January 1, 2011

ಸಂದರ್ಶನ: ಸಾಮರಸ್ಯ ಉಳಿಯಬೇಕಾದರೆ ಬಿಜೆಪಿ ತೊಲಗಬೇಕು - -ಮಹೇಂದ್ರ ಕುಮಾರ್ಭಜರಂಗದಳವೆಂಬ ಮತೀಯ ಸಂಘಟನೆಯ ರಾಜ್ಯ ಸಂಚಾಲಕನಾಗಿದ್ದಾತ ಮಹೇಂದ್ರ ಕುಮಾರ್. ಆ ಸಂಘಟನೆಯ ಆಂತರ್ಯಕ್ಕೆ ತಕ್ಕುದಾಗಿ ಮುಂದುವರೆಯುತ್ತಾ ಬಂದಿದ್ದ ಆತ ಇದೀಗ ತನ್ನ ಮೂಲ ಸಿದ್ಧಾಂತಗಳಿಗೆ ತದ್ವಿರುದ್ಧವಾದ ಜಾತ್ಯತೀತ ಜನತಾದಳದತ್ತ ಮುಖ ಮಾಡಿದ್ದಾರೆ. ಇದು ಒಂದು ವ್ಯಕ್ತಿತ್ವದ ಬದಲಾವಣೆ ಅಷ್ಟೇ ಅಲ್ಲ; ಒಂದಿಡೀ ಸಿದ್ಧಾಂತದ ಪಲ್ಲಟ. ಆ ಭೂಮಿಕೆಯಲ್ಲೇ ಮಹೇಂದ್ರ ಕುಮಾರ್ರೊಂದಿಗೆ ನಡೆಸಿದ ಸಂದರ್ಶನದ ವಿವರ ಇಲ್ಲಿದೆ.....
* ಹಿಂದೂತ್ವ ಅಜೆಂಡಾಗಳಿಗೆ ಬದ್ಧರಾಗಿದ್ದ ನೀವು ಅದಕ್ಕೆ ತದ್ವಿರುದ್ಧವಾದ ಜೆಡಿಎಸ್ನತ್ತ ಮುಖ ಮಾಡಲು ಕಾರಣ?
ನಾನು ನಂಬಿಹೋಗಿದ್ದು ಪ್ರಾಮಾಣಿಕ ಹಿಂದೂತ್ವವನ್ನು. ಆದರೆ ಅಲ್ಲಿದ್ದದ್ದು ರಾಜಕೀಯ ಪ್ರೇರಿತವಾದದ್ದು ಅಂತ ಕ್ರಮೇಣ ಗೊತ್ತಾಯಿತು. ದತ್ತಪೀಠ, ಗೋಹತ್ಯೆ ನಿಷೇಧ ಇವೆಲ್ಲ  ಮತಪ್ರಣೀತ ರಾಜಕೀಯ ಹಿಂದೂತ್ವದ ಭಾಗಗಳೇ ಅಂತಲೂ ಅರಿವಾಯ್ತು. ಆದರೆ ನಿಜವಾದ ಹಿಂದೂತ್ವ ಜನಸಾಮಾನ್ಯರ ಜೀವನದಲ್ಲಿ ತಂತಾನೇ ಹಾಸುಹೊಕ್ಕಾಗಿದೆ. ಅದು ಪ್ರಾಮಾಣಿಕ ಹಿಂದೂತ್ವ......
* ಪ್ರಾಮಾಣಿಕ ಹಿಂದೂತ್ವ ಅಂದ್ರೆ?!
ಒಬ್ಬ ದಲಿತ ಹಿಂದೂ ಆಗಿಯೇ ಉಳಿತಾನಂದ್ರೆ ಅದು ಆತನ ಪ್ರಾಮಾಣಿಕ ನಂಬಿಕೆ. ಆತನಿಗೆ ವೇದ, ಉಪನಿಷತ್ತುಗಳು ಬೇಕಿಲ್ಲ. ಅದರ ನಡು ವಲ್ಲಿಯೂ ಈ ಆಚಾರವಿಚಾರಗಳಿಗೆ ತಕ್ಕು ದಾಗಿ ನಡೀತಾನಲ್ಲ? ಅದೇ ಪ್ರಾಮಾಣಿಕ ಹಿಂದೂತ್ವ.
* ಅಂಥ `ಪ್ರಾಮಾಣಿಕ ಹಿಂದೂತ್ವ'ಕ್ಕೆ ಅನ್ಯಧಮರ್ಿಯರಿಂದ ಯಾವ ರೀತಿ ತೊಂದರೆಯಾಗಿದೆ?
ಮುಸ್ಲಿಂ-ಕ್ರಿಶ್ಚಿಯನ್ ಸಮುದಾಯ ದಲ್ಲಿರುವ ಮುಗ್ಧತೆಯ ಕಾರಣದಿಂದ ಕೆಲವಾರು ತೊಂದರೆಗಳಾಗಬಹುದು. ಇಂಥ ಮುಗ್ಧತೆಯನ್ನು ಮತೀಯ ಶಕ್ತಿಗಳು  ಉಪಯೋಗಿಸಿಕೊಳ್ಳುತ್ತಿವೆ. ಈ ರೀತಿಯ ಮುಗ್ಧತೆ ಮತ್ತು ನ್ಯೂನತೆಗಳು ಮುಸ್ಲಿಂ -ಕ್ರಿಶ್ಚಿಯನ್ನರಲ್ಲಿ ಮಾತ್ರವಲ್ಲ, ಹಿಂದೂ ಗಳಲ್ಲೂ ಇದೆ. ಇದನ್ನು ಆಗಿನಿಂದಲೂ ವಿರೋಧಿಸಿಕೊಂಡೇ ಬಂದಿದ್ದೇನೆ. ಎಲ್ಲಾ ಧರ್ಮಗಳೂ ಒಂದಾಗುವಂಥ ವಾತಾ ವರಣ ನಿಮರ್ಿಸಬೇಕೆಂಬುದು ನನ್ನ ಗುರಿ. ಆದರೆ ಈ ಬಿಜೆಪಿ ಅದಕ್ಕೆ ಕಂಟಕವಾಗಿದೆ. ಇದನ್ನ ತೊಲಗಿಸುವುದೊಂದೇ ಧರ್ಮ-ಧರ್ಮಗಳ ಬೆಸುಗೆಗೆ ದಾರಿ.... ನಾನೂ ಕೂಡಾ ಮೊದಲು ಭಾರತೀಯ, ಆಮೇಲೆ ಹಿಂದೂ. ಈ ಮನೋಭಾವ ಎಲ್ಲಾ ಧಮರ್ಿಯರಲ್ಲೂ ಮನೆ ಮಾಡಬೇಕಿದೆ.
* ಭಜರಂಗದಳದಲ್ಲಿದ್ದಾಗ ಆರೆಸ್ಸೆಸ್ ಪ್ರಚೋದನೆ ಹೇಗಿತ್ತು?
ಈಗಲೇ ಬೇಡ. ಮುಂದಿನ ದಿನಗಳಲ್ಲಿ ಆ ಬಗ್ಗೆ ತುಂಬಾ ಮಾತಾಡೋದಿದೆ.
* ನಿಮಗೀಗ ಮತೀಯವಾದ ತಪ್ಪು ಅನ್ನಿಸಿ ಹೊರ ಬಂದಿದ್ದೀರಿ. ಆದರೆ ಒಳಗಿರೋರನ್ನ ಹೇಗೆ ಪಾರು ಮಾಡ್ತೀರಿ?
ನನಗೆ ನನ್ನ ಬಗ್ಗೆ ವಿಶ್ವಾಸವಿದೆ. ಅವರೆಲ್ಲರೊಳಗೂ ಪರಿವರ್ತನೆ ಆಗುತ್ತದೆಂಬ ಭರವಸೆಯೂ ಇದೆ. ಈಗ ಭಜರಂಗದಳದೊಳಗಿರೋ ಅನೇಕ ಕಾರ್ಯಕರ್ತರು ಕೆಟ್ಟೋರಲ್ಲ. ರಾಜಕೀಯ ಹಿಂದೂತ್ವವನ್ನು ತ್ಯಜಿಸಿ ಹೋರಾಟ ವನ್ನು ಸಮಾಜಮುಖಿಯಾಗಿಸಬಲ್ಲ ಮನಸ್ಥಿತಿ ಅವರಲ್ಲಿದೆ. ನಾನೂ ಆ ರೀತಿಯ ಮನಸ್ಥಿತಿಯಿಂದಲೇ ದಳದತ್ತ ಮುಖ ಮಾಡಿದ್ದೇನೆ. ನನಗೆ ರಾಜಕೀಯ ಅಧಿಕಾರದಲ್ಲಿ ಅಂಥಾ ಆಸಕ್ತಿಯಿಲ್ಲ. ಆದರೆ ಬಿಜೆಪಿ ರಾಜಕೀಯ ಶಕ್ತಿಯಾಗಿ ಬೆಳೆದಿರುವುದರಿಂದ ಅದನ್ನು ಬಗ್ಗುಬಡಿಯಲು ಇದು ಅನಿವಾರ್ಯ ಮಾರ್ಗ. ಜೊತೆಗೆ ಜೆಡಿಎಸ್ ನಾಯಕರ ಬಗೆಗೂ ನನಗೆ ವಿಶ್ವಾಸವಿದೆ.
* ಬಿಜೆಪಿ ವಿರುದ್ಧ ಯಾತಕ್ಕಾಗಿ ಹೋರಾಟ.....?
ಬಿಜೆಪಿ ಜನರ ಭಾವನೆಗಳ ಜೊತೆಗೆ ಚೆಲ್ಲಾಟವಾಡುತ್ತಿವೆ. ಸಂಸ್ಕೃತಿಯನ್ನು ಉದ್ಧಾರವಾಗಿಸೋ ನೆಪದಲ್ಲಿ ಅದನ್ನು ಕೊಂದು ಹಾಕುತ್ತಿದೆ. ಮಹಿಳೆಯರನ್ನು `ಮಾತೆಯರು' ಅಂತೆಲ್ಲಾ ಹೇಳಿಕೊಳ್ಳುವ, ಗೌರವಿಸುವಂತೆ ತೋರಿಸಿಕೊಳ್ಳುವ ಬಿಜೆಪಿ ಜನ ತಮ್ಮ ಸಚಿವ ಸಂಪುಟದಲ್ಲಿ ಅತ್ಯಾಚಾರಿ ಯೊಬ್ಬನಿಗೆ ಸ್ಥಾನ ಕೊಟ್ಟಿರುವುದು ಅವರ ಮನಸ್ಥಿತಿಗೆ ಹಿಡಿದ ಕನ್ನಡಿ.   ಇವರು ರಾಜಕೀಯವನ್ನು ವ್ಯವಹಾರ ಮಾಡಿಕೊಂಡಿದ್ದಾರೆ.  ಇಂಥದ್ದರ ವಿರುದ್ಧವೇ ನನ್ನ ಹೋರಾಟ.....
* ಈಗ ಧರ್ಮಗಳನ್ನ ಬೆಸೆಯೋ ಮಾತಾಡ್ತಿದ್ದೀರಿ. ಆದರೆ ಚಚರ್್ ಮೇಲಿನ ದಾಳಿ ಸಂದರ್ಭದಲ್ಲಿ ಒಡೆಯೋ ಕೆಲಸ ಮಾಡಿದ್ರಿ. ಈ ಬಗ್ಗೆ ಪಾಪಪ್ರಜ್ಞೆ ಇಲ್ಲವೆ?
ಅದು ಮತಾಂತರ ನಡೆಸೋ ಕೇಂದ್ರಗಳ ಮೇಲೆ ನಡೆಸಿದ ದಾಳಿ ಅಂತಲೇ ಅಂದುಕೊಳ್ತೀನಿ. ಆ ನೆಲೆಗಟ್ಟಲ್ಲಿ ಆ ಘಟನೆಯನ್ನು ಸಮಥರ್ಿಸಿಕೊಂಡಿದ್ದನೇ ಹೊರತು ಆ ಸಮುದಾಯದವರ ಮೇಲಿನ ಸಿಟ್ಟಿನಿಂದಲ್ಲ. ಮುಗ್ಧರನ್ನು ಮತಾಂತರ ಮಾಡೋ ದಂಧೆಯೊಂದು ಚಾಲ್ತಿಯಲ್ಲಿರುವುದು ಸುಳ್ಳಲ್ಲ. ಆದರೆ ಅದಕ್ಕೆ ಆ ಇಡೀ ಸಮುದಾಯ ಕಾರಣವಲ್ಲ.
* ಭಜರಂಗದಳದಲ್ಲಿ ಅನ್ಯಾಯವಾಗಿದ್ದರಿಂದಲೇ ಮಹೇಂದ್ರ ಹೊರಬಂದಿದ್ದು ಅನ್ನಲಾಗುತ್ತಿದೆ...
ಖಂಡಿತಾ ಇಲ್ಲ. ನನ್ನ ಮನಸ್ಥಿತಿ ಬದಲಾದುದರಿಂದಲೇ ಇಂಥಾ ನಿಧರ್ಾರ ತೆಗೆದುಕೊಂಡಿದ್ದೇನೆ. ಚಚರ್್ ಮೇಲಿನ ದಾಳಿ ವಿಚಾರದ ಬಂಧನದ ನಂತರದಲ್ಲಿ ನಾನು ಎದುರು ಗೊಂಡ ಘಟನೆಯೊಂದು ಆ ನಿಧರ್ಾರಕ್ಕೆ ಕಾರಣವಾಯಿತು.
ಬೆಳ್ತಂಗಡಿಯಲ್ಲಿ ಒಬ್ಬ ಮಹಿಳೆ ಮತಾಂತರಗೊಂಡಿದ್ದರು. ಈ ಬಗ್ಗೆ ವಿಚಾರಿಸಲು ಹೋದಾಗ ಆಕೆಯ ಹಿನ್ನೆಲೆ ಕರುಳು ಹಿಂಡಿತು. ಒಳ್ಳೆಯ ಮನೆತನದಿಂದ ಬಂದ ಆಕೆ ಶ್ರೀಮಂತೆ. ಹೋದ ಮನೇಲೂ ಅದೇ ಶ್ರೀಮಂತಿಕೆ. ಆದರೆ ಮೂವರು ಹೆಣ್ಮಕ್ಕಳನ್ನು ಮಡಿಲಿಗಿಟ್ಟು ಗಂಡ ಸತ್ತು ಹೋದ. ಆಸ್ತಿ ವಿಚಾರವಾಗಿ ಗಂಡನ ಮನೆಯವರೂ ಆಕೆಯನ್ನು ಹೊರಗಟ್ಟಿದ್ದರು. ನಿವರ್ಾಹವಿಲ್ಲದ ಆಕೆ ಬೇರೆಯವರ ಮನೆಗೆಲಸಕ್ಕೆ ಸೇರಿಕೊಂಡಳು. ಆದರೂ ಜೀವನ ನಿರ್ವಹಣೆಗೆ ಹಣ ಸಾಲದೆ ದೊಡ್ಡ ಮಗಳನ್ನು ಶಾಲೆ ಬಿಡಿಸಿ ಕೆಲಸಕ್ಕೆ ಸೇರಿಸಿದಳು. ಆದರೂ ಬಡತನ ನೀಗದೆ ಸಹಾಯಕ್ಕಾಗಿ ಮಠ-ಮಂದಿರ, ಜಾತಿ ಸಂಘಗಳಿಗೆ ಅಲೆದಾಡಿ ಸಹಾಯ ಯಾಚಿಸಿದಳು.  ಪ್ರಯೋಜನ ವಾಗಲಿಲ್ಲ.
ಆದರೆ ಒಬ್ಬ ವ್ಯಕ್ತಿ ಬಂದು ಸಹಾಯ ಮಾಡಿದ. ಬೆಳೆದು ನಿಂತಿದ್ದ ಹೆಣ್ಮಕ್ಕಳಿಗೆ ಮದುವೆಯನ್ನೂ ಮಾಡಿಸಿದ. ಆತ ಕ್ರಿಶ್ಚಿಯನ್. ಈಗ ಈ ಹಿಂದೂ ಮಹಿಳೆಯೂ ಮಕ್ಕಳೊಂದಿಗೆ ಆ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ. ಇದರಿಂದ ನನ್ನೊಳಗೆ `ಆಕೆಯನ್ನು ಮತಾಂತರಗೊಳಿಸಿದ್ದು ಹಿಂದೂ ಸಮಾಜವೇ, ಅಂತೊಂದು ವಿಚಾರ ಚುಚ್ಚಲಾ ರಂಭಿಸಿತು. ಆಕೆಗಾಗ ಧರ್ಮಕ್ಕಿಂತ ಬದುಕು ಮುಖ್ಯವಾಗಿತ್ತು. ಹಿಂದೂ ಸಮಾಜ ಅದನ್ನು ನೀಡದ ಕಾರಣ ಮತಾಂತರಕ್ಕೆ ದಾರಿಯಾಯಿತು. ಈ ಜನ ದೇವಸ್ಥಾನಗಳಿಗೆ ಫಂಡು ಕೊಡ್ತಾರೆ, ದಲಿತರು ನೊಂದವರ ಆತ್ಮಗೌರವಕ್ಕೇ ಪೆಟ್ಟು ಕೊಡ್ತಾರೆ. ಇದನ್ನು ಸರಿ ಮಾಡ್ಬೇಕು ಅನ್ನೋ ಹಂಬಲವೇ ನನ್ನೀ ನಿಧರ್ಾರಕ್ಕೆ ಪ್ರೇರಣೆ...
* ನೀವೇ ಮತಾಂತರ ಮಾಡೋ ದಂಧೆ ಇದೇ ಅಂದಿದ್ರಿ. ಆದರೆ ಅದು ಹಿಂದೂ ಮತದ ಕೂಸು ಅಂತನ್ನಿಸೋದಿಲ್ವಾ? ಈಗ ಚಚರ್್ ಮೇಲೆ ದಾಳಿ ಮಾಡಿದ್ದು ತಪ್ಪು ಅನ್ಸಲ್ವಾ?
ನಿಜ, ಹಿಂದೂ ಸಮಾಜದ ಇಂಥ ಬಲಹೀನತೆಗಳೇ ಮತಾಂತರದಂಥ ಘಟನೆಗಳಿಗೆ ಕಾರಣ. ಈಗಿನಂಥ ಮನಸ್ಥಿತಿ ಇದ್ದಿದ್ರೆ ಚಚರ್್ ಮೇಲಿನ ದಾಳಿಯನ್ನು ಸಮಥರ್ಿಸುತ್ತಿರಲಿಲ್ಲ. ಮನುಷ್ಯ ಪ್ರತೀ ಕ್ಷಣವೂ ಕಲೀತಾ ಇರ್ತಾನೆ. ಆಯಾ ಸಂದರ್ಭಗಳಲ್ಲಿ ಸೂಕ್ತ ತಿಳಿವಳಿಕೆಯೂ ಬರುತ್ತೆ. ನಾನದಕ್ಕೆ ತೆರೆದುಕೊಂಡಿದ್ದೇನೆ. ಆದುದರಿಂದಲೇ ಬದಲಾಗಿದ್ದೇನೆ....
* ಬಾಬಾಬುಡನ್ಗಿರಿ ರಾಜಕೀಯ ದಾಳವಾಗಿರೋದ್ರಲ್ಲಿ ನಿಮ್ಮದೂ ಪಾಲಿದೆ. ಈಗಿನ ಸ್ಥಿತಿಯಲ್ಲಿ ಗಿರಿಯ ಸೌಹಾರ್ದವನ್ನ ಯಾವ ರೀತಿ ಉಳಿಸ್ತೀರಿ?
ದತ್ತಪೀಠ ವಿವಿಧ ಕೋಮಿನವರ, ವರ್ಗಗಳ ಸೌಹಾರ್ದ ಕೇಂದ್ರ. ನಾನು ಭಜರಂಗದಳದ  ರಾಜ್ಯ ಸಂಚಾಲಕನಾಗಿದ್ದಾಗಲೇ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ಹೇಳಿದ್ದೆ. ಅಲ್ಲಿರುವ ಅನಧಿಕೃತ ಗೋರಿಗಳನ್ನು ತೆರವುಗೊಳಿಸಿ ಪವಿತ್ರವಾದುದನ್ನಷ್ಟೆ ಉಳಿಸಿಕೊಂಡು ಎರಡೂ ಧರ್ಮಗಳ ಸಾಮರಸ್ಯ ಕಾಯ್ದುಕೊಳ್ಳಬೇಕು.
* ನಿಮ್ಮಂಥವರು ಹೋರಾಟ ಆರಂಭಿಸೋವರೆಗೂ ಅದು ಸೌಹಾರ್ದ ಕೇಂದ್ರವೇ ಆಗಿತ್ತಲ್ಲಾ?
ಆ ಹೋರಾಟ ರಾಜಕೀಯ ತಿರುವು ಪಡೆಯುತ್ತದೆಂದು ಅಂದುಕೊಂಡಿರಲಿಲ್ಲ. ಅಲ್ಲಿನ ಸಾಮರಸ್ಯವನ್ನು ಬಿಜೆಪಿ ಕೊಲೆ ಮಾಡಿದೆ. ರಾಜಕೀಯಕ್ಕೆ ಉಪಯೋಗಿಸಿಕೊಳ್ಳಲೂ ಹುನ್ನಾರ ನಡೆಸುತ್ತಿದೆ. ಅಲ್ಲಿ ನಿಜವಾದ ಸಾಮರಸ್ಯ ನೆಲೆಗೊಳ್ಳಲು ಯಾವ ಕೆಲಸ ಮಾಡಲೂ ನಾನು ಕಟಿಬದ್ಧನಿದ್ದೇನೆ.
* ಈಗಲೂ ಭಜರಂಗದಳದಲ್ಲೇ ಇರುವವರಿಗೆ ನಿಮ್ಮ ಕಿವಿ ಮಾತೇನು?
ನನಗೆ ಆ ವಲಯದಲ್ಲಿ ದೊಡ್ಡ ಮಟ್ಟದ ಸಂಪರ್ಕಗಳಿವೆ. ಅಲ್ಲಿ ಇನ್ನೂ ಹೊಸಾ ಕಾರ್ಯಕರ್ತರು ತಯಾರಾಗುತ್ತಿದ್ದಾರೆ. ಆದರೆ ಯಾರೂ ಮುಸ್ಲಿಮರನ್ನು, ಕ್ರಿಶ್ಚಿಯನ್ನರನ್ನು ಗುರಿಯಾಗಿಸಿಕೊಳ್ಳಬೇಡಿ. ಆ ಹಾದಿಯಲ್ಲೇ ಮುಂದುವರೆದರೆ ಖಂಡಿತಾ ಮೋಸ ಹೋಗ್ತೀರಿ. ಹಿಂದೂ ಸಮಾಜದಲ್ಲೇ ಇರೋ ನ್ಯೂನತೆಗಳನ್ನು ಸರಿಪಡಿಸಲು ಪ್ರಯತ್ನಿಸಿ. ಈಗ ಇರೋ ದಾರಿಯಲ್ಲಿ ನಿಜವಾದ ರಾಷ್ಟ್ರ ಕಟ್ಟುವುದು ಕನಸಿನ ಮಾತು. ಇದು ನಿಜವಾದ ಹಿಂದೂತ್ವ ಅಲ್ಲ. ನಿಮ್ಮ ಹೋರಾಟವನ್ನು ಸಾಮಾಜಿಕ ಕೆಲಸಗಳಿಗೆ ಉಪಯೋಗಿಸಿ....

No comments:

Post a Comment