January 1, 2011

ಶೈಕ್ಷಣಿಕ ಪ್ರಗತಿಗೆ ಮಲ್ಪೆ ಪೊಲೀಸರ ಕೊಡುಗೆಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಹಲವು ಪೊಲೀಸು ಠಾಣೆಗಳು ಈಗ ಸಂಘಪರಿವಾರದ ನಿಯಂತ್ರಣದಲ್ಲಿವೆ. ಯಾರ ಮೇಲೆ ಕೇಸು ದಾಖಲಿಸಿಕೊಳ್ಳಬೇಕು ಎಂಬುದರಿಂದ ಹಿಡಿದು, ಕ್ರಿಮಿನಲ್ ಕಾಯ್ದೆಯ ಯಾವ ಕಲಮುಗಳ ಅಡಿ ಅವರ ಮೇಲೆ ಕೇಸು ಜಡಿಯಬೇಕು ಎಂಬುದರವರೆಗೆ, ಪೊಲೀಸರು ಈಗ ಪಾಲಿಸುವುದು ಸಂಘಪರಿವಾರದ ಆಜ್ಞೆಗಳನ್ನೇ ಹೊರತು ದೇಶದ ಕಾನೂನ್ನಲ್ಲ. ಜನರನ್ನು ವಿನಾಕಾರಣ ಪೀಡಿಸುವ ತಮ್ಮ ಲಾಗಾಯ್ತಿನ ಚಾಳಿಯ ಜೊತೆಗೆ ಈಗ
ಕರಾವಳಿಯ ಪೊಲೀಸರು ಪೊಲೀಸು ಠಾಣೆಗಳನ್ನು `ಹಿಂದೂತ್ವ'ದ ಹೊಸ ಹೊಸ ಪ್ರಯೋಗಗಳಿಗೆ ತಕ್ಕುದಾದ ಪ್ರಯೋಗಶಾಲೆಯಾಗಿ ಸಜ್ಜುಗೊಳಿಸುವ ಕೈಂಕರ್ಯದಲ್ಲೂ ನಿಪುಣರಾಗತೊಡಗಿದ್ದಾರೆ. ಈ ವಿಷಯದಲ್ಲಿ ಉಡುಪಿ ಜಿಲ್ಲೆಯ ಹಲವು ಪೊಲೀಸು ಠಾಣೆಗಳ ನಡುವೆ ಭಾರಿ ಪೈಪೋಟಿ ಇರುವಂತಿದೆ; ಇತ್ತೀಚೆಗೆ ಉಡುಪಿಯ ಮಲ್ಪೆ ಠಾಣೆಯ ಪೊಲೀಸರು ಇಂಥ ಪ್ರಯೋಗ ವೊಂದನ್ನು ಕ್ಷಿಪ್ರಗತಿಯಲ್ಲಿ ಯಶಸ್ವಿಗೊಳಿಸಿ, ಮಿಕ್ಕವರಿಗಿಂತ ಒಂದು ಗಜ ಮುಂದೋಡಿದ್ದಾರೆ. ಇವರ ಸ್ಪಧರ್ೆಯ ಉತ್ಸಾಹಕ್ಕೆ ಬಲಿಯಾಗಿರುವವರು ಉಡುಪಿಯ ಖ್ಯಾತ ಕ್ರೈಸ್ತ ಶಿಕ್ಷಣ ಸಂಸ್ಥೆಗೆ ಸೇರಿದ ಶಾಲೆಯ ಶಿಕ್ಷಕಿ ಮತ್ತು ಮುಖ್ಯೋಪಾಧ್ಯಾಯರು ಸ್ಪೆಷಲ್ ಕ್ಲಾಸಿಗೆ ಚಕ್ಕರ್ ಹೊಡೆದ ದಲಿತ ವಿದ್ಯಾಥರ್ಿಗೆ ಏಟು ಕೊಟ್ಟರು ಎಂಬ ಕಾರಣಕ್ಕೆ ಮಲ್ಪೆ ಠಾಣೆಯ ಪೊಲೀಸರು, ಹಿಂದೂತ್ವವಾದಿಗಳ ನಿದರ್ೆಶನದಲ್ಲಿ, ಈ ಶಿಕ್ಷಕರ ಮೇಲೆ ದೂರು ದಾಖಲಿಸಿಕೊಂಡು, ಧರ್ಮನಿಂದನೆ, ದೈಹಿಕ ಹಿಂಸೆಗಳಿಗೆ ಸಂಬಂಧಿಸಿದ ಅತ್ಯಂತ ಕಠಿಣ ಕಲಮ್ಮುಗಳ ಅಡಿಯಲ್ಲಿ ಕೇಸು ಹಾಕಿ, ಕೋಟರ್ಿಗೆ ಹಾಜರುಪಡಿಸಿ, ಮಿಸುಕಾಡದ ಹಾಗೆ ಕ್ರಿಮಿನಲ್ ಮೊಕದ್ದಮೆಯಲ್ಲಿ ಸಿಕ್ಕಿಸಿದ್ದಾರೆ.
ಉಡುಪಿಯ ಸಮೀಪದ ಕಲ್ಯಾಣಪುರದ ಮಿಲಾಗ್ರೆಸ್ ಶಿಕ್ಷಣ ಸಂಸ್ಥೆಗಳಿಗೆ ನೂರು ವರ್ಷಗಳನ್ನೂ ಮೀರಿದ ಚರಿತ್ರೆ ಇದೆ. ಈ ಸಂಸ್ಥೆಗಳನ್ನು ನಡೆಸುವ, 400 ವರ್ಷಗಳ ಹಿಂದೆ ಸ್ಥಾಪಿತವಾದ, ಮಿಲಾಗ್ರೆಸ್ ಚಚರ್್ ಕನರ್ಾಟಕದ ಅತ್ಯಂತ ಪ್ರಾಚೀನ ಚಚರ್ುಗಳಲ್ಲಿ ಒಂದು. ಕಲ್ಯಾಣಪುರದ ಮಿಲಾಗ್ರೆಸ್ ಹೈಸ್ಕೂಲ್ ಸಹ 79 ವರ್ಷಗಳಷ್ಟು ಹಳೆಯದು. ಕರಾವಳಿಯ ಇತರ ಕ್ರೈಸ್ತ ಸಂಸ್ಥೆಗಳ ಹಾಗೆ ಕಲ್ಯಾಣಪುರದ ಮಿಲಾಗ್ರೆಸ್ ಸಂಸ್ಥೆಗಳೂ ಸಹ ತಮ್ಮ ನಿಷ್ಕಳಂಕ ಸೇವೆಯಿಂದ, ಇಲ್ಲಿನ ಎಲ್ಲ ಜಾತಿ, ಮತ, ಪಂಥಗಳವರ ಪ್ರೀತಿ, ಗೌರವಗಳನ್ನು ಗಳಿಸಿಕೊಂಡಿವೆ. ಉಡುಪಿಯ ಖ್ಯಾತ ಸಂಶೋಧಕರಾದ ಗುರುರಾಜ ಭಟ್ಟರಂತಹವರ ಮುಖ್ಯಸ್ಥಿಕೆಯಲ್ಲಿ, ವಿದ್ಯಾಥರ್ಿಗಳಲ್ಲಿ ಹೊಸ ಬಗೆಯ ವಿಚಾರಗಳನ್ನು ಹುಟ್ಟುಹಾಕುವ ಕೆ.ಎಸ್.ಕೆದ್ಲಾಯರಂಥ ಶಿಕ್ಷಕರ ಕಾರ್ಯಶೀಲತೆಯಲ್ಲಿ ಬೆಳೆದ ಸಂಸ್ಥೆಗಳಿವು. ಹಿಂದುಳಿದ ಜಾತಿಯ ವಿದ್ಯಾಥರ್ಿಗಳ ಶೈಕ್ಷಣಿಕ, ಔದ್ಯೋಗಿಕ ಮತ್ತು ವೈಚಾರಿಕ ಬೆಳವಣಿಗೆಗಳನ್ನು ಪ್ರೋತ್ಸಾಹಿಸುವ ಸಲುವಾಗಿಯೇ ಇರುವ ಎಸ್.ಸಿ.-ಎಸ್.ಟಿ. ಸೆಲ್, ಜಿಲ್ಲೆಯ ಇತರ ಶಿಕ್ಷಣ ಸಂಸ್ಥೆಗಳಿಗಿಂತ ಹೆಚ್ಚು ಚುರುಕಿನಿಂದ ಮಿಲಾಗ್ರೆಸ್ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದನ್ನು ನಾವು ಕಂಡಿದ್ದೇವೆ. ಹೀಗಿರುತ್ತ, ಇದೇ ಡಿಸೆಂಬರ್ 14ರಂದು, ಕಲ್ಯಾಣಪುರ ಮಿಲಾಗ್ರೆಸ್ ಹೈಸ್ಕೂಲಿನ 8ನೇ ತರಗತಿಯ ಇಂಗ್ಲಿಷ್ ಸ್ಪೆಷಲ್ ಕ್ಲಾಸುಗಳಿಗೆ ಸತತ ಗೈರುಹಾಜರಾಗುತ್ತಿದ್ದ ಆಕಾಶ್ ಎಂಬ ದಲಿತ ಹಾಗು ಇಬ್ಬರು ಕ್ರಿಶ್ಚಿಯನ್ ಹುಡುಗರು ಸೇರಿದಂತೆ ಒಟ್ಟು 8 ವಿದ್ಯಾಥರ್ಿಗಳಿಗೆ ಮುಖ್ಯೋಪಾಧ್ಯಾಯರ ಅನುಮತಿ ಪಡೆದು ಕ್ಲಾಸಿಗೆ ಬರುವಂತೆ ಇಂಗ್ಲಿಷ್ ಶಿಕ್ಷಕರು ತಿಳಿಸಿದರು. ಈ 8 ಜನ ವಿದ್ಯಾಥರ್ಿಗಳು ಆ ಕಾರಣಕ್ಕೆ ಮುಖ್ಯೋಪಾಧ್ಯಾಯರಾದ ಪೌಲ್ ಲೋಬೊ ಅವರ ಕೊಠಡಿಗೆ ಹೋದಾಗ ಅವರು ವಿದ್ಯಾಥರ್ಿಗಳಿಗೆ ದಬಾಯಿಸಿ, ಒಂದೊಂದು ಏಟು ಕೊಟ್ಟಿದ್ದಾರೆ. ಆ ವಿದ್ಯಾಥರ್ಿಗಳು ಮುಂದೆ ತಾವು ಕ್ಲಾಸು ತಪ್ಪಿಸುವುದಿಲ್ಲ ಎಂದು ಮುಖ್ಯೋಪಾಧ್ಯಾಯರಲ್ಲಿ ವಿನಂತಿಸಿಕೊಂಡು ಹೋಗಿದ್ದಾರೆ. ಲೋಬೊ ಈ ಹುಡುಗರಿಗೆ ಕೊಟ್ಟ ಏಟು ಯಾವ ದೃಷ್ಟಿಯಿಂದಲೂ ಗಂಭೀರ ಸ್ವರೂಪದ್ದಾಗಿರಲಿಲ್ಲವಾದರೂ ಮಕ್ಕಳಿಗೆ ಏಟು ಕೊಡುವುದು ತಪ್ಪೆಂದೇ ಇಟ್ಟುಕೊಳ್ಳೋಣ. ಆದರೆ, ವಿದ್ಯಾಥರ್ಿಗಳನ್ನು ದಾರಿಗೆ ತರುವ ಲಾಗಾಯ್ತಿನ ಈ ಪದ್ಧತಿ ಮಿಲಾಗ್ರೆಸ್ ಹೈಸ್ಕೂಲಿನಲ್ಲಿ ಮಾತ್ರ ಚಾಲ್ತಿಯಲ್ಲಿರುವುದೇನೂ ಅಲ್ಲ; ಇದು ವಿದ್ಯಾಥರ್ಿಗಳಿಗೆ ಬುದ್ಧಿ ಹೇಳುವ ಪರಿಣಾಮಕಾರಿ ವಿಧಾನವೆಂದೇ ಬಹುತೇಕ ಶಿಕ್ಷಕರು ಭಾವಿಸುತ್ತಾರೆ. ಕಲಿಕೆಯ ವಾತಾವರಣದ ಬಗೆಗಿನ ವಿವೇಚನೆಯಲ್ಲಿ ಈ ನಮೂನೆಯ `ಬುದ್ಧಿ ಹೇಳುವ' ಪದ್ಧತಿಯನ್ನು ಇಲ್ಲವಾಗಿಸುವ ವಿಧಾನಗಳ ಬಗ್ಗೆ ಸಾಕಾಷ್ಟು ಚಚರ್ೆಗಳು ನಡೆಯುತ್ತಿವೆ. ಆದರೆ, ಮಲ್ಪೆ ಠಾಣೆಯ ಪೊಲೀಸರು ಸಂಶೋಧಿಸಿರುವ `ಕ್ರಾಂತಿಕಾರಿ ವಿಧಾನ' ಕಂಡು ಶಿಕ್ಷಣ ತಜ್ಞರು ದಂಗಾಗಿ ಮೂಛರ್ೆ ಹೋಗುವುದು ಗ್ಯಾರಂಟಿ.
ಈ ಘಟನೆಯನ್ನು ವಿದ್ಯಾಥರ್ಿಗಳು ಮರೆತಿದ್ದರೂ, ಘಟನೆ ನಡೆದ ಬರೋಬ್ಬರಿ 8 ದಿನಗಳ ನಂತರ, ಡಿಸೆಂಬರ್ 22 ರಂದು, ಸ್ಥಳೀಯ ಹಿಂದೂತ್ವ ಸಂಘಟನೆಗಳು ಒಂದಷ್ಟು ಜನರನ್ನು ಸೇರಿಸಿ ಮಲ್ಪೆ ಠಾಣೆ ಎದುರು ಮತಪ್ರದರ್ಶನ ನಡೆಸಿದರು. ಏಟು ತಿಂದ ದಲಿತ ವಿದ್ಯಾಥರ್ಿ ಆಕಾಶ್ ಅಯ್ಯಪ್ಪ ವ್ರತಧಾರಿಯಾಗಿದ್ದು, ಶಾಲಾ ಮುಖ್ಯೋಪಾಧ್ಯಾಯರು ಅವನನ್ನು ಥಳಿಸುವುದರ ಜೊತೆ ಧರ್ಮನಿಂದನೆಯನ್ನೂ ಮಾಡಿದ್ದಾರೆಂದೂ, ಆಕಾಶನ ಕ್ಲಾಸ್ ಟೀಚರ್ ಮಾಸರ್ೆಲಿನ್ ಸೆರಾ ಕೂಡ ಅವನ ಜಾತಿ-ಮತ ಹಿಡಿದು ನಿಂದಿಸಿದ್ದಾರೆಂದೂ, ಈ ಹಿಂದೆಯೂ ಆ ಸಂಸ್ಥೆಯಲ್ಲಿ ಇಂತಹದ್ದು ನಡೆದಿದೆ ಎಂದೂ ಆರೋಪಿಸಿದವು. ಇದರ ಜೊತೆ ಹಿಂದೂತ್ವ ಸಂಘಟನೆಗಳು ಆಕಾಶನ ತಂದೆಯನ್ನು ಒತ್ತಾಯಿಸಿ ದೂರುಕೊಡಿಸಿದ್ದಲ್ಲದೆ, ಸ್ಥಳೀಯ ದೊಣ್ಣೆನಾಯಕ ಪ್ರಕಾಶ್ ಸಹ ಒಂದು ದೂರನ್ನು ಮಲ್ಪೆ ಪೊಲೀಸು ಠಾಣೆಗೆ ಕೊಟ್ಟ. ಅದಕ್ಕೆ ಸರಿಯಾಗಿ ಮಲ್ಪೆಯ ಪೊಲೀಸರು ಎತ್ತು ಕರು ಹಾಕಿದೆ ಎಂದರೆ ಕೊಟ್ಟಿಗೆಯಲ್ಲಿ ಕಟ್ಟು ಎನ್ನುವ ಜಾಣರು! ಪೊಲೀಸರು ದೂರು ಸಿಕ್ಕಿದ್ದೇ ಮಿಲಾಗ್ರೆಸ್ ಹೈಸ್ಕೂಲಿಗೆ ಹೋಗಿ, ಸಂಸ್ಥೆಯ ಮುಖ್ಯಸ್ಥರ ಜೊತೆ ಮಾತುಕತೆ ನಡೆಸದೆ, ಪರವಾನಗಿಯನ್ನೂ ಪಡೆಯದೇ ಮುಖ್ಯೋಪಾಧ್ಯಾಯರಾದ ಪೌಲ್ ಲೋಬೊ ಅವರನ್ನು ಮಲ್ಪೆ ಠಾಣೆಗೆ ಕರೆ ತಂದರು. ಆಕಾಶನ ತಂದೆಯ ಜೊತೆ ರಾಜಿ ಮಾತುಕತೆ ನಡೆಸಿ ಪ್ರಕರಣವನ್ನು ಇತ್ಯರ್ಥ ಮಾಡುವುದಾಗಿ ನಂಬಿಸಿ ಲೋಬೊ ಅವರಿಂದ ತಪ್ಪೊಪ್ಪಿಗೆ ಪತ್ರವನ್ನೂ ಬರೆಸಿಕೊಂಡು, ಸಂಜೆ 5 ಗಂಟೆಯವರೆಗೂ ಠಾಣೆಯಲ್ಲಿ ಕೂರಿಸಿ, 5 ಗಂಟೆಗೆ ಲೋಬೊ ಅವರ ಮೇಲೆ ಐ.ಪಿ.ಸಿ.-295, 324, 504 ಹಾಗು ಮಾಸರ್ೆಲಿನ್ ಸೆರಾರ ಮೇಲೆ ಐ.ಪಿ.ಸಿ.-295 ಕಲಮುಗಳ ಅಡಿ ಎಫ್.ಐ.ಆರ್. ದಾಖಲಿಸಿದರು. ಅದೇ ಸಂಜೆ 6 ಗಂಟೆಗೆ ಪೌಲ್ ಲೋಬೊ ಅವರನ್ನು ಉಡುಪಿ ತಾಲೂಕು ಜ್ಯುಡಿಸಿಯಲ್ ಮ್ಯಾಜಿಸ್ಟ್ರೇಟರ (ಜೆ.ಎಮ್.ಎಫ್.ಸಿ) ಮುಂದೆ ಹಾಜರುಪಡಿಸಿ ತಮ್ಮ ಕಸ್ಟಡಿಗೂ ತೆಗೆದುಕೊಂಡು ಬಿಟ್ಟರು. ಲೋಬೊ ಅವರಿಗೆ ಜಾಮೀನು ಸಿಗಲು ಎರಡು ದಿನ ಹಿಡಿಯಿತು. ಸೆರಾ ಅವರು ಕೋಟರ್ಿಗೆ ಶರಣಾಗಿ ಜಾಮೀನು ಪಡೆಯಬೇಕಾಯ್ತು. ಈ ಇಬ್ಬರು ಶಿಕ್ಷಕರ ಮೇಲೆ ಎಂಥ ಕಲಮುಗಳಡಿ ಕೇಸು ಹಾಕಲಾಗಿದೆ ಎಂದು ಒಂದಿಷ್ಟು ಗಮನಿಸಿ:
ಐ.ಪಿ.ಸಿ. 295: ಯಾವುದೇ ಮತಕ್ಕೆ ಸೇರಿದ ಜನರ ಧಾಮರ್ಿಕ ಭಾವನೆಗಳನ್ನು ಘಾಸಿಗೊಳಿಸುವ ಉದ್ದೇಶದಿಂದಲೇ, ಪೂಜಾಸ್ಥಳವನ್ನು ಹಾನಿ ಯಾ ಅಪವಿತ್ರಗೊಳಿಸುವುದು. (2 ವರ್ಷಗಳ ವರೆಗಿನ ಸಜೆ/ದಂಡ ಅಥವ ಎರಡೂ).
ಐ.ಪಿ.ಸಿ. 295 ಎ: ಜನರ ಧಾಮರ್ಿಕ ಭಾವನೆಗಳನ್ನು ಕೆರಳಿಸುವ ಏಕೈಕ ಉದ್ದೇಶದಿಂದ, ಆ ಜನರ ಮತವನ್ನು - ಮಾತು, ಬರಹ ಅಥವ ಇನ್ನಾ ್ಯವುದೇ ಸನ್ನೆ, ಸಂಕೇತಗಳ ಮೂಲಕ- ಅವಮಾನಿಸುವ ಪ್ರಜ್ಞಾಪೂರ್ವಕ ದುಷ್ಕೃತ್ಯ. (3 ವರ್ಷಗಳ ವರೆಗಿನ ಸಜೆ/ದಂಡ ಅಥವ ಎರಡೂ).
ಐ.ಪಿ.ಸಿ. 324: ದೈಹಿಕವಾಗಿ ಘಾಸಿಗೊಳಿಸುವ ಉದ್ದೇಶದಿಂದ, ಸಾವಿಗೂ ಕಾರಣವಾಗಬಲ್ಲ ಮಾರಕಾಸ್ತ್ರಗಳನ್ನು (ಚಾಕು, ಕತ್ತಿ, ಬಂದೂಕು, ಬೆಂಕಿ/ಸುಡಬಲ್ಲ ರಾಸಾಯನಿಕಗಳು, ಕಾದ ವಸ್ತುಗಳು, ವಿಷ ಪದಾರ್ಥಗಳು, ರಕ್ತದಲ್ಲಿ ಸೇರುವ ಮೂಲಕ ಸಾವಿಗೆ ಕಾರಣವಾಗುವ ವಸ್ತುಗಳನ್ನು ಚುಚ್ಚುವುದು... ಇತ್ಯಾದಿ) ಬಳಸಿ ದೈಹಿಕ ಹಲ್ಲೆ ನಡೆಸುವುದು. (3 ವರ್ಷಗಳವರೆಗಿನ ಸಜೆ/ದಂಡ ಅಥವ ಎರಡೂ).
ಐ.ಪಿ.ಸಿ. 504: ಯಾವುದೇ ವ್ಯಕ್ತಿ ಅವಮಾನ ತಾಳಲಾರದೇ ಕೆರಳಿ ಶಾಂತಿಯನ್ನು ಕದಡುವ ಕೃತ್ಯಕ್ಕೆ ಕೈಹಾಕುತ್ತಾನೆ/ಹಾಕುತ್ತಾಳೆ ಎಂದು ಗೊತ್ತಿದ್ದೂ, ಅಂಥ ಕೃತ್ಯಕ್ಕೆ ಪ್ರಚೋದನೆ ನೀಡುವ ಏಕೈಕ ಉದ್ದೇಶದಿಂದ, ಆ ವ್ಯಕ್ತಿಯನ್ನು ಅವಮಾನಿಸುವ ಕೃತ್ಯ. ( 2 ವರ್ಷಗಳವರೆಗಿನ ಸಜೆ/ದಂಡ ಅಥವ ಎರಡೂ).
ವಿದ್ಯಾಥರ್ಿಯೊಬ್ಬನಿಗೆ ಮುಖ್ಯೋಪಾಧ್ಯಾಯರು ಒಂದು ಏಟು ಕೊಟ್ಟದ್ದಕ್ಕೆ ಕ್ರಿಮಿನಲ್ ಕಾಯ್ದೆಯ ಈ ಕಲಮುಗಳು! ಮಲ್ಪೆ ಪೊಲೀಸರ ಮೂರ್ಖತನ/ದೂರ್ತತನಕ್ಕೆ (ಆಯ್ಕೆ ನಿಮ್ಮದು!) ಇದಕ್ಕಿಂತ ಬೇರೆ ಉದಾಹರಣೆ ಬೇಕೆ?
ಈ ಪ್ರಕರಣದಲ್ಲಿ ಹಿಂದೂತ್ವ ಸಂಘಟನೆಗಳ ವರ್ತನೆಯಲ್ಲಿ ಆಶ್ಚರ್ಯಕರವಾದದ್ದು ಏನೂ ಇಲ್ಲ. ಕರಾವಳಿಯಲ್ಲಿ ಅವುಗಳಿಗೆ ಬಿಸಿನೆಸ್ ಸ್ವಲ್ಪ ಡಲ್ ಆಗಿತ್ತು. ಈ ಪ್ರಕರಣ ಅವರಿಗೆ ಲಾಟರಿ ಹೊಡೆದ ಹಾಗೆ ಅನಾಯಾಸವಾಗಿ ಒದಗಿಬಂತು. ಆದರೆ ಇಲ್ಲಿನ ಪೊಲೀಸರ ಮೆದುಳಿನಲ್ಲಿ ಏನಿದೆ? ಘಟನೆ ನಡೆದ 8 ದಿನಗಳ ಬಳಿಕ ಸಂಬಂಧಪಟ್ಟ ಶಿಕ್ಷಕರಿಗೆ ಜಾಮೀನು ಸಿಗುವುದು ಕೂಡ ಕಷ್ಟಕರವಾದ ಕ್ರಿಮಿನಲ್ ಕಲಮುಗಳ ಅಡಿ ಕೇಸು ಹಾಕಿರುವ ಮಲ್ಪೆ ಪೊಲೀಸರ ನಿಷ್ಠೆ ಇರುವುದು ಹಿಂದೂತ್ವವಾದಕ್ಕೆ ಹೊರತು ದೇಶದ ಕಾನೂನಿಗಲ್ಲ; ಪೊಲೀಸು ಸಮವಸ್ತ್ರಕ್ಕೆ ಇವರು ನಾಲಾಯಖ್! ಚೆಡ್ಡಿ-ಲಾಠಿಗೇ ಸೈ!
ದುರದೃಷ್ಟವಶಾತ್, ಈ ಮಾತನ್ನು ಉಡುಪಿಯ ಜಿಲ್ಲಾ ಪೊಲೀಸು ವರಿಷ್ಠಾಧಿಕಾರಿಯವರ ಬಗೆಗೂ ಹೇಳಬೇಕಾಗಿದೆ. ಡಿಸೆಂಬರ್ 23 ರಂದು ಉಡುಪಿ ಜಿಲ್ಲೆಯ ಕ್ರೈಸ್ತ ಸಂಘಟನೆಗಳು, ದ.ಸಂ.ಸ. ಹಾಗೂ ಕನರ್ಾಟಕ ಕೋಮು ಸೌಹಾರ್ದ ವೇದಿಕೆಗಳು ಒಟ್ಟಾಗಿ ಉಡುಪಿ ಜಿಲ್ಲಾ ಎಸ್.ಪಿ.ಯವರಿಗೆ ಮನವಿ ಸಲ್ಲಿಸಿದವು. ಆ ಸಮಯದಲ್ಲಿ ಎಸ್.ಪಿ.ಯವರು ಆಡಿದ ದರ್ಪದ ಮಾತುಗಳು ಮಲ್ಪೆ ಪೊಲೀಸರ ದುಂಡಾವತರ್ಿಗೆ ಕುಮ್ಮಕ್ಕು ಕೊಡುವಂತಿದ್ದವು. ಮನವಿ ಕೊಟ್ಟವರ ಮಾತುಗಳನ್ನು ಆಲಿಸುವ ವ್ಯವಧಾನ ಕೂಡ ಅವರಿಗಿರಲಿಲ್ಲ. ನಮ್ಮ ಎಲ್ಲ ಅಹವಾಲುಗಳಿಗೆ ಅವರದ್ದು ಒಂದೇ ಉತ್ತರ- `ಕೇಸು ಕೋಟರ್ಿನ ಮುಂದಿದೆ, ನಿಮ್ಮ ವಕೀಲರಿಗೆ ಈ ಪಾಯಿಂಟ್ಗಳನ್ನು ಹೇಳಿ, ಅವರು ವಾದಿಸುತ್ತಾರೆ.', `ಹಾಗಾದರೆ ಪೊಲೀಸು ಠಾಣೆಗೆ ಯಾರೇ ಬಂದು ದೂರು ಕೊಟ್ಟರೂ ನೀವು ತಕ್ಷಣ ಇಂಥ ಕಠಿಣ ಕಲಮುಗಳಡಿ ಕೇಸು ಹಾಕುತ್ತೀರಾ?' ಎಂದು ನಾವು ಕೇಳಿದ್ದಕ್ಕೆ `ನೋಡಿ ನಿಮಗೆ ನಮ್ಮ ಡಿಪಾಟರ್್ಮೆಂಟ್ ಪ್ರೊಸಿಜರ್ ಗೊತ್ತಿಲ್ಲ; ನಿಮ್ಮ ಲಾಯರ್ ಕೇಳಿ. ಪೆಟ್ಟು ತಿಂದ ಹುಡುಗನ ತಂದೆಯೇ ಬಂದು ದೂರು ಕೊಟ್ಟಿದ್ದಾರೆ.' ಮಾತುಕತೆಯಲ್ಲಿ ಅದುವರೆಗೂ ಮೌನವಾಗಿದ್ದ ದ.ಸಂ.ಸ. ನಾಯಕ ಜಯನ್ ಮಲ್ಪೆಯವರನ್ನು ಎಸ್.ಪಿ.ಯವರ ಮಾತು ಕೆರಳಿಸಿತು. `ಆ ಹುಡುಗ ದಲಿತ. ಅವನ ತಂದೆ ತನಗೆ ವಿಷಯ ಏನೂ ಗೊತ್ತಿಲ್ಲ. ಒತ್ತಾಯದಲ್ಲಿ ತಮ್ಮಿಂದ ದೂರು ಕೊಡಿಸಿದ್ದಾರೆ ಎಂದು ನನ್ನ ಬಳಿ ಹೇಳಿದ್ದಾರೆ. ನೀವು ಪ್ರತಿ ತಿಂಗಳೂ ದಲಿತರಿಗೆ ಸಂಬಂಧಿಸಿದ ವಿಷಯ ಚಚರ್ಿಸಲು ನಮ್ಮನ್ನು ಫೋನ್ ಮಾಡಿ ಕರೆಸುತ್ತೀರಿ; ನಮ್ಮ ಫೋನ್ ನಂಬರುಗಳು ನಿಮ್ಮ ಬಳಿ ಇವೆ; ಈ ವಿಷಯದಲ್ಲಿ ಕೇಸು ಹಾಕುವ ಮೊದಲು ನಮ್ಮನ್ನೂ ಒಂದು ಮಾತು ಕೇಳಬೇಕು ಎಂದು ನಿಮಗೆ ಯಾಕೆ ಹೊಳೆಯಲಿಲ್ಲ? ಮಲ್ಪೆ ಪೊಲೀಸರು ಯಾರನ್ನು ಕೇಳಿ ಆ ಕಲಮುಗಳಡಿ ಕೇಸು ಹಾಕಿದರು? ಎಲ್ಲ ಕೋಟರ್ಿನಲ್ಲೇ ಕೇಳಬೇಕು ಎಂದರೆ ನೀವು ಇರುವುದು ಯಾತಕ್ಕೆ?' ಎಂದು ಜಯನ್ ಎಸ್.ಪಿ.ಯವರನ್ನು ತರಾಟೆಗೆ ತೆಗೆದುಕೊಂಡ ನಂತರ, ಗರಂ ಆಗಿ ಮಾತನಾಡುತ್ತಿದ್ದ ಎಸ್.ಪಿ. ಸಾಹೇಬರು ಥಂಡಾ ಹೊಡೆದದ್ದು ಕಣ್ಣಿಗೆ ಕಾಣುವಂತಿತ್ತು.
ಸದ್ಯಕ್ಕೆ ಪೌಲ್ ಲೋಬೊ ಹಾಗು ಮಾಸರ್ೆಲಿನ್ ಸೆರಾ ಅವರಿಗೆ ಜಾಮೀನು ಸಿಕ್ಕಿದೆ. ಈ ಮೊಕದ್ದಮೆಯಲ್ಲಿ ಅವರಿಗೆ ಶೀಘ್ರವಾಗಿ ನ್ಯಾಯ ದೊರೆಯದಿದ್ದರೆ, ದೀರ್ಘ ಹೋರಾಟವೊಂದಕ್ಕೆ ಉಡುಪಿಯ ಪ್ರಗತಿಪರ ಸಂಘಟನೆಗಳು ಅಣಿಯಾಗಬೇಕಿದೆ.

 ಜಿ.ರಾಜಶೇಖರ್, ಕೆ.ಫಣಿರಾಜ್

No comments:

Post a Comment