January 1, 2011

ಜೈ ಬಿನಾಯಕ್ ಸೇನ್ ತೀರ್ಪಿಗೆ ಜೈ!

ಜೈ
ಬಿನಾಯಕ್ ಸೇನ್ ತೀರ್ಪಿಗೆ ಜೈ!
ನಮ್ಮ ದೇಶವನ್ನು ರಕ್ಷಿಸಲಾಗಿದೆ
ಆತನಿಗೆ ಜೀವಾವಧಿ ಶಿಕ್ಷೆಯನ್ನು ನೀಡುವ ಮೂಲಕ.

ವೀರಚರಿತ್ರೆಗಳ ಈ ಪುರಾತನ ಪುಣ್ಯ ಭೂಮಿಯಲ್ಲಿ
ಬದುಕಿದ್ದ ಆ ಪಾತಕಿಗೆ
ಮರಣದಂಡನೆಯನ್ನೇ ನೀಡಬೇಕಿತ್ತು

ಇದು
ಹರಿಶ್ಚಂದ್ರರ ತಾಯಿನಾಡು,
ಭ್ರಷ್ಟಾಚಾರರಹಿತ ಭೂಮಿ,
ಬಡತನವೆಂಬುದೇ ಇರದ ದೇಶ,
ಅಣ್ಣ-ಅಕ್ಕಂದಿರ ವಿಶಿಷ್ಟ ರಾಷ್ಟ್ರ,
ಅಪಾರ ಸ್ವಾತಂತ್ರ್ಯಗಳಿರುವ ದೇವಗಿರಿ,
ಜಾತಿ/ಧರ್ಮ ಎಂಬ ಭೇದಭಾವಗಳಿರದ ಪವಿತ್ರ ಭೂಮಿ....
ಇಂತಹ ದೇಶವನ್ನು ಛಿದ್ರಗೊಳಿಸಲು
ಆತ ಸಂಚು ಹೂಡಿದ್ದ....

ಅಂಥವನಿಗೆ ಜೀವಾವಧಿ ಶಿಕ್ಷೆ
ನೀಡಿರುವ ನಮ್ಮ
ಪ್ರಜಾಪ್ರಭುತ್ವ ಮತ್ತು ನ್ಯಾಯಾಲಯಕ್ಕೆ
ಜೈ!

ಇಂಗ್ಲಿಷ್ ಮೂಲ: ಸಾಬು ಶಣ್ಮುಗಂ
ಕನ್ನಡಕ್ಕೆ: ಸಾವಂತ್ರಿ

1 comment:

  1. ಪ್ರಿತಿಯ ಗೌರಿಯವರೇ,
    ಕುಳಿತಲ್ಲಿಂದಲೇ ಲೋಕದ ನಿಜ ಕಾಣುವಂತಾಯಿತು.
    ನಿಮ್ಮ ಅಪ್ಪ ಇರುತ್ತಿದ್ದರೆ ಸಂತಸಪಡುತ್ತಿದ್ದರು.
    -ಬೊಳುವಾರು

    ReplyDelete