನ್ ಅವರಿಗೆ ಜೀವಾವಧಿ ಶಿಕ್ಷೆಯನ್ನು ನಮ್ಮ ವ್ಯವಸ್ಥೆ ವಿಧಿಸುತ್ತದೆ.
ಇತ್ತೀಚೆಗೆ ಬಹಳ ಸುದ್ದಿ ಮಾಡಿದ ಮತ್ತೊಂದು ಹಗರಣ ಕಾಮನ್ವೆಲ್ತ್ ಕ್ರೀಡಾಕೂಟದ್ದು. ಅದರಲ್ಲಿ ಕ್ರೀಡೆಯನ್ನು ಪ್ರೋತ್ಸಾಹಿಸುವ ನೆಪದಲ್ಲಿ ಕೋಟ್ಯಂತರ ರೂಪಾಯಿಗಳನ್ನು ಕದಿಯಲಾಗಿತ್ತು. ಆ ಹಗರಣದ ಕೇಂದ್ರ ಬಿಂದುವಾದ ಸುರೇಶ್ ಕಲ್ಮಾಡಿಯನ್ನು ಇವತ್ತಿಗೂ ವಿಚಾರಣೆಗೆ ಒಳಪಡಿಸಿಲ್ಲ. ಅದಕ್ಕಿಂತ ಮುಖ್ಯವಾಗಿ ಈ ಹಗರಣದ ಪ್ರಮುಖ ದಾಖಲೆಗಳೇ ನಾಪತ್ತೆ ಆಗುವಂತೆ ಮಾಡುವ ಮೂಲಕ ಕಲ್ಮಾಡಿ ಮತ್ತಾತನ ಕಳ್ಳರ ಗ್ಯಾಂಗಿಗೆ ಯಾವ ಸಮಸ್ಯೆಯೂ ಎದುರಾಗದಂತೆ ನೋಡಿಕೊಳ್ಳಲಾಗಿದೆ.
ಆದರೆ ಬಿನಾಯಕ್ ಅವರ ಕೇಸ್ನಲ್ಲಿ ಆದದ್ದೇನು? ಪೊಲೀಸರೇ ಸೃಷ್ಟಿಸಿದ ಖೊಟ್ಟಿ ದಾಖಲೆಗಳನ್ನಾಧರಿಸಿದ ನ್ಯಾಯಾಲಯ ಸೇನ್ ಅವರು ತಮ್ಮ ಬದುಕಿನ ಉಳಿದ ಕಾಲವನ್ನು ಜೈಲಿನಲ್ಲೇ ಕಳೆಯಬೇಕೆಂದು ತೀಪರ್ು ನೀಡುತ್ತದೆ!
ಈಗ ಎಲ್ಲರ ಗಮನ ಇರುವುದು 1.76 ಸಾವಿರ ಕೋಟಿ 2-ಜಿ ಸ್ಪೆಕ್ಟ್ರಮ್ ಹಗರಣದ ಮೇಲೆ. ಎಲ್ಲರಿಗೂ ಗೊತ್ತಿರುವಂತೆ ಈ ಹಗರಣದ ಪ್ರಮುಖ ರುವಾರಿಗಳು ಮಾಜಿ ಮಂತ್ರಿ ಎ. ರಾಜಾ ಮತ್ತು ಸಂಶಯಾಸ್ಪದ ವ್ಯಕ್ತಿಯಾದ ನೀರಾ ರಾಡಿಯಾ.
ಮೊದಲಿಗೆ ರಾಜಾನ ವಿಷಯದಲ್ಲಿ ಏನಾಯಿತು ಎಂದು ನೋಡೋಣ. 2ಜಿ ಸ್ಪೆಕ್ಟ್ರಮ್ ಹಗರಣ ಬೆಳಕಿಗೆ ಬಂದ ಹಲವಾರು ದಿನಗಳ ನಂತರ ಆತನಿಂದ ರಾಜೀನಾಮೆಯನ್ನು ಪಡೆಯಲಾಯಿತು. ಅದಾದ ಅದೆಷ್ಟೋ ದಿನಗಳ ನಂತರ ಆತನ ಮತ್ತು ಆತನ ಹತ್ತಿರದವರ ಮನೆ-ಆಫೀಸುಗಳ ಮೇಲೆ ರೇಡ್ಗಳನ್ನು ನಡೆಸಲಾಯಿತು. ಅಂದರೆ ಇಂಥ ದ್ದೊಂದು ರೇಡ್ ನಡೆಯುವ ಸಾಧ್ಯತೆ ಬಗ್ಗೆ ರಾಜಾ ಮತ್ತಾತನ ಸಂಗಡಿಗರಿಗೆ ಮೊದಲೇ ಸುಳಿವು ಸಿಕ್ಕಿತ್ತು. ಇಷ್ಟಾದ ಮೇಲೂ ಸಿಕ್ಕಿಹಾಕಿಕೊಳ್ಳುವಂತಹ ದಾಖಲೆಗಳನ್ನು ಅವರೆಲ್ಲ ಇನ್ನೂ ತಮ್ಮ ಬಳಿಯೇ ಇಟ್ಟ್ಟುಕೊಂಡಿರುವ ಸಾಧ್ಯತೆಯೇ ಇರಲಿಲ್ಲ. ಅಂದರೆ ದೇಶದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂಪಾಯಿ ವಂಚಿಸಿದ ರಾಜಾನಿಗೆ ವಿಧಿಸಲಾದ `ಶಿಕ್ಷೆ' ಆತ ತನ್ನ ಹುದ್ದೆಯಿಂದ ಕೆಳಗಿಳಿದಿದ್ದು ಅಷ್ಟೇ. ಇಲ್ಲಿ ಸ್ಪಷ್ಟವಾಗಿ ಕಾಣಿಸುವುದು ಆತನ ಮೇಲೆ ಆದ ರೇಡ್ ಜನರನ್ನು ಮೋಸಗೊಳಿಸುವ, ಆತನ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ತೋರುವ ಒಂದು ಕಪಟ ನಾಟಕ ಎಂಬುದು.
ಇದನ್ನು ಬಿನಾಯಕ್ ಸೇನ್ ಅವರ ಮೇಲಾದ ರೇಡಿಗೆ ಹೋಲಿಸಿ ನೋಡಿ. ಸೇನ್ ಅವರ ಮನೆ ಮೇಲಾದ ರೇಡ್ ಸಂದರ್ಭದಲ್ಲಿ ಒಂದು ಕಂಪ್ಯೂಟರ್ ಅನ್ನು ಪೊಲೀಸರು ವಶಪಡಿಸಿಕೊಂಡರು. ಆ ಕಂಪ್ಯೂಟರ್ಅನ್ನು ಪರಿಶೀಲಿಸಿದಾಗ ಸೇನ್ ಅವರ ಪತ್ನಿ ಇಳಿನಾ ಅವರು ಐಎಸ್ಐ ಎಂಬ ಸಂಸ್ಥೆಗೆ ಒಂದು ಈ-ಮೇಲ್ ಕಳುಹಿಸಿದ್ದು ಪತ್ತೆಯಾಯಿತು. ಹಾಗೆಯೇ ಯಾರೋ ಒಬ್ಬರು ಸೇನ್ ಅವರನ್ನು `ಕಾಮ್ರೆಡ್' ಎಂದು ಉದ್ದೇಶಿಸಿ ಬರೆದಿದ್ದ ಪತ್ರವೂ ಸಿಕ್ಕಿತು. ವಾಸ್ತವವಾಗಿ ಇಳಿನಾ ಅವರು ಪತ್ರ ಬರೆದಿದ್ದು ದೆಹಲಿಯಲ್ಲಿರುವ ಇಂಡಿಯನ್ ಸೋಷಿಯಲ್ ಇನ್  ಸ್ಟಿಟ್ಯೂಟ್ (ಐಎಸ್ಐ) ಎಂಬ ಸಂಸ್ಥೆಗೆ. ಆದರೆ ಛತ್ತೀಸಗಡದ ಸಕರ್ಾರಿ ವಕೀಲರು ಇಳಿನಾ ಅವರು ಪಾಕಿಸ್ತಾನದ ಗೂಢಚಯರ್ೆ ಸಂಘಟನೆಯಾದ ಐಎಸ್ಐಗೆ ಪತ್ರ ಬರೆದಿದ್ದರು ಎಂದೇ ವಾದಿಸಿದರು. ಅಷ್ಟೇ ಅಲ್ಲ, ಮಾವೋವಾದಿ ನಕ್ಸಲರು ಪರಸ್ಪರರನ್ನು `ಕಾಮ್ರೆಡ್' ಎಂದು ಕರೆಯುವುದರಿಂದ ಸೇನ್ ಅವರು ಮಾವೋವಾದಿ ಸಂಘಟನೆಗೆ ಸೇರಿದ್ದಾರೆ ಎಂದೂ ನ್ಯಾಯಾಲಯದಲ್ಲಿ ವಾದಿಸಿದರು. ವಾಸ್ತವವಾಗಿ ಸಿಪಿಎಂ, ಸಿಪಿಐ ಸೇರಿದಂತೆ ಬಹಳಷ್ಟು ಕಮ್ಯುನಿಸ್ಟ್ ಪಕ್ಷಗಳಲ್ಲೂ ಪರಸ್ಪರರನ್ನು ಕಾಮ್ರೆಡ್ ಎಂದೇ ಕರೆಯುತ್ತಾರೆ.
ಇನ್ನು ನೀರಾ ರಾಡಿಯಾಳೊಂದಿಗೆ ನಮ್ಮ ಸಕರ್ಾರ ಮತ್ತು ತನಿಖಾ ಸಂಸ್ಥೆಗಳು ನಡೆದುಕೊಂಡಿರುವ ರೀತಿಯನ್ನೇ ನೋಡಿ. ಹೇಳಿಕೇಳಿ ರಾಡಿಯಾ ರಾಜಕಾರಣಿಗಳನ್ನು, ಪತ್ರಕರ್ತರನ್ನು ಮತ್ತು ಅಧಿಕಾರಿಗಳನ್ನು ತನಗೆ ಬೇಕಾದ ರೀತಿಯಲ್ಲಿ ಬಳಸಿಕೊಂಡು ರತನ್ ಟಾಟಾ ಮತ್ತು ಮುಖೇಶ್ ಅಂಬಾನಿ ತರಹದ ಉದ್ಯಮಿಗಳಿಗೆ ನೆರವಾದಳಲ್ಲದೆ, ಆ ಪ್ರಕ್ರಿಯೆ ಯಲ್ಲಿ ತಾನೂ ಕೋಟ್ಯಂತರ ರೂಪಾಯಿಗಳನ್ನು ಗಳಿಸಿದಳು. ಈಕೆ ಬ್ಲಾಕ್ ಮನಿ ಮಾಡಿದ್ದಾಳೆಂದೂ, ಹವಾಲ ದಂಧೆಯಲ್ಲಿ ಸಕ್ರಿಯಳಾಗಿದ್ದಾಳೆಂದು ರಾಡಿಯಾ ವಿರುದ್ಧ ಆರೋಪಗಳಿವೆ. ಇಂತಹ ರಾಡಿಯಾಳನ್ನು ತನಿಖಾಧಿಕಾರಿಗಳು ತಮ್ಮ ಕಚೇರಿಗೆ ಕರೆಸಿಕೊಂಡು, ಇನ್ನೊಮ್ಮೆ ಆಕೆಯ ಭವ್ಯ ಫಾಮರ್್ ಹೌಸಿಗೆ ಹೋಗಿ ಆಕೆಯ `ವಿಚಾರಣೆ'  ನಡೆಸುತ್ತಾರೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಗೇಲಿಗೀಡು ಮಾಡಿದ ರಾಡಿಯಾ ಜೈಲನ್ನು ನೋಡುವುದಿರಲಿ, ಪೊಲೀಸ್ ಠಾಣೆಯ ಹೊಸ್ತಿಲನ್ನು ದಾಟದಂತೆ ನೋಡಿಕೊಳ್ಳಲಾಗುತ್ತಿದೆ.
ಹೀಗೆ ಅಶೋಕ್ ಚವಾಣ್, ಸುರೇಶ್ ಕಲ್ಮಾಡಿ ಮತ್ತು ಎ. ರಾಜಾ ತರಹದ ಚುನಾಯಿತ `ಜನ ನಾಯಕರು' ಕ್ರಿಮಿನಲ್ ಕೃತ್ಯಗಳಲ್ಲಿ ಸಿಕ್ಕಿಬಿದ್ದಿದ್ದರೂ ಅವರ ತಲೆ ಮೇಲಿನ ಒಂದು ಕೂದಲೂ ಅಲುಗಾಡದಂತೆ ನಮ್ಮ ಪ್ರಜಾಪ್ರಭುತ್ವ ಅವರನ್ನೆಲ್ಲಾ ಕಾಪಾಡುತ್ತದೆ. ಆದರೆ ಎಲ್ಲ ರೀತಿಯಲ್ಲೂ ಜನಸೇವಕರಾದ ಬಿನಾಯಕ್ ಸೇನ್ರಂತಹ ನಿರಪರಾಧಿಗಳ ಮೇಲೆ ಕಪೋಲಕಲ್ಪಿತ ಆರೋಪಗಳನ್ನು ಹೊರಿಸಿ ಅವರನ್ನು ಜೈಲಿಗಟ್ಟುತ್ತದೆ.
ಪ್ರಜಾಪ್ರಭುತ್ವದ ಎಲ್ಲಾ ಸ್ತಂಭಗಳನ್ನು ತನ್ನ ಲಾಭಕ್ಕಾಗಿ ಉಪಯೋಗಿಸಿಕೊಂಡ ನೀರಾ ರಾಡಿಯಾ ಇವತ್ತು ಈ ದೇಶ ಕಂಡ ಅತಿದೊಡ್ಡ ಹಗರಣದ ಕೇಂದ್ರಬಿಂದುವಾಗಿದ್ದರೂ ಆಕೆಯೊಂದಿಗಿನ ತಮ್ಮ ಸಂಪರ್ಕವನ್ನು ಟಾಟಾ ಮತ್ತು  ಅಂಬಾನಿಗಳು ಕಡಿದು ಹಾಕುವುದಿಲ್ಲ. ಬದಲಾಗಿ ರಾಡಿಯಾಳೊಂದಿಗೆ ನಂಟಿದ್ದರೆ ತಮಗೆ ಲಾಭ ಗ್ಯಾರಂಟಿ ಎಂಬ ಭಾವನೆಯೇ ಹೆಚ್ಚಾಗುತ್ತಿದೆ. ಕಳೆದ ಒಂದು ತಿಂಗಳಲ್ಲೇ ರಾಡಿಯಾಳ ಪಬ್ಲಿಕ್ ರಿಲೇಷನ್ಸ್ ಕಂಪನಿಗೆ ಮೂರು ಹೊಸ ಕ್ಲೈಂಟ್ಗಳು ಸಿಕ್ಕಿರುವುದೇ ಅಂತಹ ಧೋರಣೆಗೆ ಸಾಕ್ಷಿಯಾಗಿದೆ.
ಆದರೆ ಬಿನಾಯಕ್ ಸೇನ್ ಅವರ ಬದುಕಿಗೆ, ಆಶಯಗಳಿಗೆ ಏನಾಗಿದೆ ನೋಡಿ. ಅವರನ್ನು ಅಕ್ರಮವಾಗಿ ಬಂಧಿಸಿದ್ದರಿಂದ ಅವರು ಬಡ ಆದಿವಾಸಿ ಗಳಿಗೆ ನಡೆಸುತ್ತಿದ್ದ ಕ್ಲಿನಿಕ್ ಬಂದ್ ಆಗಿದ್ದು ಅಲ್ಲಿನ ಜನರಿಗೆ ದಿಕ್ಕು ತೋಚದಂತಾಗಿದೆ. ಈಗ ಅವರಿಗೆ ನೀಡಲಾಗಿರುವ ಜೀವಾವಧಿ ಶಿಕ್ಷೆಯ ವಿರುದ್ಧ ನ್ಯಾಯಾಲಯಗಳ ಮುಂದೆ ಹೋರಾಡಿ ಅದರಿಂದ ಮುಕ್ತಿ ಪಡೆಯುವ ಹೊತ್ತಿಗೆ ಅವರ ಎಲ್ಲಾ ಜೀವನೋತ್ಸಾಹ ಕಮರಿಹೋಗುವ ಸಾಧ್ಯತೆಗಳಿವೆ.
ಹೀಗೆ ನಮ್ಮ ದೇಶದ ಜನರನ್ನೇ ಸುಲಿಗೆ ಮಾಡಿದ ಕ್ರಿಮಿನಲ್ಗಳು ಸುರಕ್ಷಿತರಾಗಿರುವಾಗ, ಇದೇ ದೇಶದ ಬಡಜನರಿಗಾಗಿ  ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದ ಸೇನ್ರಂತಹ ಅಮಾಯಕರು ಕಂಬಿ ಎಣಿಸಬೇಕಿದೆ.
ಅಂದಹಾಗೆ, ಇವತ್ತು ಸೇನ್ ಪರವಾಗಿ ದೇಶದಾದ್ಯಂತ ಎಲ್ಲಾ ಜನಪರ ಹೋರಾಟಗಾರರು ದನಿ ಎತ್ತುತ್ತಿದ್ದರೂ ನಮ್ಮ ಎಲ್ಲಾ ರಾಜಕೀಯ ಪಕ್ಷಗಳೂ-ಕಮ್ಯುನಿಸ್ಟ್ ಪಕ್ಷಗಳೂ ಸೇರಿದಂತೆ-ಅವರ ಅಕ್ರಮ ಬಂಧನದ ಬಗ್ಗೆ ತುಟಿಪಿಟಿಕ್ ಎಂದಿಲ್ಲ. ಅದಕ್ಕೆ ಕಾರಣ ಇವತ್ತು ಎಲ್ಲ ಪಕ್ಷಗಳೂ ಜನದ್ರೋಹಿ ಪಕ್ಷಗಳಾಗಿರುವುದು. ದೇಶದ ಸುಲಿಗೆಯನ್ನು ತಮ್ಮ ಮುಖ್ಯ ದಂಧೆಯನ್ನಾಗಿಸಿಕೊಂಡಿರುವ  ನಮ್ಮ ರಾಜಕೀಯ ಪಕ್ಷಗಳು ಇವತ್ತು ಎಲ್ಲ ರೀತಿಯಲ್ಲೂ ದೇಶದ್ರೋಹಿ ಪಕ್ಷಗಳಾಗಿವೆ.
ಇದು ನಮ್ಮ ಬೃಹತ್ ಪ್ರಜಾಪ್ರಭುತ್ವದ ಅಸಲಿ ಮುಖ.

No comments:

Post a Comment