January 1, 2011

ನೋವಿಗೆ ಮಿಡಿದ ಜೀವಕ್ಕೆ ಜೀವಾವಧಿ ಶಿಕ್ಷೆ


ಬಡವರ ವೈದ್ಯ ಮತ್ತು ಮಾನವಹಕ್ಕುಗಳ ಹೋರಾಟಗಾರ ಡಾ. ಬಿನಾಯಕ್ ಸೇನ್ ಅವರಿಗೆ ಛತ್ತೀಸಗಡದ ರಾಯ್ಪುರದ ನ್ಯಾಯಾಲಯ ನೀಡಿರುವ ಜೀವಾವಧಿ ಶಿಕ್ಷೆಯ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಇದೇ ಬುಧವಾರ ಬೆಂಗಳೂರಿನಲ್ಲೂ ಅಂತಹದ್ದೊಂದು ಪ್ರತಿಭಟನೆ ನಡೆಯಿತು. ಇತರೆ ನಗರಗಳಲ್ಲಿ ಆಗಿರುವಂತೆ ಇಲ್ಲಿಯೂ ವಿವಿಧ ಸಂಸ್ಥೆ-ಸಂಘಟನೆಗಳ ನೂರಾರು ಕಾರ್ಯಕರ್ತರು ಜೊತೆಗೂಡಿ ಡಾ. ಸೇನ್ ಪರವಾಗಿ ತಮ್ಮ ದನಿ ಎತ್ತಿದ್ದು ಒಂದು ರೀತಿಯಲ್ಲಿ ನೆಮ್ಮದಿಯನ್ನು ತಂದಿತು. ಏಕೆಂದರೆ ಸೇನ್ ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿರುವ ಹಿಂದಿರುವ ಉದ್ದೇಶವೇ ಇತರೆ ಮಾನವಹಕ್ಕು ಮತ್ತು ಜನಪರ ಹೋರಾಟಗಾರರಲ್ಲಿ. ಭಯ ಹುಟ್ಟಿಸುವುದಾಗಿತ್ತು; ಆ ಮೂಲಕ ಯಾರೂ ಸಕರ್ಾರಗಳ ದೌರ್ಜನ್ಯದ ವಿರುದ್ಧ ದನಿ ಎತ್ತದಂತೆ ನೋಡಿಕೊಳ್ಳುವುದೇ ಆಗಿತ್ತು. ಆದರೆ ಆ ಉದ್ದೇಶ ಕಿಂಚಿತ್ತೂ ಈಡೇರಲಿಲ್ಲ. ಬದಲಾಗಿ ಅದಕ್ಕೆ ವಿರುದ್ಧವಾದ ಪರಿಣಾಮ ವನ್ನು ಬೀರಿ ಎಲ್ಲರನ್ನು ಈ ತೀಪರ್ಿನ ವಿರುದ್ಧ ಒಗ್ಗೂಡಿಸಿದೆ.
ಸೇನ್ ಅವರಿಗೆ ಜೀವಾವಧಿ ಶಿಕ್ಷೆ ನೀಡಿರುವ ತೀಪರ್ಿನಲ್ಲಿರುವ ಲೋಪದೋಷಗಳ ಬಗ್ಗೆ ಇದೇ ಸಂಚಿಕೆಯಲ್ಲಿ ನಮ್ಮ ಶಿವಸುಂದರ್ `ಚಾವರ್ಾಕ' ಅಂಕಣದಲ್ಲಿ ವಿವರವಾಗಿ ಚಚರ್ಿಸಿದ್ದಾರೆ. ಈ ಹಿಂದೆ ಸೇನ್ ಅವರಿಗೆ ಜಾಮೀನನ್ನು ನಿರಾಕರಿಸಿ, ಅವರ ಹೃದಯ ಕಾಯಿಲೆಗೆ ಸರಿಯಾದ ಚಿಕಿತ್ಸೆಯನ್ನೂ ನೀಡದೆ ಅವರನ್ನು ಎರಡು ವರ್ಷಗಳ ಕಾಲ ಬಂಧನದಲ್ಲಿಟ್ಟಿದ್ದಾಗ ಅವರ ಬಗ್ಗೆ ಇದೇ ಕಾಲಂನಲ್ಲಿ ನಾನು ಬರೆದಿದ್ದೆ (ಮೇ 20, 2009 ರ ಸಂಚಿಕೆ). ಆದ್ದರಿಂದ ಇಂದು ಸೇನ್ರಂತಹ ನಿಸ್ವಾರ್ಥ ಜನಸೇವಕನನ್ನು, ಮಾನವತಾವಾದಿಯನ್ನು ಜೈಲಿಗೆ ದೂಡುತ್ತಿರುವ ನಮ್ಮ ಪ್ರಜಾತಂತ್ರ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬ ನನ್ನ ಆತಂಕವನ್ನು ಹಂಚಿಕೊಳ್ಳಲು ಇಷ್ಟಪಡುತ್ತೇನೆ.
ಇತ್ತೀಚೆಗೆ ನಮ್ಮ ಮಹಾನ್ ಭಾರತದಲ್ಲಿ ಎತೆಂತಹ ಹಗರಣಗಳು ನಡೆದಿವೆ ನೋಡಿ.
ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಬಲಿಕೊಟ್ಟ ಸೈನಿಕರ ಹೆಸರಲ್ಲಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ರಿಯಲ್ ಎಸ್ಟೇಟನ್ನೇ ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳು ಕಬಳಿಸಿ ಸಿಕ್ಕಿಬಿದ್ದಿದ್ದರು. ಇದನ್ನು `ಆದಶರ್್ ಹಗರಣ' ಎಂದೇ ಕರೆಯಲಾಗುತ್ತಿದೆ. ಅದರಲ್ಲಿ ಎಷ್ಟು ವ್ಯಂಗ್ಯ ಅಡಗಿದೆ ಎಂದರೆ ಈ `ಆದಶರ್್ ಹಗರಣ'ರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಹಾರಾಷ್ಟ್ರದ ಕಾಂಗ್ರೆಸ್ ರಾಜಕಾರಣಿ ಅಶೋಕ್ ಚವಾಣ್ ಅವರಿಗೆ ಆದ `ಶಿಕ್ಷೆ' ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕಾಗಿ ಬಂದದ್ದು, ಅಷ್ಟೇ! ಅವರಿಗೆ ಜೈಲು, ಬೇಲು ತರಹದ ಯಾವ ಸಂಕಷ್ಟಗಳೂ ಎದುರಾಗಲೇ ಇಲ್ಲ. ಸ್ವಲ್ಪ ದಿನಗಳಲ್ಲಿ ಎಲ್ಲ ಹಗರಣಗಳಂತೆ `ಆದಶರ್್' ಹಗರಣವನ್ನೂ ಜನ ಮರೆತ ಮೇಲೆ ಮುಂದೊಂದು ದಿನ ಇದೇ ಅಶೋಕ್ ಚವಾಣ್ ಮತ್ತೆ ಮುಖ್ಯಮಂತ್ರಿಯೋ, ಕೇಂದ್ರ ಮಂತ್ರಿಯೋ ಆಗಿ ತಮ್ಮ `ಆದಶರ್್' ಮಾರ್ಗವನ್ನು ಮುಂದುವರೆಸಿದರೆ ಅಚ್ಚರಿಪಡಬೇಕಿಲ್ಲ.
ಆದರೆ ಚವಾಣ್ರಂತೆ ಕೋಟಿಕೋಟಿ ರೂಪಾಯಿಗಳ ಆಸ್ತಿಯ ಮೋಹಕ್ಕೆ ಬೀಳದೆ ತನ್ನೆಲ್ಲ ವಿದ್ಯೆ ಮತ್ತು ಕಾಳಜಿಯನ್ನು ಬಡವರಲ್ಲೇ ಅತಿ ಬಡವರಾದ ಆದಿವಾಸಿಗಳ ಉದ್ಧಾರಕ್ಕಾಗಿ ಮುಡಿಪಾಗಿಟ್ಟಿದ್ದ ಬಿನಾಯಕ್ ಸೇನ್ ಅವರಿಗೆ ಜೀವಾವಧಿ ಶಿಕ್ಷೆಯನ್ನು ನಮ್ಮ ವ್ಯವಸ್ಥೆ ವಿಧಿಸುತ್ತದೆ.
ಇತ್ತೀಚೆಗೆ ಬಹಳ ಸುದ್ದಿ ಮಾಡಿದ ಮತ್ತೊಂದು ಹಗರಣ ಕಾಮನ್ವೆಲ್ತ್ ಕ್ರೀಡಾಕೂಟದ್ದು. ಅದರಲ್ಲಿ ಕ್ರೀಡೆಯನ್ನು ಪ್ರೋತ್ಸಾಹಿಸುವ ನೆಪದಲ್ಲಿ ಕೋಟ್ಯಂತರ ರೂಪಾಯಿಗಳನ್ನು ಕದಿಯಲಾಗಿತ್ತು. ಆ ಹಗರಣದ ಕೇಂದ್ರ ಬಿಂದುವಾದ ಸುರೇಶ್ ಕಲ್ಮಾಡಿಯನ್ನು ಇವತ್ತಿಗೂ ವಿಚಾರಣೆಗೆ ಒಳಪಡಿಸಿಲ್ಲ. ಅದಕ್ಕಿಂತ ಮುಖ್ಯವಾಗಿ ಈ ಹಗರಣದ ಪ್ರಮುಖ ದಾಖಲೆಗಳೇ ನಾಪತ್ತೆ ಆಗುವಂತೆ ಮಾಡುವ ಮೂಲಕ ಕಲ್ಮಾಡಿ ಮತ್ತಾತನ ಕಳ್ಳರ ಗ್ಯಾಂಗಿಗೆ ಯಾವ ಸಮಸ್ಯೆಯೂ ಎದುರಾಗದಂತೆ ನೋಡಿಕೊಳ್ಳಲಾಗಿದೆ.
ಆದರೆ ಬಿನಾಯಕ್ ಅವರ ಕೇಸ್ನಲ್ಲಿ ಆದದ್ದೇನು? ಪೊಲೀಸರೇ ಸೃಷ್ಟಿಸಿದ ಖೊಟ್ಟಿ ದಾಖಲೆಗಳನ್ನಾಧರಿಸಿದ ನ್ಯಾಯಾಲಯ ಸೇನ್ ಅವರು ತಮ್ಮ ಬದುಕಿನ ಉಳಿದ ಕಾಲವನ್ನು ಜೈಲಿನಲ್ಲೇ ಕಳೆಯಬೇಕೆಂದು ತೀಪರ್ು ನೀಡುತ್ತದೆ!
ಈಗ ಎಲ್ಲರ ಗಮನ ಇರುವುದು 1.76 ಸಾವಿರ ಕೋಟಿ 2-ಜಿ ಸ್ಪೆಕ್ಟ್ರಮ್ ಹಗರಣದ ಮೇಲೆ. ಎಲ್ಲರಿಗೂ ಗೊತ್ತಿರುವಂತೆ ಈ ಹಗರಣದ ಪ್ರಮುಖ ರುವಾರಿಗಳು ಮಾಜಿ ಮಂತ್ರಿ ಎ. ರಾಜಾ ಮತ್ತು ಸಂಶಯಾಸ್ಪದ ವ್ಯಕ್ತಿಯಾದ ನೀರಾ ರಾಡಿಯಾ.
ಮೊದಲಿಗೆ ರಾಜಾನ ವಿಷಯದಲ್ಲಿ ಏನಾಯಿತು ಎಂದು ನೋಡೋಣ. 2ಜಿ ಸ್ಪೆಕ್ಟ್ರಮ್ ಹಗರಣ ಬೆಳಕಿಗೆ ಬಂದ ಹಲವಾರು ದಿನಗಳ ನಂತರ ಆತನಿಂದ ರಾಜೀನಾಮೆಯನ್ನು ಪಡೆಯಲಾಯಿತು. ಅದಾದ ಅದೆಷ್ಟೋ ದಿನಗಳ ನಂತರ ಆತನ ಮತ್ತು ಆತನ ಹತ್ತಿರದವರ ಮನೆ-ಆಫೀಸುಗಳ ಮೇಲೆ ರೇಡ್ಗಳನ್ನು ನಡೆಸಲಾಯಿತು. ಅಂದರೆ ಇಂಥ ದ್ದೊಂದು ರೇಡ್ ನಡೆಯುವ ಸಾಧ್ಯತೆ ಬಗ್ಗೆ ರಾಜಾ ಮತ್ತಾತನ ಸಂಗಡಿಗರಿಗೆ ಮೊದಲೇ ಸುಳಿವು ಸಿಕ್ಕಿತ್ತು. ಇಷ್ಟಾದ ಮೇಲೂ ಸಿಕ್ಕಿಹಾಕಿಕೊಳ್ಳುವಂತಹ ದಾಖಲೆಗಳನ್ನು ಅವರೆಲ್ಲ ಇನ್ನೂ ತಮ್ಮ ಬಳಿಯೇ ಇಟ್ಟ್ಟುಕೊಂಡಿರುವ ಸಾಧ್ಯತೆಯೇ ಇರಲಿಲ್ಲ. ಅಂದರೆ ದೇಶದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂಪಾಯಿ ವಂಚಿಸಿದ ರಾಜಾನಿಗೆ ವಿಧಿಸಲಾದ `ಶಿಕ್ಷೆ' ಆತ ತನ್ನ ಹುದ್ದೆಯಿಂದ ಕೆಳಗಿಳಿದಿದ್ದು ಅಷ್ಟೇ. ಇಲ್ಲಿ ಸ್ಪಷ್ಟವಾಗಿ ಕಾಣಿಸುವುದು ಆತನ ಮೇಲೆ ಆದ ರೇಡ್ ಜನರನ್ನು ಮೋಸಗೊಳಿಸುವ, ಆತನ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ತೋರುವ ಒಂದು ಕಪಟ ನಾಟಕ ಎಂಬುದು.
ಇದನ್ನು ಬಿನಾಯಕ್ ಸೇನ್ ಅವರ ಮೇಲಾದ ರೇಡಿಗೆ ಹೋಲಿಸಿ ನೋಡಿ. ಸೇನ್ ಅವರ ಮನೆ ಮೇಲಾದ ರೇಡ್ ಸಂದರ್ಭದಲ್ಲಿ ಒಂದು ಕಂಪ್ಯೂಟರ್ ಅನ್ನು ಪೊಲೀಸರು ವಶಪಡಿಸಿಕೊಂಡರು. ಆ ಕಂಪ್ಯೂಟರ್ಅನ್ನು ಪರಿಶೀಲಿಸಿದಾಗ ಸೇನ್ ಅವರ ಪತ್ನಿ ಇಳಿನಾ ಅವರು ಐಎಸ್ಐ ಎಂಬ ಸಂಸ್ಥೆಗೆ ಒಂದು ಈ-ಮೇಲ್ ಕಳುಹಿಸಿದ್ದು ಪತ್ತೆಯಾಯಿತು. ಹಾಗೆಯೇ ಯಾರೋ ಒಬ್ಬರು ಸೇನ್ ಅವರನ್ನು `ಕಾಮ್ರೆಡ್' ಎಂದು ಉದ್ದೇಶಿಸಿ ಬರೆದಿದ್ದ ಪತ್ರವೂ ಸಿಕ್ಕಿತು. ವಾಸ್ತವವಾಗಿ ಇಳಿನಾ ಅವರು ಪತ್ರ ಬರೆದಿದ್ದು ದೆಹಲಿಯಲ್ಲಿರುವ ಇಂಡಿಯನ್ ಸೋಷಿಯಲ್ ಇನ್  ಸ್ಟಿಟ್ಯೂಟ್ (ಐಎಸ್ಐ) ಎಂಬ ಸಂಸ್ಥೆಗೆ. ಆದರೆ ಛತ್ತೀಸಗಡದ ಸಕರ್ಾರಿ ವಕೀಲರು ಇಳಿನಾ ಅವರು ಪಾಕಿಸ್ತಾನದ ಗೂಢಚಯರ್ೆ ಸಂಘಟನೆಯಾದ ಐಎಸ್ಐಗೆ ಪತ್ರ ಬರೆದಿದ್ದರು ಎಂದೇ ವಾದಿಸಿದರು. ಅಷ್ಟೇ ಅಲ್ಲ, ಮಾವೋವಾದಿ ನಕ್ಸಲರು ಪರಸ್ಪರರನ್ನು `ಕಾಮ್ರೆಡ್' ಎಂದು ಕರೆಯುವುದರಿಂದ ಸೇನ್ ಅವರು ಮಾವೋವಾದಿ ಸಂಘಟನೆಗೆ ಸೇರಿದ್ದಾರೆ ಎಂದೂ ನ್ಯಾಯಾಲಯದಲ್ಲಿ ವಾದಿಸಿದರು. ವಾಸ್ತವವಾಗಿ ಸಿಪಿಎಂ, ಸಿಪಿಐ ಸೇರಿದಂತೆ ಬಹಳಷ್ಟು ಕಮ್ಯುನಿಸ್ಟ್ ಪಕ್ಷಗಳಲ್ಲೂ ಪರಸ್ಪರರನ್ನು ಕಾಮ್ರೆಡ್ ಎಂದೇ ಕರೆಯುತ್ತಾರೆ.
ಇನ್ನು ನೀರಾ ರಾಡಿಯಾಳೊಂದಿಗೆ ನಮ್ಮ ಸಕರ್ಾರ ಮತ್ತು ತನಿಖಾ ಸಂಸ್ಥೆಗಳು ನಡೆದುಕೊಂಡಿರುವ ರೀತಿಯನ್ನೇ ನೋಡಿ. ಹೇಳಿಕೇಳಿ ರಾಡಿಯಾ ರಾಜಕಾರಣಿಗಳನ್ನು, ಪತ್ರಕರ್ತರನ್ನು ಮತ್ತು ಅಧಿಕಾರಿಗಳನ್ನು ತನಗೆ ಬೇಕಾದ ರೀತಿಯಲ್ಲಿ ಬಳಸಿಕೊಂಡು ರತನ್ ಟಾಟಾ ಮತ್ತು ಮುಖೇಶ್ ಅಂಬಾನಿ ತರಹದ ಉದ್ಯಮಿಗಳಿಗೆ ನೆರವಾದಳಲ್ಲದೆ, ಆ ಪ್ರಕ್ರಿಯೆ ಯಲ್ಲಿ ತಾನೂ ಕೋಟ್ಯಂತರ ರೂಪಾಯಿಗಳನ್ನು ಗಳಿಸಿದಳು. ಈಕೆ ಬ್ಲಾಕ್ ಮನಿ ಮಾಡಿದ್ದಾಳೆಂದೂ, ಹವಾಲ ದಂಧೆಯಲ್ಲಿ ಸಕ್ರಿಯಳಾಗಿದ್ದಾಳೆಂದು ರಾಡಿಯಾ ವಿರುದ್ಧ ಆರೋಪಗಳಿವೆ. ಇಂತಹ ರಾಡಿಯಾಳನ್ನು ತನಿಖಾಧಿಕಾರಿಗಳು ತಮ್ಮ ಕಚೇರಿಗೆ ಕರೆಸಿಕೊಂಡು, ಇನ್ನೊಮ್ಮೆ ಆಕೆಯ ಭವ್ಯ ಫಾಮರ್್ ಹೌಸಿಗೆ ಹೋಗಿ ಆಕೆಯ `ವಿಚಾರಣೆ'  ನಡೆಸುತ್ತಾರೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಗೇಲಿಗೀಡು ಮಾಡಿದ ರಾಡಿಯಾ ಜೈಲನ್ನು ನೋಡುವುದಿರಲಿ, ಪೊಲೀಸ್ ಠಾಣೆಯ ಹೊಸ್ತಿಲನ್ನು ದಾಟದಂತೆ ನೋಡಿಕೊಳ್ಳಲಾಗುತ್ತಿದೆ.
ಹೀಗೆ ಅಶೋಕ್ ಚವಾಣ್, ಸುರೇಶ್ ಕಲ್ಮಾಡಿ ಮತ್ತು ಎ. ರಾಜಾ ತರಹದ ಚುನಾಯಿತ `ಜನ ನಾಯಕರು' ಕ್ರಿಮಿನಲ್ ಕೃತ್ಯಗಳಲ್ಲಿ ಸಿಕ್ಕಿಬಿದ್ದಿದ್ದರೂ ಅವರ ತಲೆ ಮೇಲಿನ ಒಂದು ಕೂದಲೂ ಅಲುಗಾಡದಂತೆ ನಮ್ಮ ಪ್ರಜಾಪ್ರಭುತ್ವ ಅವರನ್ನೆಲ್ಲಾ ಕಾಪಾಡುತ್ತದೆ. ಆದರೆ ಎಲ್ಲ ರೀತಿಯಲ್ಲೂ ಜನಸೇವಕರಾದ ಬಿನಾಯಕ್ ಸೇನ್ರಂತಹ ನಿರಪರಾಧಿಗಳ ಮೇಲೆ ಕಪೋಲಕಲ್ಪಿತ ಆರೋಪಗಳನ್ನು ಹೊರಿಸಿ ಅವರನ್ನು ಜೈಲಿಗಟ್ಟುತ್ತದೆ.
ಪ್ರಜಾಪ್ರಭುತ್ವದ ಎಲ್ಲಾ ಸ್ತಂಭಗಳನ್ನು ತನ್ನ ಲಾಭಕ್ಕಾಗಿ ಉಪಯೋಗಿಸಿಕೊಂಡ ನೀರಾ ರಾಡಿಯಾ ಇವತ್ತು ಈ ದೇಶ ಕಂಡ ಅತಿದೊಡ್ಡ ಹಗರಣದ ಕೇಂದ್ರಬಿಂದುವಾಗಿದ್ದರೂ ಆಕೆಯೊಂದಿಗಿನ ತಮ್ಮ ಸಂಪರ್ಕವನ್ನು ಟಾಟಾ ಮತ್ತು  ಅಂಬಾನಿಗಳು ಕಡಿದು ಹಾಕುವುದಿಲ್ಲ. ಬದಲಾಗಿ ರಾಡಿಯಾಳೊಂದಿಗೆ ನಂಟಿದ್ದರೆ ತಮಗೆ ಲಾಭ ಗ್ಯಾರಂಟಿ ಎಂಬ ಭಾವನೆಯೇ ಹೆಚ್ಚಾಗುತ್ತಿದೆ. ಕಳೆದ ಒಂದು ತಿಂಗಳಲ್ಲೇ ರಾಡಿಯಾಳ ಪಬ್ಲಿಕ್ ರಿಲೇಷನ್ಸ್ ಕಂಪನಿಗೆ ಮೂರು ಹೊಸ ಕ್ಲೈಂಟ್ಗಳು ಸಿಕ್ಕಿರುವುದೇ ಅಂತಹ ಧೋರಣೆಗೆ ಸಾಕ್ಷಿಯಾಗಿದೆ.
ಆದರೆ ಬಿನಾಯಕ್ ಸೇನ್ ಅವರ ಬದುಕಿಗೆ, ಆಶಯಗಳಿಗೆ ಏನಾಗಿದೆ ನೋಡಿ. ಅವರನ್ನು ಅಕ್ರಮವಾಗಿ ಬಂಧಿಸಿದ್ದರಿಂದ ಅವರು ಬಡ ಆದಿವಾಸಿ ಗಳಿಗೆ ನಡೆಸುತ್ತಿದ್ದ ಕ್ಲಿನಿಕ್ ಬಂದ್ ಆಗಿದ್ದು ಅಲ್ಲಿನ ಜನರಿಗೆ ದಿಕ್ಕು ತೋಚದಂತಾಗಿದೆ. ಈಗ ಅವರಿಗೆ ನೀಡಲಾಗಿರುವ ಜೀವಾವಧಿ ಶಿಕ್ಷೆಯ ವಿರುದ್ಧ ನ್ಯಾಯಾಲಯಗಳ ಮುಂದೆ ಹೋರಾಡಿ ಅದರಿಂದ ಮುಕ್ತಿ ಪಡೆಯುವ ಹೊತ್ತಿಗೆ ಅವರ ಎಲ್ಲಾ ಜೀವನೋತ್ಸಾಹ ಕಮರಿಹೋಗುವ ಸಾಧ್ಯತೆಗಳಿವೆ.
ಹೀಗೆ ನಮ್ಮ ದೇಶದ ಜನರನ್ನೇ ಸುಲಿಗೆ ಮಾಡಿದ ಕ್ರಿಮಿನಲ್ಗಳು ಸುರಕ್ಷಿತರಾಗಿರುವಾಗ, ಇದೇ ದೇಶದ ಬಡಜನರಿಗಾಗಿ  ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದ ಸೇನ್ರಂತಹ ಅಮಾಯಕರು ಕಂಬಿ ಎಣಿಸಬೇಕಿದೆ.
ಅಂದಹಾಗೆ, ಇವತ್ತು ಸೇನ್ ಪರವಾಗಿ ದೇಶದಾದ್ಯಂತ ಎಲ್ಲಾ ಜನಪರ ಹೋರಾಟಗಾರರು ದನಿ ಎತ್ತುತ್ತಿದ್ದರೂ ನಮ್ಮ ಎಲ್ಲಾ ರಾಜಕೀಯ ಪಕ್ಷಗಳೂ-ಕಮ್ಯುನಿಸ್ಟ್ ಪಕ್ಷಗಳೂ ಸೇರಿದಂತೆ-ಅವರ ಅಕ್ರಮ ಬಂಧನದ ಬಗ್ಗೆ ತುಟಿಪಿಟಿಕ್ ಎಂದಿಲ್ಲ. ಅದಕ್ಕೆ ಕಾರಣ ಇವತ್ತು ಎಲ್ಲ ಪಕ್ಷಗಳೂ ಜನದ್ರೋಹಿ ಪಕ್ಷಗಳಾಗಿರುವುದು. ದೇಶದ ಸುಲಿಗೆಯನ್ನು ತಮ್ಮ ಮುಖ್ಯ ದಂಧೆಯನ್ನಾಗಿಸಿಕೊಂಡಿರುವ  ನಮ್ಮ ರಾಜಕೀಯ ಪಕ್ಷಗಳು ಇವತ್ತು ಎಲ್ಲ ರೀತಿಯಲ್ಲೂ ದೇಶದ್ರೋಹಿ ಪಕ್ಷಗಳಾಗಿವೆ.
ಇದು ನಮ್ಮ ಬೃಹತ್ ಪ್ರಜಾಪ್ರಭುತ್ವದ ಅಸಲಿ ಮುಖ.

ಡಾ. ಬಿನಾಯಕ್ ಸೇನ್ಗೆ ಜೀವಾವಧಿ!ಈ ದೇಶದಲ್ಲಿರುವ ಪ್ರಜಾಸತ್ತೆ ಪ್ರಜಾತಂತ್ರದ ಮುಸುಕು ಹೊದ್ದಿರುವ ನಿರಂಕುಶತ್ವವೇ ಎಂಬುದು ಮತ್ತೊಮ್ಮೆ ರುಜುವಾತಾಗಿದೆ. ಡಾ. ಬಿನಾಯಕ್ ಸೇನ್ರಂತಹ ಅತ್ಯಂತ ಜನಪರ ಮತ್ತು ಜನಪ್ರಿಯ ಡಾಕ್ಟರಿಗೂ ಈ ದೇಶದ ನ್ಯಾಯಾಲಯವೊಂದು ಅವರು ಮಾಡದ ತಪ್ಪಿಗೆ ಜೀವಾವಧಿಯಂತಹ ಘೋರ ಶಿಕ್ಷೆಯನ್ನು ವಿಧಿಸುತ್ತದೆ ಎಂದರೆ ಈ ದೇಶದ ಪ್ರಜಾತಂತ್ರ ಮತ್ತು ನ್ಯಾಯಾಂಗ ಯಾವ ಪಾತಾಳವನ್ನು ಮುಟ್ಟಿದೆ ಎಂಬುದು ಅರ್ಥ ವಾಗುತ್ತದೆ. ಡಾ. ಬಿನಾಯಕ್ ಸೇನ್ ಮಾಡಿದ ಯಾವ ಕೆಲಸ ಈ ಪ್ರಜಾತಂತ್ರದಲ್ಲಿ ಜೀವಾವಧಿ ಶಿಕ್ಷೆಯನ್ನು ಆಹ್ವಾನಿ ಸುವಂತ ಅಪರಾಧವಾಯಿತು  ಎಂಬುದನ್ನು ನೋಡಿದರೆ  ಈ ದೇಶದ  ಕಾನೂನುಗಳ  ನಿಜ ವಾದ ಹೂರಣ ಬಯಲಿಗೆ ಬೀಳುತ್ತದೆ.
ಡಾ. ಬಿನಾಯಕ್ ಸೇನರು ವೆಲ್ಲೂರು ಮೆಡಿಕಲ್ ಕಾಲೇಜಿನಿಂದ ವೈದ್ಯ ಪದವಿಯನ್ನು ಪಡೆಯುವ ಮುನ್ನವೇ ಶಂಕರ್ ಗುಹಾ ನಿಯೋಗಿಯವರ ಹೋರಾಟದ ಮತ್ತು ಸೇವೆಯ ಬದುಕಿನಿಂದ ಪ್ರಭಾವಿತರಾಗಿದ್ದರು. ಆದ್ದರಿಂದಲೇ ವೈದ್ಯ ಪದವಿಯಲ್ಲಿ ಅತ್ಯಂತ ಉನ್ನತ ಶ್ರೇಣಿಯಲ್ಲಿ ಪಾಸಾದರೂ ತಮ್ಮ ಜ್ಞಾನವನ್ನು ಆಸ್ತಿ ಮಾಡಲು ಬಳಸದೇ ಅತ್ಯಂತ ಶೋಷಿತ ಮತ್ತು ನಿರ್ಲಕ್ಷಿತ ಜನಸಮುದಾಯಗಳಿಗೆ ಬಳಸಲು ತೀಮರ್ಾನಿಸಿದರು. ಜ್ಞಾನವಂತರೆಲ್ಲಾ ಆಸ್ತಿವಂತ ರಾಗಲು ಇಲ್ಲಸಲ್ಲದ ಮಾರ್ಗವನ್ನು ಬಳಸುತ್ತಿರುವಾಗ ಈ ಪ್ರತಿಭಾನ್ವಿತ ವೈದ್ಯ ಈ ಸಮಾಜದ ಉಳ್ಳವರ ಬದುಕಿನ ಈ ಸ್ವಾರ್ಥಸಂಹಿತೆಯನ್ನು ಉಲ್ಲಂಘಿಸಿದ್ದೇ ಅವರು ಮಾಡಿದ ಘನಘೋರ ಅಪರಾಧ. ಎಷ್ಟೆಂದರೆ ಬಿನಾಯಕ್ ಸೇನ್ರ ಈ ಸರಳ ಬದುಕೇ ಅವರು ಮಾವೋವಾದಿಗಳ ಸ್ನೇಹಿತನೇ ಇರಬೇಕೆಂದು ಅನುಮಾನ ಪಡಲು ಸಕರ್ಾರಕ್ಕೆ ಸಿಕ್ಕ ಬಲು ದೊಡ್ಡ ಪುರಾವೆಯಾಯಿತು! ನಿಸ್ವಾರ್ಥ ಮತ್ತು ಪ್ರಾಮಾಣಿಕತೆಗಳು ಶಿಕ್ಷಾರ್ಹ ಅಪರಾಧವಾಗುವ ವ್ಯವಸ್ಥೆಯನ್ನು ಪ್ರಜಾತಂತ್ರ ಎಂದು ಕರೆಯಬಹುದೇ?
ಡಾ.ಬಿನಾಯಕ್ ಸೇನ್ ಛತ್ತೀಸ್ಘಡದ ಆದಿವಾಸಿಗಳ ಮಧ್ಯೆ ತಮ್ಮ ಶುಶ್ರುತಾ ಕೇಂದ್ರವನ್ನು ತೆರೆದು ಆರೋಗ್ಯ ಸೇವೆ ಪ್ರಾರಂಭಿಸಿದ ಅಲ್ಪಾವಧಿಯಲ್ಲಿ ಆದಿವಾಸಿಗಳ ಅನಾರೋಗ್ಯಕ್ಕಿರುವ ಸಾಮಾಜಿಕ ಕಾರಣಗಳನ್ನು ಅರಿತು ಕೊಂಡರು. ಅಪೌಷ್ಠಿಕತೆ, ರಕ್ತಹೀನತೆ, ಕೇವಲ ಆರೋಗ್ಯದ ಸಮಸ್ಯೆಯಲ್ಲ. ಬಡತನವೆಂಬ ಸಾಮಾಜಿಕ ಮತ್ತು ಆಥರ್ಿಕ ಸ್ಥಿತಿಯೇ ಅವರ ಕಾಯಿಲೆಗಳಿಗೆ ಕಾರಣವಾಗುತ್ತಿರುವ ಮೂಲ ಸಮಸ್ಯೆಗಳು ಎಂದು ಅರ್ಥಮಾಡಿಕೊಳ್ಳಲು ಈ ಹೃದಯವಂತ ವೈದ್ಯನಿಗೆ ಹೆಚ್ಚು ಸಮಯವೇನೂ ಬೇಕಾಗಲಿಲ್ಲ ಹಾಗೂ ಛತ್ತೀಸ್ಘಡದಲ್ಲಿ ಆದಿವಾಸಿಗಳ ಬಡತನಕ್ಕೆ ಪ್ರಮುಖ ಕಾರಣ ಸಕರ್ಾರದ ಅರಣ್ಯನೀತಿಗಳು ಎಂಬುದನ್ನು ಅರ್ಥಮಾಡಿಕೊಂಡ ಬಿನಾಯಕ್ ಸೇನ್ ಆದಿವಾಸಿಗಳ ನಾಗರಿಕ ಹಕ್ಕನ್ನು ಕಾಪಾಡಲು ಪಿಯುಸಿಎಲ್ ಸಂಸ್ಥೆಯನ್ನು ಸೇರಿಕೊಂಡರು. ಅಪಾರ ಖನಿಜ ಸಂಪನ್ಮೂಲವನ್ನು ಹೊಂದಿರುವ ಆ ಪ್ರದೇಶವನ್ನು ಬೃಹತ್ ಬಹುರಾಷ್ಟ್ರೀಯ ಕಂಪನಿಗಳ ವಶಮಾಡಲು ಸಕರ್ಾರವು ಆದಿವಾಸಿಗಳನ್ನು ಅಲ್ಲಿಂದ ಎತ್ತಂಗಡಿ ಮಾಡಲು ಪ್ರಯತ್ನಿಸಿ ದಾಗ ಬಿನಾಯಕ್ ಸೇನ್ ಹಲವಾರು ಸಂಘ ಸಂಸ್ಥೆಗಳೊಡನೆ ಸೇರಿ ಹೋರಾಟ ರೂಪಿಸಿದರು. ಅದರಲ್ಲೂ ಆದಿವಾಸಿ ಗಳನ್ನು ಕೊಂದು ಹಾಕಲು ಮತ್ತು ಬಲವಂತವಾಗಿ ಹೊರಹಾಕಲು ಸಕರ್ಾರ ಸಾಲ್ವಾ ಜುಡುಂ ಎಂಬ ಕಾನೂನುಬಾಹಿರ ಸೇನೆಯನ್ನೇ ರಚಿಸಿ ತನ್ನ ಜನರ ಮೇಲೆ ಯುದ್ಧ ಶುರು ಮಾಡಿದಾಗ ಸಕರ್ಾರದ ಸಾಲ್ವಾ ಜುಡುಂ ಸಂಚನ್ನು ಬಯಲುಗೊಳಿಸಿದವರಲ್ಲಿ ಬಿನಾಯಕ್ ಸೇನರೇ ಮೊದಲಿಗರು. ಬಡವರ ಅನಾರೋಗ್ಯಕ್ಕೆ ಬಡತನವೇ ಪ್ರಧಾನ ಶತ್ರು. ಆದ್ದರಿಂದ ವೈದ್ಯನೊಬ್ಬನ ಹೋರಾಟ ಕೇವಲ ಬಡವರ ಕಾಯಿಲೆಯ ವಿರುದ್ಧ ಮಾತ್ರವಿದ್ದರೆ ಸಾಲದು, ಆ ಕಾಯಿಲೆಗಳ ಮೂಲಕಾರಣಗಳ ವಿರುದ್ಧವೂ ಇರಬೇಕೆಂದೇ ಪ್ರಪಂಚದ ಇತಿಹಾಸದಲ್ಲಿ ಡಾ. ಚೆ ಗುವಾರ, ಡಾ. ನಾರ್ಮನ್ ಬೆಥ್ಯೂನ್, ಡಾ. ಕೊಟ್ನೀಸ್ ಇನ್ನಿತರರು ದುಡಿದು, ಹೋರಾಡಿ ಮಡಿದಿದ್ದಾರೆ. ಡಾ. ಬಿನಾಯಕ್ ಸೇನ್ ಸಹ ಅದೇ ಸಾಲಿನಲ್ಲಿ ಸೇರುವ ಜನರ ಹಾಗೂ ಸಮಾಜದ ವೈದ್ಯರು. ಬಿನಾಯಕ್ ಸೇನ್ ತಾವು ವೈದ್ಯ ವೃತ್ತಿಯಲ್ಲಿ ತೆಗೆದುಕೊಂಡ ಪ್ರಮಾಣವನ್ನು ಅಕ್ಷರಶಃ ಅನುಸರಿಸಲು ಯತ್ನಿಸುವ ಪ್ರಕ್ರಿಯೆಯಲ್ಲೇ ನಾಗರಿಕ ಹಕ್ಕುಗಳ ಹೋರಾಟಗಾರರೂ ಆದರು. ತಾವು ಮಾಡುತ್ತಿದ್ದ ವೈದ್ಯ ವೃತ್ತಿಗೆ ಆದಿವಾಸಿಗಳ ಸಾಮಾಜಿಕ ಮತ್ತು ಆಥರ್ಿಕ ಹಕ್ಕಿಗಾಗಿ ನಡೆಸುತ್ತಿದ್ದ ಹೋರಾಟಗಳು ಪೂರಕ ಮತ್ತು ಅದರ ಅವಿಭಾಜ್ಯ ಅಂಗವೆಂದೇ ಅವರು ಭಾವಿಸಿದ್ದರು. ಇದು ಪ್ರಾಯಶಃ ಪ್ರಭುತ್ವದ ಕಣ್ಣಲ್ಲಿ ಅವರು ಮಾಡಿದ ಎರಡನೇ ಅಪರಾಧವಾಗಿತ್ತು!
ನಿಸ್ವಾರ್ಥವಾಗಿ ಜೀವಿಸಿದ್ದು ಮತ್ತು ಆದಿವಾಸಿಗಳ ಪರವಾಗಿ ಹಾಗು ನಿಜವಾದ ಪ್ರಜಾಪ್ರಭುತ್ವಕ್ಕಾಗಿ ಧ್ವನಿ ಎತ್ತಿದ್ದ ಡಾ. ಬಿನಾಯಕ್ ಸೇನ್ರನ್ನು ಈ ಕಾಪರ್ೊರೇಟ್ ಪ್ರಭುತ್ವ ಸಹಿಸಲು ಸಾಧ್ಯವೇ ಇರಲಿಲ್ಲ. ಆದಿವಾಸಿಗಳ ಪರವಾಗಿ ಶಸ್ತ್ರಧರಿಸಿ ಹೋರಾಡುತ್ತಿರುವ ನಕ್ಸಲರ ಮೇಲೆ ಸುಲಭವಾಗಿ `ಪ್ರಭುತ್ವದ ವಿರುದ್ಧ ಯುದ್ಧ ಹೂಡಿರುವ ಅಪರಾಧ' ಹೊರಿಸಿ ಕೊಲ್ಲುವುದು ಅಥವಾ ಸೆರೆಗೆ ದೂಡುವುದನ್ನು ಅಭ್ಯಾಸ ಮಾಡಿಕೊಂಡಿರುವ ಸಕರ್ಾರಕ್ಕೆ ಈ ನಿರಾಯುಧ ಯೋಧನನ್ನು ಬಲಿ ಹಾಕುವುದು ಹೇಗೆ ಎಂಬುದು ತಲೆನೋವಾಗಿತ್ತು.
ಆ ಸಂದರ್ಭದಲ್ಲಿಯೇ ಜೈಲಿನಲ್ಲಿದ್ದ ಮಾವೋವಾದಿ ನಾಯಕನನ್ನು ಅವರ ಕುಟುಂಬದ ಮನವಿಯ ಮೇರೆಗೆ ಡಾ. ಬಿನಾಯಕ್ ಸೇನ್ ಆರೋಗ್ಯ ಸಂಬಂಧಿ ವಿಚಾರಗಳಲ್ಲಿ ಪದೇಪದೇ ಭೇಟಿಯಾಗಿರುವುದು ಸಕರ್ಾರದ ಗಮನಕ್ಕೆ ಬಂದಿತು. ಅದನ್ನೇ ಬಳಸಿಕೊಂಡು 2007ರ ಮೇ ತಿಂಗಳಲ್ಲಿ ಬಿನಾಯಕ್ ಸೇನ್ ಇಲ್ಲದಿರುವಾಗ ಅವರ ಮನೆಯನ್ನು ಪೊಲೀಸರು ರೇಡ್ ಮಾಡಿದರು. ಅವರ ಮನೆಯಲ್ಲಿದ್ದ ಕಂಪ್ಯೂಟರ್, ಅವರ ಸಾಹಿತ್ಯ ಮೆಡಿಕಲ್ ಪುಸ್ತಕಗಳು ಎಲ್ಲವನ್ನು ವಶಪಡಿಸಿಕೊಂಡರು. ಮಾತ್ರವಲ್ಲದೆ, ಆಗ ಡಾ. ಬಿನಾಯಕ್ ಸೇನ್ ಬಳಿ ಜೈಲಿನಲ್ಲಿದ್ದ ಮಾವೋವಾದಿ ನಾಯಕ ನಾರಾಯಣ ಸನ್ಯಾಲ್ ತನ್ನ ಪಕ್ಷದ ಇತರ ಸದಸ್ಯರಿಗೆ ತಲುಪಿಸಲು ನೀಡಲಾಗಿದ್ದ ಪತ್ರವೊಂದು ಸಿಕ್ಕಿತೆಂದೂ, ಡಾ. ಸೇನ್ ಈ ರೀತಿ ಬಹಿಷ್ಕೃತ ಮಾವೋವಾದಿ ಸಂಘಟನೆಯ ಕುರಿಯರ್ ಆಗಿ ಕೆಲಸ ಮಾಡುತ್ತಿ ದ್ದಾರೆಂದೂ, ಇದು ಛತ್ತೀಸ್ಘಡ್ ವಿಶೇಷ ಸಾರ್ವಜನಿಕ ಭದ್ರತಾ ಕಾಯಿದೆ ಮತ್ತು ಅನ್ ಲಾಫುಲ್ ಆಕ್ಟಿವಿಟೀಸ್ ಪ್ರಿವೆನ್ಷನ್ ಆಕ್ಟ್ ಅಡಿ ಶಿಕ್ಷಾರ್ಹ ಅಪರಾಧವೆಂದೂ ಆರೋಪ ಹೊರಿಸಿ 2007ರ ಮೇ 14ರಂದು ಬಂಧಿಸಿದರು.
ಡಾ. ಸೇನ್ರ ಬಂಧನದ ಸುದ್ದಿ ಇಡೀ ದೇಶವನ್ನೇ ಮಾತ್ರವಲ್ಲದೆ ಜಗತ್ತಿನಾದ್ಯಂತ ಹರಡಿಕೊಂಡಿರುವ ಅವರ ಅಭಿಮಾನಿಗಳನ್ನು, ಪ್ರಜಾತಂತ್ರವಾದಿಗಳನ್ನು ಬೆಚ್ಚಿಬೀಳಿಸಿತು. ಛತ್ತೀಸ್ಘಡ್ ಕೋಟರ್ುಗಳು ಅವರಿಗೆ ಜಾಮೀನು ಕೊಡಲೂ ಸಹ ನಿರಾಕರಿಸಿದವು. ಸುಪ್ರೀಂ ಕೋಟರ್ು ಸಹ ಪ್ರಾರಂಭದಲ್ಲಿ ಅವರಿಗೆ ಬೇಲ್ ನಿರಾಕರಿಸಿತು. ಆದರೆ ಸೇನ್ರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಜಗತ್ತಿನ ಇಪ್ಪತ್ತಕ್ಕೂ ಹೆಚ್ಚು ನೊಬೆಲ್ ಪ್ರಶಸ್ತಿ ವಿಜೇತರೂ, ಖ್ಯಾತ ಬುದ್ಧಿಜೀವಿಗಳು, ಸಹಸ್ರಾರು ಸಂಘಸಂಸ್ಥೆಗಳು ಪ್ರಚಾರಾಂದೋ ಲನ ಮತ್ತು ಹೋರಾಟದ ಅಭಿಯಾನವನ್ನೇ ಪ್ರಾರಂಭಿಸಿದರು. ಈ ಎಲ್ಲಾ ಕಾರಣದಿಂದ ಕೊನೆಗೂ 2009ರ ಮೇನಲ್ಲಿ ಅಂದರೆ ವಿನಾಕಾರಣ ಭತರ್ಿ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿದ ನಂತರವೇ ಅವರನ್ನು ಸುಪ್ರೀಂ ಕೋಟರ್ು ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆ ಮಾಡಿತು.
ಆದರೆ ಹೇಗಾದರೂ ಸರಿ ಬಿನಾಯಕ್ ಸೇನರಿಗೆ ಶಿಕ್ಷೆ ವಿಧಿಸುವುದು ಪ್ರಭುತ್ವಕ್ಕೆ ಅತ್ಯಗತ್ಯವಾಗಿತ್ತು. ಏಕೆಂದರೆ ನ್ಯಾಯದ ಪರವಾಗಿ ಬಿನಾಯಕ್ ಸೇನ್ರಂಥ ಖ್ಯಾತನಾಮರೇ ಶಿಕ್ಷೆಗೆ ಒಳಗಾದರೆ ಉಳಿದವರು ತಾವಾಗಿಯೇ ಅನ್ಯಾಯವನ್ನು ಸಹಿಸಿಕೊಂಡು ಸುಮ್ಮನಾಗುತ್ತಾರೆ ಎಂಬುದು ಸಕರ್ಾರದ ಪ್ರಭುತ್ವದ ಹುನ್ನಾರವಾಗಿತ್ತು.
ಆದರೆ ಅತ್ಯಂತ ದುರದೃಷ್ಟದ ಸಂಗತಿಯೆಂದರೆ ಪ್ರಜಾಸತ್ತೆಯ ಪ್ರಮುಖ ಅಂಗವಾಗಿರಬೇಕಿದ್ದ ಸ್ವತಂತ್ರ ನ್ಯಾಯಾಲಯವೂ ಈ ಪ್ರಕರಣದಲ್ಲಿ ತನ್ನ ನ್ಯಾಯವಿಚಕ್ಷತೆ ಯನ್ನು ಮತ್ತು ನಿಷ್ಪಕ್ಷಪಾತತನವನ್ನು ಬದಿಗಿಟ್ಟು ಕಣ್ಣಿಗೆ ಖಾಕಿ ಪಟ್ಟಿಯನ್ನು ಕಟ್ಟಿಕೊಂಡು ಹೆಚ್ಚು ಕಡಿಮೆ ಪೊಲೀಸರು ದಾವೆಯಲ್ಲಿ ನೀಡಿದ್ದ ಅಜರ್ಿಯನ್ನೇ ತೀಪರ್ೆಂದು ಓದಿರುವುದು! ಮೇಲ್ನೋಟಕ್ಕೆ ನೋಡಿದರೂ ನ್ಯಾಯಾಲಯ ಈ ಪ್ರಕರಣದಲ್ಲಿ ಸಂಪೂರ್ಣ ಏಕಪಕ್ಷೀಯವಾಗಿ, ಪೊಲೀಸರ ಮತ್ತು ಪ್ರಬಲರು ಸೃಷ್ಟಿಸಿದ ಪೂರ್ವ ಗ್ರಹಗಳಿಗೆ ಮತ್ತು ನಾಗರಿಕ ಹೋರಾಟಗಳ ಬಗ್ಗೆ ವ್ಯಕ್ತಿಗತವಾಗಿ ತಾವು ನಂಬುವ ಸೈದ್ಧಾಂತಿಕ ಪೂರ್ವಗ್ರಹಗಳಿಗೆ ಬಲಿಯಾಗಿಯೇ ತೀಪರ್ು ಕೊಟ್ಟಿರುವುದು ಎದ್ದು ಕಾಣುತ್ತದೆ.
ಪ್ರಾಸಿಕ್ಯುಷನ್ ವಾದದ ಪ್ರಕಾರ ಡಾ. ಬಿನಾಯಕ್ ಸೇನ್ ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ ಕಾರ್ಯಕರ್ತರು. ಆ ಸಂಘಟನೆಯ ಕಾರ್ಯಚಟುವಟಿಕೆ ಯನ್ನು ಪ್ರಸರಿಸಲು ಅವರು ಜೈಲಿನಲ್ಲಿದ್ದ ಮಾವೋವಾದಿ ಪಕ್ಷದ ನಾಯಕ ನಾರಾಯಣ ಸನ್ಯಾಲ್ ಅವರಿಂದ ದೇಶದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸಲು ಸೂಚನೆ ಇರುವ ಪತ್ರಗಳನ್ನು ತೆಗೆದುಕೊಂಡು ಪಕ್ಷದ ಇತರ ಕಾರ್ಯಕರ್ತರಿಗೆ ತಲುಪಿಸಲು ಮತ್ತೊಬ್ಬ ಮಾವೋವಾದಿ ಪಕ್ಷದ ಕಾರ್ಯಕರ್ತರಾದ ಪೀಯೂಷ್ ಗುಹಾ ಎಂಬುವರಿಗೆ ಕೊಡುತ್ತಿದ್ದರು. ಹೀಗಾಗಿ ಈ ಮೂವರು (ನಾರಾಯಣ್ ಸನ್ಯಾಲ್, ಡಾ. ಬಿನಾಯಕ್ ಸೇನ್, ಪೀಯೂಷ್ ಗುಹಾ) ಬಹಿಷ್ಕೃತ ಸಂಘಟನೆಯ ಸದಸ್ಯರಾಗಿರುವುದು ಒಂದು ಅಪರಾಧ. ಹಾಗೆಯೇ ಸಕರ್ಾರದ ವಿರುದ್ಧ ಸಂಚುಕೂಟ ರೂಪಿಸಿದ್ದು ಎರಡನೇ ಅಪರಾಧ. ಸಕರ್ಾರದ ವಿರುದ್ಧ ಯುದ್ಧ ಹೂಡಲು ಸನ್ನಾಹ ಹೂಡಿದ್ದು ಮೂರನೇ ಅಪರಾಧ. ಆದ್ದರಿಂದ ಐಪಿಸ್ ಸೆಕ್ಷನ್ 124-, 120-ಬಿ, ಛತ್ತೀಸ್ಘಡ್ ವಿಶೇಷ ಜನ ಸುರಕ್ಷಾ ಅಧಿನಿಯಮದ 8 (1), 8 (2), 8 (3), ಮತ್ತು 8 (5), ಮತ್ತು Unlawful Activities Prevention Act, 1967 ನ ಸೆಕ್ಷನ್ 39 (2) ರಡಿ ಅವರೆಲ್ಲರ ಮೇಲೆ ಆರೋಪಗಳನ್ನು ಹೊರಿಸಲಾಗಿತ್ತು.
ಆದರೆ ಇವೆಲ್ಲಾ ಆರೋಪಗಳಷ್ಟೆ! ಇದನ್ನು ಅನುಮಾನ ಕ್ಕೆಡೆಯಿಲ್ಲದಂತೆ ಸಾಬೀತುಮಾಡುವ ಜವಾಬ್ದಾರಿ ತನಿಖಾಧಿ ಕಾರಿ ಪೊಲೀಸರದ್ದು ಮತ್ತು ಅವರ ಪರವಾಗಿ ವಾದ ಮಾಡುವ ಪ್ರಾಸಿಕ್ಯುಷನ್ ವಕೀಲರದ್ದು. ಅವರು ಮಾಡುವ ವಾದ ಮತ್ತು ನೀಡುವ ಸಾಕ್ಷಿ ಪುರಾವೆಗಳು ಹಾಗೂ ಆರೋಪಿಯು ತನ್ನ ಸಮರ್ಥನೆಗೆ ನೀಡುವ ಸಾಕ್ಷಿ ಪುರಾವೆಗಳನ್ನೆಲ್ಲಾ ತುಲನೆ ಮಾಡಿ ನ್ಯಾಯಾಧೀಶ ತನ್ನ ತೀಪರ್ು ನೀಡಬೇಕು. ಆ ತೀಪರ್ು ನಿರಪರಾಧಿಗೆ ವಿನಾಕಾರಣ ಶಿಕ್ಷೆಯಾಗದಂಥ ನ್ಯಾಯಸಂಹಿತೆಯನ್ನೂ ಮತ್ತು ಅನುಮಾನಕ್ಕೆಡೆ ಕೊಡದಂತೆ ಅಪರಾಧ ಸಾಬೀತಾಗಬೇಕಾದ ನ್ಯಾಯಪ್ರಕ್ರಿಯೆಯನ್ನು ಅನುಸರಿಸಬೇಕು. ಅದರಲ್ಲೂ ದೇಶದ್ರೋಹದ ಆಪಾದನೆಯನ್ನು ಒಪ್ಪಿಕೊಳ್ಳಬೇಕಾದರೆ ಹಾಗೂ ಜೀವಾವಧಿಯಂತ ಘೋರ ಶಿಕ್ಷೆ ವಿಧಿಸಬೇಕಾದರೆ ಅಂಥ ಆರೋಪ ಕಿಂಚಿತ್ತೂ ಅನುಮಾನಕ್ಕೆ ಎಡೆಯಿಲ್ಲದಂತೆ ಸಾಬೀತಾಗಿರಬೇಕು. ಇಂಥಾ ಪ್ರಕರಣಗಳಲ್ಲಿ ಕೆಳನ್ಯಾಯಾ ಲಯಗಳಲ್ಲಿ ನ್ಯಾಯ ಪ್ರಕ್ರಿಯೆ ಅನುಸರಿಸಬೇಕಾದ ವಿಧಾನಗಳ ಬಗ್ಗೆ ಸುಪ್ರೀಂಕೋಟರ್ು ಕೆಲವು ಸ್ಪಷ್ಟ ನಿದರ್ೆಶನಗಳನ್ನೂ ಮತ್ತು ಲ್ಯಾಂಡ್ಮಾಕರ್್ ತೀಪರ್ುಗಳನ್ನೂ ನೀಡಿದೆ. ಉದಾಹರಣೆಗೆ ದೇಶದ್ರೋಹದ ಆಪಾದನೆ ಸ್ವೀಕೃತ ವಾಗಬೇಕಾದರೆ ಅಂತಹ ಅಪರಾಧ ನೇರ ಹಿಂಸಾಚರಣೆಗೂ ಕಾರಣವಾಗಿರಬೇಕು ಎಂಬುದು ಒಂದು ಮಾರ್ಗದರ್ಶನ.
ಆದರೆ ಪ್ರಾಸಿಕ್ಯುಷನ್ ಪರ ವಾದವಾಗಲೀ, ರಾಯಪುರದ ಎರಡನೇ ಸೆಷನ್ಸ್ ಜಡ್ಜ್ ಬಿ.ಪಿ. ವಮರ್ಾ ಆಗಲೀ ಈ ಯಾವುದೇ ಪ್ರಕ್ರಿಯೆಯನ್ನು ಮತ್ತು ಸಂಹಿತೆಯನ್ನು ಅನುಸರಿಸಿಲ್ಲ. ಉದಾಹರಣೆಗೆ ಡಾ. ಬಿನಾಯಕ್ ಸೇನ್ ಮಾವೋವಾದಿ ಎಂದು ಆರೋಪಿಸಲು ಪೊಲೀಸರು ಹೊರಿಸಿರುವ ಆರೋಪಗಳು ಇವು:
1.      ಡಾ. ಸೇನ್ 33 ಕ್ಕೂ ಹೆಚ್ಚು ಸಲ ಮಾವೋವಾದಿ ನಾಯಕ ನಾರಾಯಣ ಸನ್ಯಾಲ್ ಅವರನ್ನು ಜೈಲಿನಲ್ಲಿ ಭೇಟಿ ಮಾಡಿದ್ದಾರೆ.
2.     ಡಾ. ಸೇನ್ ಶಿಫಾರಸ್ಸಿನ ಮೇರೆಗೆ ಸನ್ಯಾಲರಿಗೆ ಮನೆ ಬಾಡಿಗೆಗೆ ನೀಡಲಾಗಿದೆ. ಇದು ಅವರಿಬ್ಬರ ಸಂಬಂಧ ವನ್ನು ಸಾಬೀತುಮಾಡುತ್ತದೆ.
3.     ಡಾ. ಸೇನ್ ನಾರಾಯಣ ಸನ್ಯಾಲ್ ಅವರಿಂದ ಪತ್ರವನ್ನು ತೆಗೆದುಕೊಂಡು ಪೀಯೂಷ್ ಗುಹಾ ಅವರಿಗೆ ತಲುಪಿಸಿದ್ದಾರೆ.
4.     ಡಾ. ಸೇನ್ ಮತ್ತು ಅವರ ಪತ್ನಿ ಇಳಿನಾ ಸೇನ್ ಶಂಕರ್ ಸಿಂಗ್ ಮತ್ತು ಅಮಿತಾ ಶ್ರೀವಾಸ್ತವ ಎಂಬ ಇಬ್ಬರು ಮಾವೋವಾದಿಗಳಿಗೆ ತಮ್ಮ `ರೂಪಾಂತರ್' ಎಂಬ ಸಂಸ್ಥೆಯಲ್ಲಿ ಕೆಲಸ ಕೊಟ್ಟಿದ್ದರು. ಡಾ. ಸೇನ್ ದಂಪತಿಗಳು ಕಾಡಿನಲ್ಲಿ ಹಲವಾರು ಬಾರಿ ಮಾವೋ ವಾದಿಗಳ ಸಭೆಯಲ್ಲಿ ಭಾಗವಹಿಸಿದ್ದರು.
5.     ಡಾ. ಸೇನರು ಛತ್ತೀಸ್ಘಡ್ದಲ್ಲಿ ತಮ್ಮ ಪಕ್ಷಕ್ಕೆ ಮಾಡುತ್ತಿರುವ ಸೇವೆಯನ್ನು ಶ್ಲಾಘಿಸಿ ಮಾವೋವಾದಿ ಪಕ್ಷದ ಕೇಂದ್ರ ಸಮಿತಿ ಸೇನ್ರಿಗೆ ಬರೆದ ಪತ್ರ ದೊರೆತಿದೆ.
ಮೊದಲನೆಯದಾಗಿ ಡಾ.ಸೇನ್ ಮಾವೋವಾದಿ ನಾಯಕ ಸನ್ಯಾಲರನ್ನು 33 ಬಾರಿ ಭೇಟಿಯಾದ ಆರೋಪ.
ಡಾ. ಸೇನ್ ಅವರಿಗೆ ನಾರಾಯಣ್ ಸನ್ಯಾಲರ ಮನೆಯವರು ಜೈಲಿನಲ್ಲಿರುವ ತಮ್ಮ ಸಂಬಂಧಿಯ ಆರೋಗ್ಯವನ್ನು ಜೈಲಿನ ಅಧಿಕಾರಿಗಳು ಕಡೆಗಣಿಸುತ್ತಿರುವುದರಿಂದ ನಾಗರಿಕ ಹಕ್ಕು ಸಂಘಟನೆಯ ಕಾರ್ಯಕರ್ತರಾಗಿ ತಾವು ಮಧ್ಯಪ್ರವೇಶ ಮಾಡಬೇಕೆಂದು ಮನವಿ ಮಾಡಿರುವ ಪತ್ರವನ್ನು ಸೇನ್ ಅವರೇ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಪ್ರತಿಬಾರಿ ಯಾವುದೇ ಗುಟ್ಟು-ಗುಮಾನಿಗೆ ಅವಕಾಶ ಕೊಡದಂತೆ ಪಿಯುಸಿಲ್ ಲೆಟರ್ ಹೆಡ್ಡಿನಲ್ಲೇ ಭೇಟಿಗೆ ಅವಕಾಶ ಕೋರಿದ್ದಾರೆ ಮತ್ತು ಜೈಲು ಅಧಿಕಾರಿಗಳ ಸಮಕ್ಷಮದಲ್ಲಿಯೇ ಅವರಿಬ್ಬರ ಭೇಟಿ ನಡೆದಿದೆ. ಪಾಟಿ ಸವಾಲಿನಲ್ಲಿ ಜೈಲಿನ ಅಧಿಕಾರಿಗಳು ಇವೆಲ್ಲವನ್ನೂ ದೃಢೀಕರಿಸಿದ್ದು ಮಾತ್ರವಲ್ಲದೆ ತಮ್ಮ ಕಣ್ಣು ತಪ್ಪಿಸಿ ಸನ್ಯಾಲರು ಯಾವುದೇ ಪತ್ರವನ್ನು ಸೇನ್ ಅವರಿಗೆ ಕೊಟ್ಟಿರುವ ಸಾಧ್ಯತೆಯೆ ಇಲ್ಲವೆಂದು ದೃಢವಾಗಿ ಹೇಳಿದ್ದಾರೆ. ಅಲ್ಲದೆ ಅವರಿಬ್ಬರೂ ಆರೋಗ್ಯದ ವಿಷಯವನ್ನು ಹೊರತುಪಡಿಸಿ ಬೇರೆ ಯಾವುದೇ ಮಾತುಗಳನ್ನು ಆಡಿಲ್ಲವೆಂದೂ ಹೇಳಿಕೆ ನೀಡಿದ್ದಾರೆ. ಆದರೂ ನ್ಯಾಯಾಲಯ ಈ ಹೇಳಿಕೆಯನ್ನೇ ಗಮನಕ್ಕೆ ತೆಗೆದುಕೊಳ್ಳಲಿಲ್ಲವೇಕೆ?
ಎರಡನೆಯದಾಗಿ ಡಾ. ಸೇನ್ ದಂಪತಿಗಳು ಮಾವೋವಾದಿಗಳು ಎಂಬುದಕ್ಕೆ ಪೊಲೀಸರು ಮುಂದಿಟ್ಟಿರುವ ಸಾಕ್ಷ್ಯಗಳಾದರೂ ಏನು? ಅವರು ಶಂಕರ್ ಮತ್ತು ಅಮಿತ್ ಎಂಬ ಇಬ್ಬರು ಮಾವೋವಾದಿಗಳಿಗೆ ಕೆಲಸ ಕೊಟ್ಟಿದ್ದರು ಎಂಬುದು. ಅಮಿತ್ ಮತ್ತು ಶಂಕರ್ ಎಂಬ ಹೆಸರುಳ್ಳ ಇಬ್ಬರು ಮಾವೋವಾದಿಗಳು ಇರುವುದು ನಿಜ. ಆದರೆ ಆ ಇಬ್ಬರು ಸೇನ್ ದಂಪತಿಗಳು ಕೆಲಸ ಕೊಟ್ಟಿದ್ದ ವ್ಯಕ್ತಿಗಳಲ್ಲ ಎಂಬುದನ್ನು ಪೊಲೀಸರೇ ಪಾಟಿ ಸವಾಲಿನ ಸಂದರ್ಭದಲ್ಲಿ ಒಪ್ಪಿಕೊಂಡಿದ್ದಾರೆ. ಸೇನ್ ದಂಪತಿಗಳು ಕಾಡಿನಲ್ಲಿ ಮಾವೋವಾದಿಗಳ ಸಭೆಯಲ್ಲಿ ಭಾಗವಹಿಸಿದ್ದರು ಎಂಬುದಕ್ಕೆ ಪೊಲೀಸರು ತೋರಿದ ಒಂದು ಡಾಕ್ಯುಮೆಂಟರಿ ಚಿತ್ರ ವಾಸ್ತವವಾಗಿ ಆದಿವಾಸಿಗಳ ಜೊತೆ ಅವರ ಆರೋಗ್ಯದ ಬಗ್ಗೆ ನಡೆಸುತ್ತಿದ್ದ ಸಂಭಾಷಣೆಯ ತುಣಕೆಂದು ಆ ಸಾಕ್ಷ ್ಯ ಚಿತ್ರ ತೆಗೆದವರೇ ಕೋಟರ್ಿನಲ್ಲಿ ಸಾಕ್ಷ ್ಯ ಹೇಳಿದ್ದಾರೆ.
ಇಳಿನಾ ಸೇನ್ ಅವರು ಐಎಸ್ಐ ಎಂಬ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಯೊಡನೆ ಸಂಪರ್ಕ ಹೊಂದಿದ್ದಾರೆ ಎಂದೂ ಪೊಲೀಸರು ಆಪಾದನೆ ಮಾಡಿದ್ದರು. ಅದಕ್ಕೆ ಅವರು ತೋರಿದ ಪುರಾವೆ ದೆಹಲಿ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾಗಿರುವ ಇಂಡಿಯನ್ ಸೋಷಿಯಲ್ ಇನ್ಸ್ಟಿಟ್ಯೂಟ್ (ಐಎಸ್ಐ!)ಗೆ ಬರೆದ ಪತ್ರ. ಅದಲ್ಲದೆ `ಕಾಮ್ರೇಡ್' ಎಂದು ಅದರ ಅಧ್ಯಕ್ಷರನ್ನು ಸಂಬೋಧಿಸಿದ್ದನ್ನು ಸಹ ಪೊಲೀಸರು ಸೇನ್ ದಂಪತಿಗಳು ಮಾವೋವಾದಿಗಳು ಎಂದು ಸಾಬೀತುಮಾಡಲು ಸಾಕ್ಷ ್ಯವನ್ನಾಗಿ ಮುಂದಿಟ್ಟಿದ್ದರು. ಮೇಲ್ನೋಟಕ್ಕೆ ಹಾಸ್ಯಾಸ್ಪದವಾಗಿರುವ ಪೊಲೀಸರ ಈ ಪ್ರಯತ್ನಗಳನ್ನು ಮಾತ್ರ ನ್ಯಾಯಾಲಯ ಕಿಂಚಿತ್ತೂ ಶಂಕಿಸಿಲ್ಲ.
ಇದಲ್ಲದೆ ಸನ್ಯಾಲ್ ಎಂಬ ಮಾವೋವಾದಿ ನಾಯಕರನ್ನು ರಾಯಪುರದ ಬಾಡಿಗೆ ಮನೆಯೊಂದರಿಂದ ಬಂಧಿಸಲಾಗಿದೆಯೆಂದೂ, ಆ ಮನೆಯನ್ನು ಅವರಿಗೆ ಬಾಡಿಗೆ ಕೊಡಿಸಿದ್ದು ಸೇನ್ ಎಂಬುದು ಪೊಲೀಸರ ವಾದ. ಆದರೆ ಕೋಟರ್ಿಗೆ ಪೊಲೀಸರೇ ನೀಡಿರುವ ಮತ್ತೊಂದು ದಾಖಲೆಯಲ್ಲಿ ಸನ್ಯಾಲರನ್ನು ಆಂಧ್ರದ ಭದ್ರಾಚಲಂನಲ್ಲಿ ಬಂಧಿಸಲಾಗಿದೆಯೆಂದು ಹೇಳಿದ್ದಾರೆ. ಆ ಬಾಡಿಗೆ ಮನೆಯ ಮಾಲೀಕರ ಪ್ರಾಥಮಿಕ ಹೇಳಿಕೆಯಲ್ಲಿಯೂ ಸೇನ್ರ ಪ್ರಸ್ತಾಪ ಇಲ್ಲ. ಅದನ್ನು ನಂತರದಲ್ಲಿ ಸೇರಿಸಲಾಗಿದೆ. ಹಾಗೆಯೇ ಮಾವೋವಾದಿ ಕೇಂದ್ರ ಸಮಿತಿಯ ಪ್ರಶಂಸಾ ಪತ್ರಕ್ಕೆ ಯಾರದ್ದೂ ಸಹಿಯೇ ಇಲ್ಲ. ಅದು ಯಾರು ಬೇಕಾದರೂ ಯಾವುದೇ ಕಂಪ್ಯೂಟರ್ನಿಂದ ತೆಗೆಯಬಹುದಾದ ಪ್ರಿಂಟ್ಔಟ್. ಯಾವುದಾದರೂ ದಾಖಲೆಯನ್ನು ಪೊಲೀಸರು ವಶಪಡಿಸಿಕೊಂಡರೆ ಅದನ್ನು ಮಹಜರು ಮಾಡಿ ಪೊಲೀಸ್ ಅಧಿಕಾರಿಯ, ಆರೋಪಿಯ ಮತ್ತು ಸಾಕ್ಷಿಗಳ ಸಹಿಯನ್ನು ಪಡೆದುಕೊಂಡಿರಬೇಕು. ಆದರೆ ಈ ಪತ್ರಕ್ಕೆ ಅವ್ಯಾವುದೂ ಇಲ್ಲ. ಅದಕ್ಕೆ ಕಾರಣವನ್ನು ಕೇಳಿದರೆ ಅದು ಕೈತಪ್ಪಿನಿಂದ ಆದದ್ದೆಂದು ಸಮಜಾಯಿಷಿ ನೀಡಿದ್ದಾರೆ ಪೊಲೀಸರು! ಅದನ್ನು ನ್ಯಾಯಾಲಯ ಒಪ್ಪಿಕೊಂಡಿದೆ!!
ಹೀಗೆ ಡಾ. ಬಿನಾಯಕ್ ಸೇನ್ರನ್ನು ಮಾವೋವಾದಿ ಎನ್ನಲು ಅಥವಾ ಮಾವೋವಾದಿಗಳ ಕುರಿಯರ್ ಎನ್ನಲು ಅಥವಾ ಸಕರ್ಾರದ ವಿರುದ್ಧ ಯುದ್ಧ ಹೂಡಿದ್ದರು ಎನ್ನಲು ಯಾವುದೇ ಸಾಕ್ಷ ್ಯ ಪುರಾವೆಗಳಿಲ್ಲ ಅಥವಾ ಯಾವುದೇ ಬಲವಾದ ಅಥವಾ ಅನುಮಾನಕ್ಕೆಡೆಯಿಲ್ಲದಂತೆ ಸಾಬೀತು ಮಾಡುವ ಸಾಕ್ಷ್ಯಾಧಾರಗಳಿಲ್ಲ.
ಆದರೂ ಡಾ. ಬಿನಾಯಕ್ ಸೇನ್ರನ್ನು ನ್ಯಾಯಾಲಯ ತಪ್ಪಿತಸ್ಥನೆಂದು ಪರಿಗಣಿಸಿ ಜೀವಾವಧಿಯಂಥ ಘನಘೋರ ಶಿಕ್ಷೆ ವಿಧಿಸಲು ಕಾರಣವೇನು? ನ್ಯಾಯಾಧೀಶ ವಮರ್ಾರವರು ತಮ್ಮ 90 ಪುಟಗಳ ತೀಪರ್ಿನಲ್ಲಿ ಒಂದು ಕಡೆ `ಪೊಲೀಸರು ತಮ್ಮ ಸಾಕ್ಷ್ಯಗಳನ್ನು ಒದಗಿಸುವಾಗ ಅಲ್ಪಸ್ವಲ್ಪ ತಪ್ಪು ಮಾಡಿರುವುದು ನಿಜ. ಆದರೆ ಅದನ್ನು ದೊಡ್ಡದು ಮಾಡುವ ಅಗತ್ಯವಿಲ್ಲ' ಎನ್ನುತ್ತಾರೆ. ಸೇನ್ರ ಪರವಾಗಿ ಬಂದ ಯಾವುದೇ ಸಾಕ್ಷಿಗಳನ್ನು ಮತ್ತು ಅವರ ವಾದಗಳನ್ನು ಎಲ್ಲಿಯೂ ಪರಿಗಣಿಸಿಲ್ಲ. ಬದಲಾಗಿ, ಪೊಲೀಸರ ಹೇಳಿಕೆಗಳನ್ನು ಆರೋಪಿ ಪರ ವಕೀಲರ ಪಾಟಿ ಸವಾಲಿನ ಬೆಳಕಿನಲ್ಲಿ ಪರಾಮಶರ್ೆ ಮಾಡದೆ ಯಥಾವತ್ ಒಪ್ಪಿಕೊಂಡಿದ್ದಾರೆ. ಹೀಗೆ ಉದ್ದಕ್ಕೂ ನ್ಯಾಯಾಲಯ ಪೊಲೀಸರ ಪರವಾದ ಮತ್ತು ಡಾ. ಸೇನ್ ವಿರುದ್ಧವಾದ ಮನೋಧೋರಣೆಯನ್ನೇ ವ್ಯಕ್ತಪಡಿಸಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಸಾಲ್ವಾ ಜುಡುಂ ಎಂಬುದು ನಾಗರಿಕತೆಗೇ ಅಪಮಾನ ಮಾಡುವಂತಹ, ಪೊಲೀಸರು ಸೃಷ್ಟಿಸಿರುವ ಖಾಸಗಿ ಸೇನೆಯೆಂದು ಸಾಕ್ಷಾತ್ ಸುಪ್ರೀಂ ಕೋಟರ್ೆ ತೀಮರ್ಾನ ನೀಡಿದೆ. ಆದರೂ ಈ ಪ್ರಕರಣದಲ್ಲಿ ನ್ಯಾಯಾಧೀಶ ವಮರ್ಾರವರು ಸಾಲ್ವಾ ಜುಡುಂ ಎಂಬುದು ಆದಿವಾಸಿಗಳ ಪರವಾದ ಶಾಂತಿ ಸಂಘಟನೆ, ಅದರ ವಿರುದ್ಧ ಡಾ. ಸೇನ್ ಹೋರಾಟ ಮಾಡಿರುವುದು ತಪ್ಪು ಮತ್ತು ಇದರ ಹಿಂದೆ ಸೇನ್ರ ನಕ್ಸಲ್ ಪರ ನಿಲುವು ಸ್ಪಷ್ಟಗೊಳ್ಳುತ್ತದೆಂದು ಅಭಿಪ್ರಾಯ ಪಟ್ಟಿದ್ದಾರೆ. ಕೊನೆಯಲ್ಲಿ ಡಾ.ಸೇನ್ ಮಾಡಿದ ತಪ್ಪಿಗೆ ಜೀವಾವಧಿ ಶಿಕ್ಷೆ ಹೆಚ್ಚಾದರೂ ಛತ್ತೀಸ್ಘಡ್ನಲ್ಲಿ ಮಾವೋವಾದಿಗಳು ನಡೆಸುತ್ತಿರುವ ಕ್ರೌರ್ಯವನ್ನು ನೋಡಿದರೆ ಹೆಚ್ಚೇನಲ್ಲ ಎಂದು ಸಮಥರ್ಿಸಿಕೊಳ್ಳುತ್ತಾರೆ!!
ನ್ಯಾಯಾಧೀಶರ ಈ ಹೇಳಿಕೆಯೇ ಇಡೀ ತೀಪರ್ಿನ ಹಿಂದೆ ಎಂಥ ಸೈದ್ಧಾಂತಿಕ ಪೂರ್ವಗ್ರಹ ಕೆಲಸ ಮಾಡಿದೆ ಎಂಬುದನ್ನು ತೋರಿಸುತ್ತದೆ. ಸಾಕ್ಷ್ಯ, ಪುರಾವೆ, ನ್ಯಾಯಸಂಹಿತೆ ಎಲ್ಲವನ್ನೂ ಈ ನ್ಯಾಯಾಧೀಶರು ತಮ್ಮ ಕಣ್ಣಿಗೆ ಕಟ್ಟಿಕೊಂಡ ಖಾಕಿ ಪಟ್ಟಿ ನಿರರ್ಥಕಗೊಳಿಸಿದೆ. ಇತ್ತೀಚೆಗೆ ಹೊರಬಿದ್ದ ಅಯೋಧ್ಯ-ಬಾಬ್ರಿ ಮಸೀದಿ ತೀಪರ್ಿನಲ್ಲೂ ಸಾಕ್ಷಿ-ಪುರಾವೆಗಳಿಗಿಂತ ಬಲಿಷ್ಠರು ಸೃಷ್ಟಿಸಿದ ಪೂವರ್ಾಗ್ರಹಗಳಿಗೆ ನ್ಯಾಯ ಬಲಿಯಾಗಿತ್ತು. ಅದಕ್ಕೂ ಹಿಂದೆ ಅಫ್ಜಲ್ ಗುರುವಿಗೆ ಸಂಸತ್ ದಾಳಿ ಪ್ರಕರಣದಲ್ಲಿ ಮರಣದಂಡನೆ ವಿಧಿಸುವಾಗಲೂ ಸುಪ್ರೀಂ ಕೋಟರ್ು ಹೇಳಿದ್ದು ಪ್ರಕರಣದಲ್ಲಿ ಆರೋಪಿಯ ಪಾಲು ಮರಣದಂಡನೆ ವಿಧಿಸುವಷ್ಟು ಗುರುತರವಲ್ಲವಾದರೂ ಸಾರ್ವಜನಿಕರ ಸಾಮೂಹಿಕ ಆಕ್ರೋಶವನ್ನು ತೃಪ್ತಗೊಳಿಸಬೇಕಿದ್ದರೆ ಈ ಮರಣದಂಡನೆ ಅನಿವಾರ್ಯ!!
 ಇದು ಪ್ರಜಾಸತ್ತೆಯನ್ನು ಕಾಪಾಡಿಕೊಳ್ಳುವಲ್ಲಿ ಅಂತಿಮ ಆಸರೆಯೆಂದು ಪರಿಗಣಿಸಲಾಗಿದ್ದ ನ್ಯಾಯಾಂಗವು ನಡೆದುಕೊಳ್ಳುತ್ತಿರುವ ರೀತಿ! ಈ ಎಲ್ಲಾ ಪ್ರಕರಣಗಳಲ್ಲಿ ಹಿಂದೂತ್ವವಾದಿಗಳು ಮತ್ತು ಕಾಪರ್ೊರೇಟ್ ಬಂಡವಾಳಶಾಹಿಗಳು ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಈ ದೇಶದ ಬಡವರ ವಿರುದ್ಧ, ಅವರ ಹೋರಾಟಗಳ ವಿರುದ್ಧ, ಸಾರಾಂಶದಲ್ಲಿ ನಿಜವಾದ ಪ್ರಜಾಸತ್ತೆ ಮತ್ತು ನ್ಯಾಯದ ವಿರುದ್ಧ ಹುಟ್ಟುಹಾಕಿದ ಪ್ರಚಾರಗಳಿಗೆ ಮತ್ತು ಪೂರ್ವಗ್ರಹಗಳಿಗೆ ನ್ಯಾಯಾಲಯ ಬಲಿಯಾಗಿದೆ.
ಡಾ. ಬಿನಾಯಕ್ ಸೇನ್ ಅವರಿಗೆ ನೀಡಿದ ಜೀವಾವಧಿ ಶಿಕ್ಷೆ ಸಾರಾಂಶದಲ್ಲಿ ಪ್ರಜಾತಂತ್ರಕ್ಕೆ ನೀಡಿರುವ ಮರಣದಂಡನೆಯೂ ಆಗಿದೆ. ಆದ್ದರಿಂದಲೇ ಪ್ರಜಾತಂತ್ರದ ಉಳಿವಿಗಾಗಿ ಹೋರಾಡಬೇಕೆಂದಿರುವ ಪ್ರತಿಯೊಬ್ಬರೂ ಡಾ. ಬಿನಾಯಕ್ ಸೇನ್ ಅವರಿಗೆ ನೀಡಿರುವ ಶಿಕ್ಷೆಯ ವಿರುದ್ಧ ರಾಜಿಯಿಲ್ಲದ ಹೋರಾಟಕ್ಕೆ-ಸೇನ್ರನ್ನು ಆರೋಪ ಮುಕ್ತ ಮಾಡುವವರೆಗೆ ಸನ್ನದ್ಧರಾಗುವ ಅಗತ್ಯವಿದೆ.

ಶಿವಸುಂದರ್
ಶೈಕ್ಷಣಿಕ ಪ್ರಗತಿಗೆ ಮಲ್ಪೆ ಪೊಲೀಸರ ಕೊಡುಗೆಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಹಲವು ಪೊಲೀಸು ಠಾಣೆಗಳು ಈಗ ಸಂಘಪರಿವಾರದ ನಿಯಂತ್ರಣದಲ್ಲಿವೆ. ಯಾರ ಮೇಲೆ ಕೇಸು ದಾಖಲಿಸಿಕೊಳ್ಳಬೇಕು ಎಂಬುದರಿಂದ ಹಿಡಿದು, ಕ್ರಿಮಿನಲ್ ಕಾಯ್ದೆಯ ಯಾವ ಕಲಮುಗಳ ಅಡಿ ಅವರ ಮೇಲೆ ಕೇಸು ಜಡಿಯಬೇಕು ಎಂಬುದರವರೆಗೆ, ಪೊಲೀಸರು ಈಗ ಪಾಲಿಸುವುದು ಸಂಘಪರಿವಾರದ ಆಜ್ಞೆಗಳನ್ನೇ ಹೊರತು ದೇಶದ ಕಾನೂನ್ನಲ್ಲ. ಜನರನ್ನು ವಿನಾಕಾರಣ ಪೀಡಿಸುವ ತಮ್ಮ ಲಾಗಾಯ್ತಿನ ಚಾಳಿಯ ಜೊತೆಗೆ ಈಗ
ಕರಾವಳಿಯ ಪೊಲೀಸರು ಪೊಲೀಸು ಠಾಣೆಗಳನ್ನು `ಹಿಂದೂತ್ವ'ದ ಹೊಸ ಹೊಸ ಪ್ರಯೋಗಗಳಿಗೆ ತಕ್ಕುದಾದ ಪ್ರಯೋಗಶಾಲೆಯಾಗಿ ಸಜ್ಜುಗೊಳಿಸುವ ಕೈಂಕರ್ಯದಲ್ಲೂ ನಿಪುಣರಾಗತೊಡಗಿದ್ದಾರೆ. ಈ ವಿಷಯದಲ್ಲಿ ಉಡುಪಿ ಜಿಲ್ಲೆಯ ಹಲವು ಪೊಲೀಸು ಠಾಣೆಗಳ ನಡುವೆ ಭಾರಿ ಪೈಪೋಟಿ ಇರುವಂತಿದೆ; ಇತ್ತೀಚೆಗೆ ಉಡುಪಿಯ ಮಲ್ಪೆ ಠಾಣೆಯ ಪೊಲೀಸರು ಇಂಥ ಪ್ರಯೋಗ ವೊಂದನ್ನು ಕ್ಷಿಪ್ರಗತಿಯಲ್ಲಿ ಯಶಸ್ವಿಗೊಳಿಸಿ, ಮಿಕ್ಕವರಿಗಿಂತ ಒಂದು ಗಜ ಮುಂದೋಡಿದ್ದಾರೆ. ಇವರ ಸ್ಪಧರ್ೆಯ ಉತ್ಸಾಹಕ್ಕೆ ಬಲಿಯಾಗಿರುವವರು ಉಡುಪಿಯ ಖ್ಯಾತ ಕ್ರೈಸ್ತ ಶಿಕ್ಷಣ ಸಂಸ್ಥೆಗೆ ಸೇರಿದ ಶಾಲೆಯ ಶಿಕ್ಷಕಿ ಮತ್ತು ಮುಖ್ಯೋಪಾಧ್ಯಾಯರು ಸ್ಪೆಷಲ್ ಕ್ಲಾಸಿಗೆ ಚಕ್ಕರ್ ಹೊಡೆದ ದಲಿತ ವಿದ್ಯಾಥರ್ಿಗೆ ಏಟು ಕೊಟ್ಟರು ಎಂಬ ಕಾರಣಕ್ಕೆ ಮಲ್ಪೆ ಠಾಣೆಯ ಪೊಲೀಸರು, ಹಿಂದೂತ್ವವಾದಿಗಳ ನಿದರ್ೆಶನದಲ್ಲಿ, ಈ ಶಿಕ್ಷಕರ ಮೇಲೆ ದೂರು ದಾಖಲಿಸಿಕೊಂಡು, ಧರ್ಮನಿಂದನೆ, ದೈಹಿಕ ಹಿಂಸೆಗಳಿಗೆ ಸಂಬಂಧಿಸಿದ ಅತ್ಯಂತ ಕಠಿಣ ಕಲಮ್ಮುಗಳ ಅಡಿಯಲ್ಲಿ ಕೇಸು ಹಾಕಿ, ಕೋಟರ್ಿಗೆ ಹಾಜರುಪಡಿಸಿ, ಮಿಸುಕಾಡದ ಹಾಗೆ ಕ್ರಿಮಿನಲ್ ಮೊಕದ್ದಮೆಯಲ್ಲಿ ಸಿಕ್ಕಿಸಿದ್ದಾರೆ.
ಉಡುಪಿಯ ಸಮೀಪದ ಕಲ್ಯಾಣಪುರದ ಮಿಲಾಗ್ರೆಸ್ ಶಿಕ್ಷಣ ಸಂಸ್ಥೆಗಳಿಗೆ ನೂರು ವರ್ಷಗಳನ್ನೂ ಮೀರಿದ ಚರಿತ್ರೆ ಇದೆ. ಈ ಸಂಸ್ಥೆಗಳನ್ನು ನಡೆಸುವ, 400 ವರ್ಷಗಳ ಹಿಂದೆ ಸ್ಥಾಪಿತವಾದ, ಮಿಲಾಗ್ರೆಸ್ ಚಚರ್್ ಕನರ್ಾಟಕದ ಅತ್ಯಂತ ಪ್ರಾಚೀನ ಚಚರ್ುಗಳಲ್ಲಿ ಒಂದು. ಕಲ್ಯಾಣಪುರದ ಮಿಲಾಗ್ರೆಸ್ ಹೈಸ್ಕೂಲ್ ಸಹ 79 ವರ್ಷಗಳಷ್ಟು ಹಳೆಯದು. ಕರಾವಳಿಯ ಇತರ ಕ್ರೈಸ್ತ ಸಂಸ್ಥೆಗಳ ಹಾಗೆ ಕಲ್ಯಾಣಪುರದ ಮಿಲಾಗ್ರೆಸ್ ಸಂಸ್ಥೆಗಳೂ ಸಹ ತಮ್ಮ ನಿಷ್ಕಳಂಕ ಸೇವೆಯಿಂದ, ಇಲ್ಲಿನ ಎಲ್ಲ ಜಾತಿ, ಮತ, ಪಂಥಗಳವರ ಪ್ರೀತಿ, ಗೌರವಗಳನ್ನು ಗಳಿಸಿಕೊಂಡಿವೆ. ಉಡುಪಿಯ ಖ್ಯಾತ ಸಂಶೋಧಕರಾದ ಗುರುರಾಜ ಭಟ್ಟರಂತಹವರ ಮುಖ್ಯಸ್ಥಿಕೆಯಲ್ಲಿ, ವಿದ್ಯಾಥರ್ಿಗಳಲ್ಲಿ ಹೊಸ ಬಗೆಯ ವಿಚಾರಗಳನ್ನು ಹುಟ್ಟುಹಾಕುವ ಕೆ.ಎಸ್.ಕೆದ್ಲಾಯರಂಥ ಶಿಕ್ಷಕರ ಕಾರ್ಯಶೀಲತೆಯಲ್ಲಿ ಬೆಳೆದ ಸಂಸ್ಥೆಗಳಿವು. ಹಿಂದುಳಿದ ಜಾತಿಯ ವಿದ್ಯಾಥರ್ಿಗಳ ಶೈಕ್ಷಣಿಕ, ಔದ್ಯೋಗಿಕ ಮತ್ತು ವೈಚಾರಿಕ ಬೆಳವಣಿಗೆಗಳನ್ನು ಪ್ರೋತ್ಸಾಹಿಸುವ ಸಲುವಾಗಿಯೇ ಇರುವ ಎಸ್.ಸಿ.-ಎಸ್.ಟಿ. ಸೆಲ್, ಜಿಲ್ಲೆಯ ಇತರ ಶಿಕ್ಷಣ ಸಂಸ್ಥೆಗಳಿಗಿಂತ ಹೆಚ್ಚು ಚುರುಕಿನಿಂದ ಮಿಲಾಗ್ರೆಸ್ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದನ್ನು ನಾವು ಕಂಡಿದ್ದೇವೆ. ಹೀಗಿರುತ್ತ, ಇದೇ ಡಿಸೆಂಬರ್ 14ರಂದು, ಕಲ್ಯಾಣಪುರ ಮಿಲಾಗ್ರೆಸ್ ಹೈಸ್ಕೂಲಿನ 8ನೇ ತರಗತಿಯ ಇಂಗ್ಲಿಷ್ ಸ್ಪೆಷಲ್ ಕ್ಲಾಸುಗಳಿಗೆ ಸತತ ಗೈರುಹಾಜರಾಗುತ್ತಿದ್ದ ಆಕಾಶ್ ಎಂಬ ದಲಿತ ಹಾಗು ಇಬ್ಬರು ಕ್ರಿಶ್ಚಿಯನ್ ಹುಡುಗರು ಸೇರಿದಂತೆ ಒಟ್ಟು 8 ವಿದ್ಯಾಥರ್ಿಗಳಿಗೆ ಮುಖ್ಯೋಪಾಧ್ಯಾಯರ ಅನುಮತಿ ಪಡೆದು ಕ್ಲಾಸಿಗೆ ಬರುವಂತೆ ಇಂಗ್ಲಿಷ್ ಶಿಕ್ಷಕರು ತಿಳಿಸಿದರು. ಈ 8 ಜನ ವಿದ್ಯಾಥರ್ಿಗಳು ಆ ಕಾರಣಕ್ಕೆ ಮುಖ್ಯೋಪಾಧ್ಯಾಯರಾದ ಪೌಲ್ ಲೋಬೊ ಅವರ ಕೊಠಡಿಗೆ ಹೋದಾಗ ಅವರು ವಿದ್ಯಾಥರ್ಿಗಳಿಗೆ ದಬಾಯಿಸಿ, ಒಂದೊಂದು ಏಟು ಕೊಟ್ಟಿದ್ದಾರೆ. ಆ ವಿದ್ಯಾಥರ್ಿಗಳು ಮುಂದೆ ತಾವು ಕ್ಲಾಸು ತಪ್ಪಿಸುವುದಿಲ್ಲ ಎಂದು ಮುಖ್ಯೋಪಾಧ್ಯಾಯರಲ್ಲಿ ವಿನಂತಿಸಿಕೊಂಡು ಹೋಗಿದ್ದಾರೆ. ಲೋಬೊ ಈ ಹುಡುಗರಿಗೆ ಕೊಟ್ಟ ಏಟು ಯಾವ ದೃಷ್ಟಿಯಿಂದಲೂ ಗಂಭೀರ ಸ್ವರೂಪದ್ದಾಗಿರಲಿಲ್ಲವಾದರೂ ಮಕ್ಕಳಿಗೆ ಏಟು ಕೊಡುವುದು ತಪ್ಪೆಂದೇ ಇಟ್ಟುಕೊಳ್ಳೋಣ. ಆದರೆ, ವಿದ್ಯಾಥರ್ಿಗಳನ್ನು ದಾರಿಗೆ ತರುವ ಲಾಗಾಯ್ತಿನ ಈ ಪದ್ಧತಿ ಮಿಲಾಗ್ರೆಸ್ ಹೈಸ್ಕೂಲಿನಲ್ಲಿ ಮಾತ್ರ ಚಾಲ್ತಿಯಲ್ಲಿರುವುದೇನೂ ಅಲ್ಲ; ಇದು ವಿದ್ಯಾಥರ್ಿಗಳಿಗೆ ಬುದ್ಧಿ ಹೇಳುವ ಪರಿಣಾಮಕಾರಿ ವಿಧಾನವೆಂದೇ ಬಹುತೇಕ ಶಿಕ್ಷಕರು ಭಾವಿಸುತ್ತಾರೆ. ಕಲಿಕೆಯ ವಾತಾವರಣದ ಬಗೆಗಿನ ವಿವೇಚನೆಯಲ್ಲಿ ಈ ನಮೂನೆಯ `ಬುದ್ಧಿ ಹೇಳುವ' ಪದ್ಧತಿಯನ್ನು ಇಲ್ಲವಾಗಿಸುವ ವಿಧಾನಗಳ ಬಗ್ಗೆ ಸಾಕಾಷ್ಟು ಚಚರ್ೆಗಳು ನಡೆಯುತ್ತಿವೆ. ಆದರೆ, ಮಲ್ಪೆ ಠಾಣೆಯ ಪೊಲೀಸರು ಸಂಶೋಧಿಸಿರುವ `ಕ್ರಾಂತಿಕಾರಿ ವಿಧಾನ' ಕಂಡು ಶಿಕ್ಷಣ ತಜ್ಞರು ದಂಗಾಗಿ ಮೂಛರ್ೆ ಹೋಗುವುದು ಗ್ಯಾರಂಟಿ.
ಈ ಘಟನೆಯನ್ನು ವಿದ್ಯಾಥರ್ಿಗಳು ಮರೆತಿದ್ದರೂ, ಘಟನೆ ನಡೆದ ಬರೋಬ್ಬರಿ 8 ದಿನಗಳ ನಂತರ, ಡಿಸೆಂಬರ್ 22 ರಂದು, ಸ್ಥಳೀಯ ಹಿಂದೂತ್ವ ಸಂಘಟನೆಗಳು ಒಂದಷ್ಟು ಜನರನ್ನು ಸೇರಿಸಿ ಮಲ್ಪೆ ಠಾಣೆ ಎದುರು ಮತಪ್ರದರ್ಶನ ನಡೆಸಿದರು. ಏಟು ತಿಂದ ದಲಿತ ವಿದ್ಯಾಥರ್ಿ ಆಕಾಶ್ ಅಯ್ಯಪ್ಪ ವ್ರತಧಾರಿಯಾಗಿದ್ದು, ಶಾಲಾ ಮುಖ್ಯೋಪಾಧ್ಯಾಯರು ಅವನನ್ನು ಥಳಿಸುವುದರ ಜೊತೆ ಧರ್ಮನಿಂದನೆಯನ್ನೂ ಮಾಡಿದ್ದಾರೆಂದೂ, ಆಕಾಶನ ಕ್ಲಾಸ್ ಟೀಚರ್ ಮಾಸರ್ೆಲಿನ್ ಸೆರಾ ಕೂಡ ಅವನ ಜಾತಿ-ಮತ ಹಿಡಿದು ನಿಂದಿಸಿದ್ದಾರೆಂದೂ, ಈ ಹಿಂದೆಯೂ ಆ ಸಂಸ್ಥೆಯಲ್ಲಿ ಇಂತಹದ್ದು ನಡೆದಿದೆ ಎಂದೂ ಆರೋಪಿಸಿದವು. ಇದರ ಜೊತೆ ಹಿಂದೂತ್ವ ಸಂಘಟನೆಗಳು ಆಕಾಶನ ತಂದೆಯನ್ನು ಒತ್ತಾಯಿಸಿ ದೂರುಕೊಡಿಸಿದ್ದಲ್ಲದೆ, ಸ್ಥಳೀಯ ದೊಣ್ಣೆನಾಯಕ ಪ್ರಕಾಶ್ ಸಹ ಒಂದು ದೂರನ್ನು ಮಲ್ಪೆ ಪೊಲೀಸು ಠಾಣೆಗೆ ಕೊಟ್ಟ. ಅದಕ್ಕೆ ಸರಿಯಾಗಿ ಮಲ್ಪೆಯ ಪೊಲೀಸರು ಎತ್ತು ಕರು ಹಾಕಿದೆ ಎಂದರೆ ಕೊಟ್ಟಿಗೆಯಲ್ಲಿ ಕಟ್ಟು ಎನ್ನುವ ಜಾಣರು! ಪೊಲೀಸರು ದೂರು ಸಿಕ್ಕಿದ್ದೇ ಮಿಲಾಗ್ರೆಸ್ ಹೈಸ್ಕೂಲಿಗೆ ಹೋಗಿ, ಸಂಸ್ಥೆಯ ಮುಖ್ಯಸ್ಥರ ಜೊತೆ ಮಾತುಕತೆ ನಡೆಸದೆ, ಪರವಾನಗಿಯನ್ನೂ ಪಡೆಯದೇ ಮುಖ್ಯೋಪಾಧ್ಯಾಯರಾದ ಪೌಲ್ ಲೋಬೊ ಅವರನ್ನು ಮಲ್ಪೆ ಠಾಣೆಗೆ ಕರೆ ತಂದರು. ಆಕಾಶನ ತಂದೆಯ ಜೊತೆ ರಾಜಿ ಮಾತುಕತೆ ನಡೆಸಿ ಪ್ರಕರಣವನ್ನು ಇತ್ಯರ್ಥ ಮಾಡುವುದಾಗಿ ನಂಬಿಸಿ ಲೋಬೊ ಅವರಿಂದ ತಪ್ಪೊಪ್ಪಿಗೆ ಪತ್ರವನ್ನೂ ಬರೆಸಿಕೊಂಡು, ಸಂಜೆ 5 ಗಂಟೆಯವರೆಗೂ ಠಾಣೆಯಲ್ಲಿ ಕೂರಿಸಿ, 5 ಗಂಟೆಗೆ ಲೋಬೊ ಅವರ ಮೇಲೆ ಐ.ಪಿ.ಸಿ.-295, 324, 504 ಹಾಗು ಮಾಸರ್ೆಲಿನ್ ಸೆರಾರ ಮೇಲೆ ಐ.ಪಿ.ಸಿ.-295 ಕಲಮುಗಳ ಅಡಿ ಎಫ್.ಐ.ಆರ್. ದಾಖಲಿಸಿದರು. ಅದೇ ಸಂಜೆ 6 ಗಂಟೆಗೆ ಪೌಲ್ ಲೋಬೊ ಅವರನ್ನು ಉಡುಪಿ ತಾಲೂಕು ಜ್ಯುಡಿಸಿಯಲ್ ಮ್ಯಾಜಿಸ್ಟ್ರೇಟರ (ಜೆ.ಎಮ್.ಎಫ್.ಸಿ) ಮುಂದೆ ಹಾಜರುಪಡಿಸಿ ತಮ್ಮ ಕಸ್ಟಡಿಗೂ ತೆಗೆದುಕೊಂಡು ಬಿಟ್ಟರು. ಲೋಬೊ ಅವರಿಗೆ ಜಾಮೀನು ಸಿಗಲು ಎರಡು ದಿನ ಹಿಡಿಯಿತು. ಸೆರಾ ಅವರು ಕೋಟರ್ಿಗೆ ಶರಣಾಗಿ ಜಾಮೀನು ಪಡೆಯಬೇಕಾಯ್ತು. ಈ ಇಬ್ಬರು ಶಿಕ್ಷಕರ ಮೇಲೆ ಎಂಥ ಕಲಮುಗಳಡಿ ಕೇಸು ಹಾಕಲಾಗಿದೆ ಎಂದು ಒಂದಿಷ್ಟು ಗಮನಿಸಿ:
ಐ.ಪಿ.ಸಿ. 295: ಯಾವುದೇ ಮತಕ್ಕೆ ಸೇರಿದ ಜನರ ಧಾಮರ್ಿಕ ಭಾವನೆಗಳನ್ನು ಘಾಸಿಗೊಳಿಸುವ ಉದ್ದೇಶದಿಂದಲೇ, ಪೂಜಾಸ್ಥಳವನ್ನು ಹಾನಿ ಯಾ ಅಪವಿತ್ರಗೊಳಿಸುವುದು. (2 ವರ್ಷಗಳ ವರೆಗಿನ ಸಜೆ/ದಂಡ ಅಥವ ಎರಡೂ).
ಐ.ಪಿ.ಸಿ. 295 ಎ: ಜನರ ಧಾಮರ್ಿಕ ಭಾವನೆಗಳನ್ನು ಕೆರಳಿಸುವ ಏಕೈಕ ಉದ್ದೇಶದಿಂದ, ಆ ಜನರ ಮತವನ್ನು - ಮಾತು, ಬರಹ ಅಥವ ಇನ್ನಾ ್ಯವುದೇ ಸನ್ನೆ, ಸಂಕೇತಗಳ ಮೂಲಕ- ಅವಮಾನಿಸುವ ಪ್ರಜ್ಞಾಪೂರ್ವಕ ದುಷ್ಕೃತ್ಯ. (3 ವರ್ಷಗಳ ವರೆಗಿನ ಸಜೆ/ದಂಡ ಅಥವ ಎರಡೂ).
ಐ.ಪಿ.ಸಿ. 324: ದೈಹಿಕವಾಗಿ ಘಾಸಿಗೊಳಿಸುವ ಉದ್ದೇಶದಿಂದ, ಸಾವಿಗೂ ಕಾರಣವಾಗಬಲ್ಲ ಮಾರಕಾಸ್ತ್ರಗಳನ್ನು (ಚಾಕು, ಕತ್ತಿ, ಬಂದೂಕು, ಬೆಂಕಿ/ಸುಡಬಲ್ಲ ರಾಸಾಯನಿಕಗಳು, ಕಾದ ವಸ್ತುಗಳು, ವಿಷ ಪದಾರ್ಥಗಳು, ರಕ್ತದಲ್ಲಿ ಸೇರುವ ಮೂಲಕ ಸಾವಿಗೆ ಕಾರಣವಾಗುವ ವಸ್ತುಗಳನ್ನು ಚುಚ್ಚುವುದು... ಇತ್ಯಾದಿ) ಬಳಸಿ ದೈಹಿಕ ಹಲ್ಲೆ ನಡೆಸುವುದು. (3 ವರ್ಷಗಳವರೆಗಿನ ಸಜೆ/ದಂಡ ಅಥವ ಎರಡೂ).
ಐ.ಪಿ.ಸಿ. 504: ಯಾವುದೇ ವ್ಯಕ್ತಿ ಅವಮಾನ ತಾಳಲಾರದೇ ಕೆರಳಿ ಶಾಂತಿಯನ್ನು ಕದಡುವ ಕೃತ್ಯಕ್ಕೆ ಕೈಹಾಕುತ್ತಾನೆ/ಹಾಕುತ್ತಾಳೆ ಎಂದು ಗೊತ್ತಿದ್ದೂ, ಅಂಥ ಕೃತ್ಯಕ್ಕೆ ಪ್ರಚೋದನೆ ನೀಡುವ ಏಕೈಕ ಉದ್ದೇಶದಿಂದ, ಆ ವ್ಯಕ್ತಿಯನ್ನು ಅವಮಾನಿಸುವ ಕೃತ್ಯ. ( 2 ವರ್ಷಗಳವರೆಗಿನ ಸಜೆ/ದಂಡ ಅಥವ ಎರಡೂ).
ವಿದ್ಯಾಥರ್ಿಯೊಬ್ಬನಿಗೆ ಮುಖ್ಯೋಪಾಧ್ಯಾಯರು ಒಂದು ಏಟು ಕೊಟ್ಟದ್ದಕ್ಕೆ ಕ್ರಿಮಿನಲ್ ಕಾಯ್ದೆಯ ಈ ಕಲಮುಗಳು! ಮಲ್ಪೆ ಪೊಲೀಸರ ಮೂರ್ಖತನ/ದೂರ್ತತನಕ್ಕೆ (ಆಯ್ಕೆ ನಿಮ್ಮದು!) ಇದಕ್ಕಿಂತ ಬೇರೆ ಉದಾಹರಣೆ ಬೇಕೆ?
ಈ ಪ್ರಕರಣದಲ್ಲಿ ಹಿಂದೂತ್ವ ಸಂಘಟನೆಗಳ ವರ್ತನೆಯಲ್ಲಿ ಆಶ್ಚರ್ಯಕರವಾದದ್ದು ಏನೂ ಇಲ್ಲ. ಕರಾವಳಿಯಲ್ಲಿ ಅವುಗಳಿಗೆ ಬಿಸಿನೆಸ್ ಸ್ವಲ್ಪ ಡಲ್ ಆಗಿತ್ತು. ಈ ಪ್ರಕರಣ ಅವರಿಗೆ ಲಾಟರಿ ಹೊಡೆದ ಹಾಗೆ ಅನಾಯಾಸವಾಗಿ ಒದಗಿಬಂತು. ಆದರೆ ಇಲ್ಲಿನ ಪೊಲೀಸರ ಮೆದುಳಿನಲ್ಲಿ ಏನಿದೆ? ಘಟನೆ ನಡೆದ 8 ದಿನಗಳ ಬಳಿಕ ಸಂಬಂಧಪಟ್ಟ ಶಿಕ್ಷಕರಿಗೆ ಜಾಮೀನು ಸಿಗುವುದು ಕೂಡ ಕಷ್ಟಕರವಾದ ಕ್ರಿಮಿನಲ್ ಕಲಮುಗಳ ಅಡಿ ಕೇಸು ಹಾಕಿರುವ ಮಲ್ಪೆ ಪೊಲೀಸರ ನಿಷ್ಠೆ ಇರುವುದು ಹಿಂದೂತ್ವವಾದಕ್ಕೆ ಹೊರತು ದೇಶದ ಕಾನೂನಿಗಲ್ಲ; ಪೊಲೀಸು ಸಮವಸ್ತ್ರಕ್ಕೆ ಇವರು ನಾಲಾಯಖ್! ಚೆಡ್ಡಿ-ಲಾಠಿಗೇ ಸೈ!
ದುರದೃಷ್ಟವಶಾತ್, ಈ ಮಾತನ್ನು ಉಡುಪಿಯ ಜಿಲ್ಲಾ ಪೊಲೀಸು ವರಿಷ್ಠಾಧಿಕಾರಿಯವರ ಬಗೆಗೂ ಹೇಳಬೇಕಾಗಿದೆ. ಡಿಸೆಂಬರ್ 23 ರಂದು ಉಡುಪಿ ಜಿಲ್ಲೆಯ ಕ್ರೈಸ್ತ ಸಂಘಟನೆಗಳು, ದ.ಸಂ.ಸ. ಹಾಗೂ ಕನರ್ಾಟಕ ಕೋಮು ಸೌಹಾರ್ದ ವೇದಿಕೆಗಳು ಒಟ್ಟಾಗಿ ಉಡುಪಿ ಜಿಲ್ಲಾ ಎಸ್.ಪಿ.ಯವರಿಗೆ ಮನವಿ ಸಲ್ಲಿಸಿದವು. ಆ ಸಮಯದಲ್ಲಿ ಎಸ್.ಪಿ.ಯವರು ಆಡಿದ ದರ್ಪದ ಮಾತುಗಳು ಮಲ್ಪೆ ಪೊಲೀಸರ ದುಂಡಾವತರ್ಿಗೆ ಕುಮ್ಮಕ್ಕು ಕೊಡುವಂತಿದ್ದವು. ಮನವಿ ಕೊಟ್ಟವರ ಮಾತುಗಳನ್ನು ಆಲಿಸುವ ವ್ಯವಧಾನ ಕೂಡ ಅವರಿಗಿರಲಿಲ್ಲ. ನಮ್ಮ ಎಲ್ಲ ಅಹವಾಲುಗಳಿಗೆ ಅವರದ್ದು ಒಂದೇ ಉತ್ತರ- `ಕೇಸು ಕೋಟರ್ಿನ ಮುಂದಿದೆ, ನಿಮ್ಮ ವಕೀಲರಿಗೆ ಈ ಪಾಯಿಂಟ್ಗಳನ್ನು ಹೇಳಿ, ಅವರು ವಾದಿಸುತ್ತಾರೆ.', `ಹಾಗಾದರೆ ಪೊಲೀಸು ಠಾಣೆಗೆ ಯಾರೇ ಬಂದು ದೂರು ಕೊಟ್ಟರೂ ನೀವು ತಕ್ಷಣ ಇಂಥ ಕಠಿಣ ಕಲಮುಗಳಡಿ ಕೇಸು ಹಾಕುತ್ತೀರಾ?' ಎಂದು ನಾವು ಕೇಳಿದ್ದಕ್ಕೆ `ನೋಡಿ ನಿಮಗೆ ನಮ್ಮ ಡಿಪಾಟರ್್ಮೆಂಟ್ ಪ್ರೊಸಿಜರ್ ಗೊತ್ತಿಲ್ಲ; ನಿಮ್ಮ ಲಾಯರ್ ಕೇಳಿ. ಪೆಟ್ಟು ತಿಂದ ಹುಡುಗನ ತಂದೆಯೇ ಬಂದು ದೂರು ಕೊಟ್ಟಿದ್ದಾರೆ.' ಮಾತುಕತೆಯಲ್ಲಿ ಅದುವರೆಗೂ ಮೌನವಾಗಿದ್ದ ದ.ಸಂ.ಸ. ನಾಯಕ ಜಯನ್ ಮಲ್ಪೆಯವರನ್ನು ಎಸ್.ಪಿ.ಯವರ ಮಾತು ಕೆರಳಿಸಿತು. `ಆ ಹುಡುಗ ದಲಿತ. ಅವನ ತಂದೆ ತನಗೆ ವಿಷಯ ಏನೂ ಗೊತ್ತಿಲ್ಲ. ಒತ್ತಾಯದಲ್ಲಿ ತಮ್ಮಿಂದ ದೂರು ಕೊಡಿಸಿದ್ದಾರೆ ಎಂದು ನನ್ನ ಬಳಿ ಹೇಳಿದ್ದಾರೆ. ನೀವು ಪ್ರತಿ ತಿಂಗಳೂ ದಲಿತರಿಗೆ ಸಂಬಂಧಿಸಿದ ವಿಷಯ ಚಚರ್ಿಸಲು ನಮ್ಮನ್ನು ಫೋನ್ ಮಾಡಿ ಕರೆಸುತ್ತೀರಿ; ನಮ್ಮ ಫೋನ್ ನಂಬರುಗಳು ನಿಮ್ಮ ಬಳಿ ಇವೆ; ಈ ವಿಷಯದಲ್ಲಿ ಕೇಸು ಹಾಕುವ ಮೊದಲು ನಮ್ಮನ್ನೂ ಒಂದು ಮಾತು ಕೇಳಬೇಕು ಎಂದು ನಿಮಗೆ ಯಾಕೆ ಹೊಳೆಯಲಿಲ್ಲ? ಮಲ್ಪೆ ಪೊಲೀಸರು ಯಾರನ್ನು ಕೇಳಿ ಆ ಕಲಮುಗಳಡಿ ಕೇಸು ಹಾಕಿದರು? ಎಲ್ಲ ಕೋಟರ್ಿನಲ್ಲೇ ಕೇಳಬೇಕು ಎಂದರೆ ನೀವು ಇರುವುದು ಯಾತಕ್ಕೆ?' ಎಂದು ಜಯನ್ ಎಸ್.ಪಿ.ಯವರನ್ನು ತರಾಟೆಗೆ ತೆಗೆದುಕೊಂಡ ನಂತರ, ಗರಂ ಆಗಿ ಮಾತನಾಡುತ್ತಿದ್ದ ಎಸ್.ಪಿ. ಸಾಹೇಬರು ಥಂಡಾ ಹೊಡೆದದ್ದು ಕಣ್ಣಿಗೆ ಕಾಣುವಂತಿತ್ತು.
ಸದ್ಯಕ್ಕೆ ಪೌಲ್ ಲೋಬೊ ಹಾಗು ಮಾಸರ್ೆಲಿನ್ ಸೆರಾ ಅವರಿಗೆ ಜಾಮೀನು ಸಿಕ್ಕಿದೆ. ಈ ಮೊಕದ್ದಮೆಯಲ್ಲಿ ಅವರಿಗೆ ಶೀಘ್ರವಾಗಿ ನ್ಯಾಯ ದೊರೆಯದಿದ್ದರೆ, ದೀರ್ಘ ಹೋರಾಟವೊಂದಕ್ಕೆ ಉಡುಪಿಯ ಪ್ರಗತಿಪರ ಸಂಘಟನೆಗಳು ಅಣಿಯಾಗಬೇಕಿದೆ.

 ಜಿ.ರಾಜಶೇಖರ್, ಕೆ.ಫಣಿರಾಜ್

ಸಂದರ್ಶನ: ಸಾಮರಸ್ಯ ಉಳಿಯಬೇಕಾದರೆ ಬಿಜೆಪಿ ತೊಲಗಬೇಕು - -ಮಹೇಂದ್ರ ಕುಮಾರ್ಭಜರಂಗದಳವೆಂಬ ಮತೀಯ ಸಂಘಟನೆಯ ರಾಜ್ಯ ಸಂಚಾಲಕನಾಗಿದ್ದಾತ ಮಹೇಂದ್ರ ಕುಮಾರ್. ಆ ಸಂಘಟನೆಯ ಆಂತರ್ಯಕ್ಕೆ ತಕ್ಕುದಾಗಿ ಮುಂದುವರೆಯುತ್ತಾ ಬಂದಿದ್ದ ಆತ ಇದೀಗ ತನ್ನ ಮೂಲ ಸಿದ್ಧಾಂತಗಳಿಗೆ ತದ್ವಿರುದ್ಧವಾದ ಜಾತ್ಯತೀತ ಜನತಾದಳದತ್ತ ಮುಖ ಮಾಡಿದ್ದಾರೆ. ಇದು ಒಂದು ವ್ಯಕ್ತಿತ್ವದ ಬದಲಾವಣೆ ಅಷ್ಟೇ ಅಲ್ಲ; ಒಂದಿಡೀ ಸಿದ್ಧಾಂತದ ಪಲ್ಲಟ. ಆ ಭೂಮಿಕೆಯಲ್ಲೇ ಮಹೇಂದ್ರ ಕುಮಾರ್ರೊಂದಿಗೆ ನಡೆಸಿದ ಸಂದರ್ಶನದ ವಿವರ ಇಲ್ಲಿದೆ.....
* ಹಿಂದೂತ್ವ ಅಜೆಂಡಾಗಳಿಗೆ ಬದ್ಧರಾಗಿದ್ದ ನೀವು ಅದಕ್ಕೆ ತದ್ವಿರುದ್ಧವಾದ ಜೆಡಿಎಸ್ನತ್ತ ಮುಖ ಮಾಡಲು ಕಾರಣ?
ನಾನು ನಂಬಿಹೋಗಿದ್ದು ಪ್ರಾಮಾಣಿಕ ಹಿಂದೂತ್ವವನ್ನು. ಆದರೆ ಅಲ್ಲಿದ್ದದ್ದು ರಾಜಕೀಯ ಪ್ರೇರಿತವಾದದ್ದು ಅಂತ ಕ್ರಮೇಣ ಗೊತ್ತಾಯಿತು. ದತ್ತಪೀಠ, ಗೋಹತ್ಯೆ ನಿಷೇಧ ಇವೆಲ್ಲ  ಮತಪ್ರಣೀತ ರಾಜಕೀಯ ಹಿಂದೂತ್ವದ ಭಾಗಗಳೇ ಅಂತಲೂ ಅರಿವಾಯ್ತು. ಆದರೆ ನಿಜವಾದ ಹಿಂದೂತ್ವ ಜನಸಾಮಾನ್ಯರ ಜೀವನದಲ್ಲಿ ತಂತಾನೇ ಹಾಸುಹೊಕ್ಕಾಗಿದೆ. ಅದು ಪ್ರಾಮಾಣಿಕ ಹಿಂದೂತ್ವ......
* ಪ್ರಾಮಾಣಿಕ ಹಿಂದೂತ್ವ ಅಂದ್ರೆ?!
ಒಬ್ಬ ದಲಿತ ಹಿಂದೂ ಆಗಿಯೇ ಉಳಿತಾನಂದ್ರೆ ಅದು ಆತನ ಪ್ರಾಮಾಣಿಕ ನಂಬಿಕೆ. ಆತನಿಗೆ ವೇದ, ಉಪನಿಷತ್ತುಗಳು ಬೇಕಿಲ್ಲ. ಅದರ ನಡು ವಲ್ಲಿಯೂ ಈ ಆಚಾರವಿಚಾರಗಳಿಗೆ ತಕ್ಕು ದಾಗಿ ನಡೀತಾನಲ್ಲ? ಅದೇ ಪ್ರಾಮಾಣಿಕ ಹಿಂದೂತ್ವ.
* ಅಂಥ `ಪ್ರಾಮಾಣಿಕ ಹಿಂದೂತ್ವ'ಕ್ಕೆ ಅನ್ಯಧಮರ್ಿಯರಿಂದ ಯಾವ ರೀತಿ ತೊಂದರೆಯಾಗಿದೆ?
ಮುಸ್ಲಿಂ-ಕ್ರಿಶ್ಚಿಯನ್ ಸಮುದಾಯ ದಲ್ಲಿರುವ ಮುಗ್ಧತೆಯ ಕಾರಣದಿಂದ ಕೆಲವಾರು ತೊಂದರೆಗಳಾಗಬಹುದು. ಇಂಥ ಮುಗ್ಧತೆಯನ್ನು ಮತೀಯ ಶಕ್ತಿಗಳು  ಉಪಯೋಗಿಸಿಕೊಳ್ಳುತ್ತಿವೆ. ಈ ರೀತಿಯ ಮುಗ್ಧತೆ ಮತ್ತು ನ್ಯೂನತೆಗಳು ಮುಸ್ಲಿಂ -ಕ್ರಿಶ್ಚಿಯನ್ನರಲ್ಲಿ ಮಾತ್ರವಲ್ಲ, ಹಿಂದೂ ಗಳಲ್ಲೂ ಇದೆ. ಇದನ್ನು ಆಗಿನಿಂದಲೂ ವಿರೋಧಿಸಿಕೊಂಡೇ ಬಂದಿದ್ದೇನೆ. ಎಲ್ಲಾ ಧರ್ಮಗಳೂ ಒಂದಾಗುವಂಥ ವಾತಾ ವರಣ ನಿಮರ್ಿಸಬೇಕೆಂಬುದು ನನ್ನ ಗುರಿ. ಆದರೆ ಈ ಬಿಜೆಪಿ ಅದಕ್ಕೆ ಕಂಟಕವಾಗಿದೆ. ಇದನ್ನ ತೊಲಗಿಸುವುದೊಂದೇ ಧರ್ಮ-ಧರ್ಮಗಳ ಬೆಸುಗೆಗೆ ದಾರಿ.... ನಾನೂ ಕೂಡಾ ಮೊದಲು ಭಾರತೀಯ, ಆಮೇಲೆ ಹಿಂದೂ. ಈ ಮನೋಭಾವ ಎಲ್ಲಾ ಧಮರ್ಿಯರಲ್ಲೂ ಮನೆ ಮಾಡಬೇಕಿದೆ.
* ಭಜರಂಗದಳದಲ್ಲಿದ್ದಾಗ ಆರೆಸ್ಸೆಸ್ ಪ್ರಚೋದನೆ ಹೇಗಿತ್ತು?
ಈಗಲೇ ಬೇಡ. ಮುಂದಿನ ದಿನಗಳಲ್ಲಿ ಆ ಬಗ್ಗೆ ತುಂಬಾ ಮಾತಾಡೋದಿದೆ.
* ನಿಮಗೀಗ ಮತೀಯವಾದ ತಪ್ಪು ಅನ್ನಿಸಿ ಹೊರ ಬಂದಿದ್ದೀರಿ. ಆದರೆ ಒಳಗಿರೋರನ್ನ ಹೇಗೆ ಪಾರು ಮಾಡ್ತೀರಿ?
ನನಗೆ ನನ್ನ ಬಗ್ಗೆ ವಿಶ್ವಾಸವಿದೆ. ಅವರೆಲ್ಲರೊಳಗೂ ಪರಿವರ್ತನೆ ಆಗುತ್ತದೆಂಬ ಭರವಸೆಯೂ ಇದೆ. ಈಗ ಭಜರಂಗದಳದೊಳಗಿರೋ ಅನೇಕ ಕಾರ್ಯಕರ್ತರು ಕೆಟ್ಟೋರಲ್ಲ. ರಾಜಕೀಯ ಹಿಂದೂತ್ವವನ್ನು ತ್ಯಜಿಸಿ ಹೋರಾಟ ವನ್ನು ಸಮಾಜಮುಖಿಯಾಗಿಸಬಲ್ಲ ಮನಸ್ಥಿತಿ ಅವರಲ್ಲಿದೆ. ನಾನೂ ಆ ರೀತಿಯ ಮನಸ್ಥಿತಿಯಿಂದಲೇ ದಳದತ್ತ ಮುಖ ಮಾಡಿದ್ದೇನೆ. ನನಗೆ ರಾಜಕೀಯ ಅಧಿಕಾರದಲ್ಲಿ ಅಂಥಾ ಆಸಕ್ತಿಯಿಲ್ಲ. ಆದರೆ ಬಿಜೆಪಿ ರಾಜಕೀಯ ಶಕ್ತಿಯಾಗಿ ಬೆಳೆದಿರುವುದರಿಂದ ಅದನ್ನು ಬಗ್ಗುಬಡಿಯಲು ಇದು ಅನಿವಾರ್ಯ ಮಾರ್ಗ. ಜೊತೆಗೆ ಜೆಡಿಎಸ್ ನಾಯಕರ ಬಗೆಗೂ ನನಗೆ ವಿಶ್ವಾಸವಿದೆ.
* ಬಿಜೆಪಿ ವಿರುದ್ಧ ಯಾತಕ್ಕಾಗಿ ಹೋರಾಟ.....?
ಬಿಜೆಪಿ ಜನರ ಭಾವನೆಗಳ ಜೊತೆಗೆ ಚೆಲ್ಲಾಟವಾಡುತ್ತಿವೆ. ಸಂಸ್ಕೃತಿಯನ್ನು ಉದ್ಧಾರವಾಗಿಸೋ ನೆಪದಲ್ಲಿ ಅದನ್ನು ಕೊಂದು ಹಾಕುತ್ತಿದೆ. ಮಹಿಳೆಯರನ್ನು `ಮಾತೆಯರು' ಅಂತೆಲ್ಲಾ ಹೇಳಿಕೊಳ್ಳುವ, ಗೌರವಿಸುವಂತೆ ತೋರಿಸಿಕೊಳ್ಳುವ ಬಿಜೆಪಿ ಜನ ತಮ್ಮ ಸಚಿವ ಸಂಪುಟದಲ್ಲಿ ಅತ್ಯಾಚಾರಿ ಯೊಬ್ಬನಿಗೆ ಸ್ಥಾನ ಕೊಟ್ಟಿರುವುದು ಅವರ ಮನಸ್ಥಿತಿಗೆ ಹಿಡಿದ ಕನ್ನಡಿ.   ಇವರು ರಾಜಕೀಯವನ್ನು ವ್ಯವಹಾರ ಮಾಡಿಕೊಂಡಿದ್ದಾರೆ.  ಇಂಥದ್ದರ ವಿರುದ್ಧವೇ ನನ್ನ ಹೋರಾಟ.....
* ಈಗ ಧರ್ಮಗಳನ್ನ ಬೆಸೆಯೋ ಮಾತಾಡ್ತಿದ್ದೀರಿ. ಆದರೆ ಚಚರ್್ ಮೇಲಿನ ದಾಳಿ ಸಂದರ್ಭದಲ್ಲಿ ಒಡೆಯೋ ಕೆಲಸ ಮಾಡಿದ್ರಿ. ಈ ಬಗ್ಗೆ ಪಾಪಪ್ರಜ್ಞೆ ಇಲ್ಲವೆ?
ಅದು ಮತಾಂತರ ನಡೆಸೋ ಕೇಂದ್ರಗಳ ಮೇಲೆ ನಡೆಸಿದ ದಾಳಿ ಅಂತಲೇ ಅಂದುಕೊಳ್ತೀನಿ. ಆ ನೆಲೆಗಟ್ಟಲ್ಲಿ ಆ ಘಟನೆಯನ್ನು ಸಮಥರ್ಿಸಿಕೊಂಡಿದ್ದನೇ ಹೊರತು ಆ ಸಮುದಾಯದವರ ಮೇಲಿನ ಸಿಟ್ಟಿನಿಂದಲ್ಲ. ಮುಗ್ಧರನ್ನು ಮತಾಂತರ ಮಾಡೋ ದಂಧೆಯೊಂದು ಚಾಲ್ತಿಯಲ್ಲಿರುವುದು ಸುಳ್ಳಲ್ಲ. ಆದರೆ ಅದಕ್ಕೆ ಆ ಇಡೀ ಸಮುದಾಯ ಕಾರಣವಲ್ಲ.
* ಭಜರಂಗದಳದಲ್ಲಿ ಅನ್ಯಾಯವಾಗಿದ್ದರಿಂದಲೇ ಮಹೇಂದ್ರ ಹೊರಬಂದಿದ್ದು ಅನ್ನಲಾಗುತ್ತಿದೆ...
ಖಂಡಿತಾ ಇಲ್ಲ. ನನ್ನ ಮನಸ್ಥಿತಿ ಬದಲಾದುದರಿಂದಲೇ ಇಂಥಾ ನಿಧರ್ಾರ ತೆಗೆದುಕೊಂಡಿದ್ದೇನೆ. ಚಚರ್್ ಮೇಲಿನ ದಾಳಿ ವಿಚಾರದ ಬಂಧನದ ನಂತರದಲ್ಲಿ ನಾನು ಎದುರು ಗೊಂಡ ಘಟನೆಯೊಂದು ಆ ನಿಧರ್ಾರಕ್ಕೆ ಕಾರಣವಾಯಿತು.
ಬೆಳ್ತಂಗಡಿಯಲ್ಲಿ ಒಬ್ಬ ಮಹಿಳೆ ಮತಾಂತರಗೊಂಡಿದ್ದರು. ಈ ಬಗ್ಗೆ ವಿಚಾರಿಸಲು ಹೋದಾಗ ಆಕೆಯ ಹಿನ್ನೆಲೆ ಕರುಳು ಹಿಂಡಿತು. ಒಳ್ಳೆಯ ಮನೆತನದಿಂದ ಬಂದ ಆಕೆ ಶ್ರೀಮಂತೆ. ಹೋದ ಮನೇಲೂ ಅದೇ ಶ್ರೀಮಂತಿಕೆ. ಆದರೆ ಮೂವರು ಹೆಣ್ಮಕ್ಕಳನ್ನು ಮಡಿಲಿಗಿಟ್ಟು ಗಂಡ ಸತ್ತು ಹೋದ. ಆಸ್ತಿ ವಿಚಾರವಾಗಿ ಗಂಡನ ಮನೆಯವರೂ ಆಕೆಯನ್ನು ಹೊರಗಟ್ಟಿದ್ದರು. ನಿವರ್ಾಹವಿಲ್ಲದ ಆಕೆ ಬೇರೆಯವರ ಮನೆಗೆಲಸಕ್ಕೆ ಸೇರಿಕೊಂಡಳು. ಆದರೂ ಜೀವನ ನಿರ್ವಹಣೆಗೆ ಹಣ ಸಾಲದೆ ದೊಡ್ಡ ಮಗಳನ್ನು ಶಾಲೆ ಬಿಡಿಸಿ ಕೆಲಸಕ್ಕೆ ಸೇರಿಸಿದಳು. ಆದರೂ ಬಡತನ ನೀಗದೆ ಸಹಾಯಕ್ಕಾಗಿ ಮಠ-ಮಂದಿರ, ಜಾತಿ ಸಂಘಗಳಿಗೆ ಅಲೆದಾಡಿ ಸಹಾಯ ಯಾಚಿಸಿದಳು.  ಪ್ರಯೋಜನ ವಾಗಲಿಲ್ಲ.
ಆದರೆ ಒಬ್ಬ ವ್ಯಕ್ತಿ ಬಂದು ಸಹಾಯ ಮಾಡಿದ. ಬೆಳೆದು ನಿಂತಿದ್ದ ಹೆಣ್ಮಕ್ಕಳಿಗೆ ಮದುವೆಯನ್ನೂ ಮಾಡಿಸಿದ. ಆತ ಕ್ರಿಶ್ಚಿಯನ್. ಈಗ ಈ ಹಿಂದೂ ಮಹಿಳೆಯೂ ಮಕ್ಕಳೊಂದಿಗೆ ಆ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ. ಇದರಿಂದ ನನ್ನೊಳಗೆ `ಆಕೆಯನ್ನು ಮತಾಂತರಗೊಳಿಸಿದ್ದು ಹಿಂದೂ ಸಮಾಜವೇ, ಅಂತೊಂದು ವಿಚಾರ ಚುಚ್ಚಲಾ ರಂಭಿಸಿತು. ಆಕೆಗಾಗ ಧರ್ಮಕ್ಕಿಂತ ಬದುಕು ಮುಖ್ಯವಾಗಿತ್ತು. ಹಿಂದೂ ಸಮಾಜ ಅದನ್ನು ನೀಡದ ಕಾರಣ ಮತಾಂತರಕ್ಕೆ ದಾರಿಯಾಯಿತು. ಈ ಜನ ದೇವಸ್ಥಾನಗಳಿಗೆ ಫಂಡು ಕೊಡ್ತಾರೆ, ದಲಿತರು ನೊಂದವರ ಆತ್ಮಗೌರವಕ್ಕೇ ಪೆಟ್ಟು ಕೊಡ್ತಾರೆ. ಇದನ್ನು ಸರಿ ಮಾಡ್ಬೇಕು ಅನ್ನೋ ಹಂಬಲವೇ ನನ್ನೀ ನಿಧರ್ಾರಕ್ಕೆ ಪ್ರೇರಣೆ...
* ನೀವೇ ಮತಾಂತರ ಮಾಡೋ ದಂಧೆ ಇದೇ ಅಂದಿದ್ರಿ. ಆದರೆ ಅದು ಹಿಂದೂ ಮತದ ಕೂಸು ಅಂತನ್ನಿಸೋದಿಲ್ವಾ? ಈಗ ಚಚರ್್ ಮೇಲೆ ದಾಳಿ ಮಾಡಿದ್ದು ತಪ್ಪು ಅನ್ಸಲ್ವಾ?
ನಿಜ, ಹಿಂದೂ ಸಮಾಜದ ಇಂಥ ಬಲಹೀನತೆಗಳೇ ಮತಾಂತರದಂಥ ಘಟನೆಗಳಿಗೆ ಕಾರಣ. ಈಗಿನಂಥ ಮನಸ್ಥಿತಿ ಇದ್ದಿದ್ರೆ ಚಚರ್್ ಮೇಲಿನ ದಾಳಿಯನ್ನು ಸಮಥರ್ಿಸುತ್ತಿರಲಿಲ್ಲ. ಮನುಷ್ಯ ಪ್ರತೀ ಕ್ಷಣವೂ ಕಲೀತಾ ಇರ್ತಾನೆ. ಆಯಾ ಸಂದರ್ಭಗಳಲ್ಲಿ ಸೂಕ್ತ ತಿಳಿವಳಿಕೆಯೂ ಬರುತ್ತೆ. ನಾನದಕ್ಕೆ ತೆರೆದುಕೊಂಡಿದ್ದೇನೆ. ಆದುದರಿಂದಲೇ ಬದಲಾಗಿದ್ದೇನೆ....
* ಬಾಬಾಬುಡನ್ಗಿರಿ ರಾಜಕೀಯ ದಾಳವಾಗಿರೋದ್ರಲ್ಲಿ ನಿಮ್ಮದೂ ಪಾಲಿದೆ. ಈಗಿನ ಸ್ಥಿತಿಯಲ್ಲಿ ಗಿರಿಯ ಸೌಹಾರ್ದವನ್ನ ಯಾವ ರೀತಿ ಉಳಿಸ್ತೀರಿ?
ದತ್ತಪೀಠ ವಿವಿಧ ಕೋಮಿನವರ, ವರ್ಗಗಳ ಸೌಹಾರ್ದ ಕೇಂದ್ರ. ನಾನು ಭಜರಂಗದಳದ  ರಾಜ್ಯ ಸಂಚಾಲಕನಾಗಿದ್ದಾಗಲೇ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ಹೇಳಿದ್ದೆ. ಅಲ್ಲಿರುವ ಅನಧಿಕೃತ ಗೋರಿಗಳನ್ನು ತೆರವುಗೊಳಿಸಿ ಪವಿತ್ರವಾದುದನ್ನಷ್ಟೆ ಉಳಿಸಿಕೊಂಡು ಎರಡೂ ಧರ್ಮಗಳ ಸಾಮರಸ್ಯ ಕಾಯ್ದುಕೊಳ್ಳಬೇಕು.
* ನಿಮ್ಮಂಥವರು ಹೋರಾಟ ಆರಂಭಿಸೋವರೆಗೂ ಅದು ಸೌಹಾರ್ದ ಕೇಂದ್ರವೇ ಆಗಿತ್ತಲ್ಲಾ?
ಆ ಹೋರಾಟ ರಾಜಕೀಯ ತಿರುವು ಪಡೆಯುತ್ತದೆಂದು ಅಂದುಕೊಂಡಿರಲಿಲ್ಲ. ಅಲ್ಲಿನ ಸಾಮರಸ್ಯವನ್ನು ಬಿಜೆಪಿ ಕೊಲೆ ಮಾಡಿದೆ. ರಾಜಕೀಯಕ್ಕೆ ಉಪಯೋಗಿಸಿಕೊಳ್ಳಲೂ ಹುನ್ನಾರ ನಡೆಸುತ್ತಿದೆ. ಅಲ್ಲಿ ನಿಜವಾದ ಸಾಮರಸ್ಯ ನೆಲೆಗೊಳ್ಳಲು ಯಾವ ಕೆಲಸ ಮಾಡಲೂ ನಾನು ಕಟಿಬದ್ಧನಿದ್ದೇನೆ.
* ಈಗಲೂ ಭಜರಂಗದಳದಲ್ಲೇ ಇರುವವರಿಗೆ ನಿಮ್ಮ ಕಿವಿ ಮಾತೇನು?
ನನಗೆ ಆ ವಲಯದಲ್ಲಿ ದೊಡ್ಡ ಮಟ್ಟದ ಸಂಪರ್ಕಗಳಿವೆ. ಅಲ್ಲಿ ಇನ್ನೂ ಹೊಸಾ ಕಾರ್ಯಕರ್ತರು ತಯಾರಾಗುತ್ತಿದ್ದಾರೆ. ಆದರೆ ಯಾರೂ ಮುಸ್ಲಿಮರನ್ನು, ಕ್ರಿಶ್ಚಿಯನ್ನರನ್ನು ಗುರಿಯಾಗಿಸಿಕೊಳ್ಳಬೇಡಿ. ಆ ಹಾದಿಯಲ್ಲೇ ಮುಂದುವರೆದರೆ ಖಂಡಿತಾ ಮೋಸ ಹೋಗ್ತೀರಿ. ಹಿಂದೂ ಸಮಾಜದಲ್ಲೇ ಇರೋ ನ್ಯೂನತೆಗಳನ್ನು ಸರಿಪಡಿಸಲು ಪ್ರಯತ್ನಿಸಿ. ಈಗ ಇರೋ ದಾರಿಯಲ್ಲಿ ನಿಜವಾದ ರಾಷ್ಟ್ರ ಕಟ್ಟುವುದು ಕನಸಿನ ಮಾತು. ಇದು ನಿಜವಾದ ಹಿಂದೂತ್ವ ಅಲ್ಲ. ನಿಮ್ಮ ಹೋರಾಟವನ್ನು ಸಾಮಾಜಿಕ ಕೆಲಸಗಳಿಗೆ ಉಪಯೋಗಿಸಿ....

ಮಂಡ್ಯದಲ್ಲಿ ಕೈ ಕಮಲ ಹಿಡಿದಿದ್ದು ನಿಜವೇ?

''ಈ ಕಾಂಗ್ರೆಸ್ಸಿನವರು ಜಿಲ್ಲಾ ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ'' ಎಂದು ಹೋದಲ್ಲಿಬಂದಲ್ಲಿ ಕೂಗಾಡುತ್ತಿರುವ ಕುಮಾರಣ್ಣ ಮತ್ತು ಚಲುವಣ್ಣನ ಮಾತನ್ನ ಕಾಂಗೈಗಳು ಗಂಭೀರವಾಗಿ ಪರಿಗಣಿಸಿದರಂತಲ್ಲಾ. ಇಂತಹ ಅಪವಿತ್ರ ಮೈತ್ರಿ ನಿಜವೆ ಎಂದು ಅವರು ಪರಿಶೀಲಿಸಿದಾಗ, ಮಂಡ್ಯ  ಜಿಲ್ಲೆ ಮಟ್ಟಿಗೆ ಕುಮಾರಸ್ವಾಮಿ ಪಾಟರ್ಿ ಬಿಜೆಪಿ ಹಂಗಿಗೆ ಬಿದ್ದಿರುವುದು ಪತ್ತೆಯಾಗಿದೆಯಂತಲ್ಲಾ. ಯಾವುದೇ ಪಾಟರ್ಿ ಅಧಿಕಾರಕ್ಕೆ ಬಂದರೂ ತನ್ನ ಅಕ್ರಮ ಮತ್ತು ಕೇಸುಗಳಿಂದ ಬಚಾವಾಗಲು ಆಡಳಿತ ಪಕ್ಷದ ಅಧಿಪತಿಯ ಕಾಲಿಡಿಯುವ ಶಿವರಾಮೇಗೌಡ, ಎಡೂರಪ್ಪನ ಎಡಗೈಯಾಗಿರುವುದಲ್ಲದೆ ''ಮಂಡ್ಯದಲ್ಲಿ ಬಿಜೆಪಿ ಗೆಲ್ಲಿಸಿ ತರುವ ಜವಾಬ್ದಾರಿ ನನಗಿರಲಿ'' ಎಂದು ಯಡ್ಡಿಯಿಂದ ಕಾಸು ಕಿತ್ತು ಪರಾರಿಯಾದವನು ಮಂಡ್ಯದಲ್ಲೂ ಯಾರ ಮೊಬೈಲ್ಗೂ ಸಿಗುತ್ತಿಲ್ಲವಂತಲ್ಲಾ.
ಮಂಡ್ಯದಲ್ಲಿ ಬಿಜೆಪಿ ಅಭ್ಯಥರ್ಿಗಳು ಮಣ್ಣುಮುಕ್ಕುವುದು ಗ್ಯಾರಂಟಿ. ಇಲ್ಲಿ ಬಿಜೆಪಿಗಳು ಸೋಲುವುದರಿಂದ  ಕಾಂಗೈಗಳ ಬಾಯಿಗೆ ಮಣ್ಣು ಹಾಕಲೇಬೇಕೆಂದು ನಿರ್ಧರಿಸಿದ ಶಿವರಾಮೇಗೌಡ, ಚಲುವಣ್ಣನನ್ನು ಸಂಪಕರ್ಿಸಿ ''ಹಲೋ ಬ್ರದರ್, ನೀವೇನೂ ಯೋಚನೆ ಮಾಡಬೇಡಿ. ಈ ಬಿಜೆಪಿ ಓಟುಗಳೆಲ್ಲ ಜೆಡಿಎಸ್ಗೆ ಟನರ್ಾಗಂಗೆ ಮಾಡ್ತಿನಿ'' ಎಂದುಬಿಟ್ಟನಂತಲ್ಲಾ. ಇದರಿಂದ ಪುಲಕಿತನಾದ ಚಲುವಣ್ಣ ''ತುಂಬ ಥ್ಯಾಂಕ್ಸ್ ಬ್ರದರ್. ನಾನೀಗ್ಲೆ ಡವುಟ್ ಬರದಂಗೆ ಸ್ಟೇಟ್ಮೆಂಟ್ ಕೊಡ್ತೀನಿ'' ಎಂದದ್ದೂ ಅಲ್ಲದೆ ''ಸದರಿ ಅಕ್ರಮ ಸಂಬಂಧದ ವಿರುದ್ಧವಾಗಿ ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಳಒಪ್ಪಂದ ಮಾಡಿಕೊಂಡಿವೆ'' ಎಂಬ ಮಾತನ್ನ ಕುಮಾರಣ್ಣನ ಬಾಯಲ್ಲೂ ಹೇಳಿಸಿದರಂತಲ್ಲಾ, ಥೂತ್ತೇರಿ!
****
ಇತ್ತ ಮಂಡ್ಯ ಜಿಲ್ಲೆಯದು ಈ ಕತೆಯಾದರೆ, ಅತ್ತ ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಾಟರ್ಿಯಿಂದ ಕಾಸು ತೆಗೆದು ಕೊಂಡ ಕುಮಾರ್ ಬಂಗಾರಪ್ಪ, ಅಲ್ಲಿ ಚುನಾವಣೆ ಮುಗಿದರೂ ಶಿವಮೊಗ್ಗ ತಲುಪಿಲ್ಲವಂತಲ್ಲಾ. 'ಬಂ' ಸಂಚಿನಿಂದ ಕುಮಾರ್ ಬಂಗಾರಿ ಮನೆ ಹರಾಜಿಗೆ ಬಂದಿತ್ತು. ಬಂಗಾರಪ್ಪನೇನೋ ಕುಮಾರ ಸ್ವಾಮಿ ಕಾಲಿಗೆ ಬಿದ್ದು ಬಚಾವಾದರು. ಆದರೆ 'ಕುಬಂ' ಎಲ್ಲಿಂದ ಹಣ ತರ ಬೇಕು? ಅದಕ್ಕಾಗಿ ಸೂಕ್ತ ಸಂದರ್ಭದಲ್ಲಿ ಸಿಕ್ಕ ಕಾಂಗ್ರೆಸ್ ನಿಧಿಯೊಂದಿಗೆ ಸಾಲ ಕೊಟ್ಟವರ ಮನೆಗೆ ಹೋಗಿರ ಬಹುದೆಂದು ಕಾಂಗೈ ಕಕವಾಗಳು ಅಳುದನಿಯಲ್ಲಿ ಆಡಿಕೊಳ್ಳುತ್ತಿದ್ದಾರಂತಲ್ಲಾ. ಇದನ್ನು ಕೇಳಿದ ಬಂಗಾರಪ್ಪ ತುಂಬ ಖುಷಿಯಿಂದ ''ಕೃಷ್ಣ ನೀ ಬೇಗನೇ ಬಾರೋ. ಬೇಗನೆ ಬಂದೂ ಮುಖವನ್ನು ತೋರೋ ಕೃಷ್ಣಾ...'' ಎಂದು ಶೀಟಿ ಹೊಡೆಯುತ್ತ, ''ನಾನು ನನ್ನ ಹಿರಿಮಗನ್ನ ಯಾಕೆ ದೂರ ಇಟ್ಟಿದ್ದೀನಿ ಅಂತ ಈಗ್ಲಾದ್ರೂ ಗೊತ್ತಾಯ್ತೇನ್ರಿ? ನನ್ನ ಜೀವನದಲ್ಲಿ ನಾನೆಂದೂ ಮತದಾರರಿಗೆ ತೊಂದ್ರೆ ಕೊಟ್ಟಿಲ್ಲ. ನಾನು ತೊಂದ್ರೆ ಕೊಟ್ಟಿರೋದು ಬರೀ ಕಳ್ಳುಬಳ್ಳಿಗೆ. ಇದು ಬಂಗಾಪ್ಪನ ಸ್ಟೈಲ್'' ಎಂದರಂತಲ್ಲಾ. ಕೂಡಲೇ ಇಂಧೋಳ ರಾಗವನ್ನು ತಾರಕದಲ್ಲಿ ಎತ್ತಿಕೊಂಡು ''ಕುಮಾರಣ್ಣ ನನ್ನ ನಾಯಕ. ಅವರಪ್ಪ ಅವನ ನಾಯಕ. ಇನ್ನ ನಾನೇನಿದ್ರು ಅವರ ಸೇವಕ'' ಎಂದು ಕಣ್ಮುಚ್ಚಿ ಹಾಡತೊಡಗಿದರಂತಲ್ಲಾ, ಥೂತ್ತೇರಿ!!
****
ಕನರ್ಾಟಕದ ರಾಜ್ಯಪಾಲರಿಗೂ ಎಡೂರಪ್ಪನಿಗೂ ಬಿದ್ದ ಗುದುಮುರುಗಿ ಬಿಗಿಯಾಗುತ್ತಾ, ಯಾಕೋ ತನಗೇ ಯಡವಟ್ಟಾಗುವುದನ್ನು ಯಡ್ಡಿ ಗಮನಿಸಿದರಂತಲ್ಲಾ. ಆಗ ಮಾಜಿ ವಕೀಲ, ಮಾಜಿ ಕಾಂಗೈ, ಮಾಜಿ ದಳ ಇತ್ಯಾದಿ ಯಾವ್ಯಾವುದರಿಂದಲೂ ಮಾಜಿಯಾಗಿ ಈಗ ಬಿಜೆಪಿಗಳ ಭಾವನಂತಿರುವ ಡಿ.ಬಿ. ಚಂದ್ರೇಗೌಡನೆಂಬ ಹಳೇ ಫುಟ್ರಗ್ಗನ್ನು ಸಂಪಕರ್ಿಸಿ ''ನೀರಾದರೂ ಬಾಯಿಬಿಟ್ಟು ನನಗೆ ಸಹಾಯ ಮಾಡಿ'' ಎಂದು ಬೇಡಿಕೊಂಡರಂತಲ್ಲಾ. ಕೂಡಲೇ ಚಂದ್ರೇಗೌಡ ಮಹಾ ಕಾನೂನು ಪಂಡಿತನ ಹಾವಭಾವ ಮತ್ತು ದನಿಯಲ್ಲಿ ''ರಾಜ್ಯಪಾಲರು ತಮ್ಮ ಕರ್ತವ್ಯದ ವ್ಯಾಪ್ತಿ ಮೀರಿ ಕೆಲಸ ಮಾಡೋದೆ ಆದ್ರೆ, ಅದರ ಪರಿಣಾಮವನ್ನ ಎದುರಿಸಬೇಕಾಗುತ್ತದೆ'' ಎಂದರಂತಲ್ಲಾ. ಇದನ್ನು ಗಮನಿಸಿದ ರಾಜ್ಯಪಾಲರು ''ನಾನು ಕನರ್ಾಟಕಕ್ಕೆ ನೌಕರಿ ಹುಡುಕಿ ಬಂದಿರುವ ನಿರುದ್ಯೋಗಿಯಲ್ಲಾ'' ಎಂದು ಗುಡುಗಿದ ಕೂಡಲೇ ಗೌಡ ಎಂಬ ಫುಟ್ರಗ್ಗಿನ ಸದ್ದು ನಿಂತೇಹೋಯ್ತಂತಲ್ಲಾ, ಥೂತ್ತೇರಿ!!
****
ಯಡ್ಡಿ ಸಕರ್ಾರದಲ್ಲಿ ನಡೆದಿರುವ ಯರ್ರಾಬಿರ್ರಿ ಅಕ್ರಮಗಳ ವಿವರ ಕೊಡಿ ಎಂದು ರಾಜ್ಯಪಾಲರು ಕೇಳಿದ್ದಕ್ಕೆ ಎಡೂರಪ್ಪ ''ನನ್ನ ಸಕರ್ಾರದಲ್ಲಿ ಏನೇನು ನಡೆದಿಲ್ಲ'' ಎಂದು ಒಂದೇ ಸಾಲಿನಲ್ಲಿ ಉತ್ತರಿಸಿದರಂತಲ್ಲಾ. ಇದರಿಂದ ದಂಗುಬಡಿದ ರಾಜ್ಯಪಾಲರು, ''ಈ ನಾಡಿನಲ್ಲಿ ನಡೆಯುತ್ತಿರುವ ಗಣಿ, ಅರಣ್ಯ ಲೂಟಿಯನ್ನು ತಡೆಯಲಾರದ ಅಸಮರ್ಥನಾಗಿರುವ ನನ್ನನ್ನ ಕ್ಷಮಿಸಿ'' ಎಂದು ಯಡ್ಡಿ ಸದನದಲ್ಲೇ ಹೇಳಿದ್ದನ್ನು ನೆನಪಿಸಿಕೊಂಡರಂತಲ್ಲಾ. ಆದರೀಗ ಎಡೂರಪ್ಪನ ಒಂದು ಸಾಲಿನ ವಿವರದಿಂದ ಕೆಂಪಾಗಿರುವ ರಾಜ್ಯಪಾಲರು, ಸಂವಿಧಾನದ ಸುದ್ದಿ ತೆಗೆದು ಯಡ್ಡಿಯನ್ನು ಹೆದರಿಸಿದರಂತಲ್ಲಾ. ಈ ನಡುವೆ ಕೇಂದ್ರದ ದೊಣ್ಣೆನಾಯಕರು ''ನಾವು ಈ ಹಾಳು ಕಾಂಗೈಗಳ ಕಟಕಿ ಮಾತನ್ನು ಕೇಳಲಾಗುವುದಿಲ್ಲ. ನೀವೇ ಇಲ್ಲಿಗೆ ಬಂದು  ಉತ್ತರ ಕೊಡಿ'' ಎಂದು ಯಡ್ಡಿಗೆ ಮೆಸೇಜು ಬಿಟ್ಟರಂತರಲ್ಲಾ. ಕೂಡಲೇ ಪಂಚಾಯ್ತಿ ಚುನಾವಣೆಯ ಉತ್ಸಾಹ ಕಳೆದುಕೊಂಡ ಯಡ್ಡಿ ''ನಾನು ಕೇಂದ್ರಕ್ಕೆ ಹೋಗುತ್ತೇನೆ'' ಎಂದು ಎದುರಿದ್ದ ಜನಗಳನ್ನ ನೋಡಿದಾಗ ಬಿಜೆಪಿ ಪಾಟರ್ಿಯವರ ಮುಖದಲ್ಲೇ ಮಂದಹಾಸ ಮಿನುಗಿತಂತಲ್ಲಾ, ಥೂತ್ತೇರಿ!!
****
''ನಾನು ಕೇಂದ್ರಕ್ಕೆ ಹೋಗುತ್ತೇನೆ'' ಎಂದು ಯಡ್ಡಿ ಹೇಳಿದ ಕೂಡಲೇ ನಿಷ್ಠಾವಂತ  ನಿಷ್ಠರು ಯಡ್ಡಿಗೆ ಅಡ್ಡಮಲಗಿ ಪ್ರತಿಭಟಿಸಬೇಕಿತ್ತು. ಯಡ್ಡಿ ಜೇಬಲ್ಲಿರುವ ಬಾಚಣಿಗೆ ಕಿತ್ತುಕೊಂಡು ಇದರಲ್ಲೇ ಇರಿದುಕೊಂಡು ಸಾಯುತ್ತೇವೆ ಎನ್ನಬೇಕಿತ್ತು. ''ಬರುವ ಸಕರ್ಾರ ನಮ್ಮ ಕಂಟ್ರಾಕ್ಟಿನ ಬಿಲ್ ಮಾಡದಿದ್ದರೆ ಗತಿಯೇನು. ನೀವು ಹೋಗಕೂಡದು. ಇಲ್ಲೇ ಇರಬೇಕು'' ಎನ್ನಬೇಕಿತ್ತು. ಆದರೆ ಅದ್ಯಾವುದೂ ಸಂಭವಿಸದೆ ಯಡ್ಡಿಯನ್ನಾಗಲೇ ಅರ್ಧ ಬೀಳ್ಕೊಟ್ಟಿದ್ದಾರಂತಲ್ಲಾ.
ಇತ್ತ ಪಂಚಾಯ್ತಿ ತೀಮರ್ಾನವೂ ಯಡ್ಡಿಗೆ ವಿರುದ್ಧವಾಗಲಿದೆಯಂತಲ್ಲಾ. ಈ ನಡುವೆ ತಲೆಯಲ್ಲಿ ಮೆದುಳಿನ ಕೊರತೆ ಅನುಭವಿಸುತ್ತಿರುವ ಈಶ್ವರಪ್ಪ, ಯಡ್ಡಿ ನಿರ್ಗಮನದ ಸುದ್ದಿಯಿಂದ ಆಗಿರುವ ಸಂತೋಷವನ್ನು ತೋರಗೊಡದೆ ಶನಿಪೂಜೆಗೆ ತೊಡಗಿದ್ದಾನಂತಲ್ಲಾ. ಆದರೂ ಯಡ್ಡಿ ನಂತರ ಈಶ್ವರಿ ಎಂಬ ಸೊಲ್ಲು ಎಲ್ಲೂ ಇಲ್ಲದ್ದು ನೋಡಿ ಅಂತ ಸೊಲ್ಲು ಸುಳಿದಾಡಲು ಏನು ಮಾಡಬೇಕು ಎಂದು ನಾಲಿಗೆಯಲ್ಲಿ ತುಟಿ ಸವರುತ್ತಾ ಕುಳಿತಿದ್ದಾನಂತಲ್ಲಾ, ಥೂತ್ತೇರಿ!!

- ಯಾಹೂ

ನೀರಾ ರಾಡಿಯಲ್ಲಿ ಪೇಜಾವರ

ದಿನಬೆಳಗಾದರೆ ''ಕೃಷ್ಣ-ಕೃಷ್ಣ'' ಎಂದು ಮಂತ್ರ ಪಠಿಸುವ ಬ್ರಾಹ್ಮಣ ಮಠಾಧೀಶ  ಒಂದು ಕಡೆ!
ಇನ್ನು ಕೆಲವೇ ದಿನಗಳಲ್ಲಿ ಕೃಷ್ಣ ಜನ್ಮಸ್ಥಾನ ಸೇರಲಿರುವ ಕಾಪರ್ೊರೇಟ್ ಕಳ್ಳಿ ಇನ್ನೊಂದೆಡೆ!!
ಪೇಜಾವರ ಸ್ವಾಮಿ ಹಾಗೂ ನೀರಾ ರಾಡಿಯಾಗೆ ಸಂಬಂಧಿಸಿದ ವಿಚಾರ ಇದು. ಕೋಟ್ಯಂತರ ರೂಪಾಯಿ ಕಳ್ಳಹಣ ತಣ್ಣಗೆ ಕೈ ಬದಲಾಗಿರುವ ಹಗರಣವಿದು. ದೈತ್ಯ ಸುಂದರಿ ಕಾಪರ್ೊರೇಟ್ ದಲ್ಲಾಳಿ ನೀರಾ ರಾಡಿಯಾಳ ಸಹವಾಸ ಮಾಡಿದ ತಪ್ಪಿಗೆ ಅನೇಕರು ತಲೆದಂಡ ತೆರುತ್ತಿದ್ದಾರೆ.
ಟೆಲಿಕಾಂ ಮಂತ್ರಿ ಎ.ರಾಜಾ ರಾಜೀನಾಮೆ ನೀಡಿ ಮನೆಗೆ ಹೋದ. ಅವನ ಬೆನ್ನ ಹಿಂದೆಯೇ ತನಿಖಾ ತಂಡಗಳು ರಾಜಾ ಮನೆಗೆ ನುಗ್ಗಿ ದಾಳಿ ಮಾಡಿದ್ದಾರೆ. ಇದೇ ನೀರಾಳನ್ನಿಟ್ಟುಕೊಂಡು ಬ್ಯುಸಿನೆಸ್ ಡೀಲ್ ಕುದುರಿಸುತ್ತಿದ್ದ ರತನ್ ಟಾಟಾನ ಮಯರ್ಾದೆಯೂ ಈಗ ಹರಾಜಾಗುತ್ತಿದೆ. ಸ್ವತಃ ದೇಶದ ಪ್ರಧಾನಿಯೇ ಸಂಸತ್ನ  ಲೆಕ್ಕಪತ್ರ ಸಮಿತಿಯೆದುರು ವಿಚಾರಣೆಗಾಗಿ ಬಂದು ನಿಲ್ಲಬೇಕಾಗಿ ಬಂದಿದೆ.
ಇಂತಹ ಅತಿರಥ ಮಹಾರಥರ ಹಗರಣ- ವಂಚನೆಗಳ ಗದ್ದಲದಲ್ಲಿ ಈಗ ಪೇಜಾವರ ಸ್ವಾಮಿಯ ಹೆಸರನ್ನು ಕಾಣಿಸಬೇಕಿದೆ.
ದೈವಾಂಶ ಸಂಭೂತ, ಅಪ್ಪಟ ಪ್ರಾಮಾಣಿಕ, ಧರ್ಮಗುರು ಎಂದೆಲ್ಲಾ ಹೇಳಿಕೊಳ್ಳುವ ಪೇಜಾವರ ಸ್ವಾಮಿಯು ಈ ಕಾಪರ್ೊರೇಟ್ ಕಳ್ಳಿ ನೀರಾ ರಾಡಿಯಾ ಜೊತೆ ಲಿಂಕ್ ಇರಿಸಿಕೊಂಡಿದ್ದಾರೆ. ಇವರಿಬ್ಬರ ನಡುವೆ ಕೋಟ್ಯಂತರ ರೂಪಾಯಿಗಳು ಕೈಬದಲಾಗಿವೆ.
ಜಂಟಿ ಉದ್ಯಮಗಳು, ಟ್ರಸ್ಟ್ಗಳೂ ಅಸ್ತಿತ್ವಕ್ಕೆ ಬಂದಿವೆ. ಹುಡುಕುತ್ತಾ ಹೋದರೆ ದೆಹಲಿಯಿಂದ ಶುರುಮಾಡಿ ಶಿವಮೊಗ್ಗ -ಸಿದ್ದಾಪುರದವರೆಗೂ ನೀರಾ -ಪೇಜಾವರರ ವ್ಯವಹಾರಗಳು ಕಾಣಿಸುತ್ತಿವೆ. ನಮಗಂತೂ ಆಶ್ಚರ್ಯವಾಗಿದೆ. ಎಲ್ಲಿಯ ನೀರಾ  ರಾಡಿಯಾ? ಎಲ್ಲಿಯ ಪೇಜಾವರರು...!?
ಎಂತೆಂತಾ ದೈತ್ಯರನ್ನೇ ಟಿಶ್ಯೂ ಪೇಪರ್ನಂತೆ ಬಳಸಿ ಬಿಸಾಡಿರುವ ನೀರಾ ಪೇಜಾವರರನ್ನು ಬೆನ್ನ ಹಿಂದೆ ಕೂರಿಸಿಕೊಂಡು ಕೂಸುಮರಿ ಮಾಡುವಂತೆ ಎಲ್ಲಿಗೆ ಕರೆದೊಯ್ದಳು? ಅಸಲಿಗೆ ಇವರಿಬ್ಬರ ಮಧ್ಯೆ ದುಡ್ಡು, ವ್ಯವಹಾರ, ಭಕ್ತಿ ಇತ್ಯಾದಿಗಳ ಗೀವ್ ಅಂಡ್ ಟೇಕ್ ಯಾವಾಗಿನಿಂದ ಶುರುವಾಯಿತೆಂಬುದನ್ನೂ ನೋಡಲೇಬೇಕಾಗಿ ಬಂದಿದೆ.
 
ಇವರದ್ದು ರಾಮ ವಿಠಲ ಟ್ರಸ್ಟ್ - ಅವಳದ್ದು ಸುದೇಶ್ ಟ್ರಸ್ಟ್

ತನ್ನ ಕಣ್ಣಿಗೆ ಕಾಣಿಸುವುದನ್ನೆಲ್ಲ ಆಪೋಷನ ತೆಗೆದುಕೊಳ್ಳುವವಳಂತೆ ಕಾಣುವ ಸುಂದರಿ ನೀರಾ ಭಯಂಕರ ಚಾಲಾಕಿ ಹೆಂಗಸು. ಅವಳ ಸೈಜಿನ ಹೆಂಗಸರು ಸಾಮಾನ್ಯವಾಗಿ ಇಂಡಿಯಾ ದೇಶದಲ್ಲಿ ಕಾಣಸಿಗುವುದಿಲ್ಲ. ಈ ಮಹತ್ವಾಕಾಂಕ್ಷಿ ಹೆಣ್ಣು ಕೇವಲ 20 ವರ್ಷಗಳ ಹಿಂದೆ ಒಬ್ಬ ಮಾಮೂಲಿ ಟ್ರಾವೆಲ್ ಏಜೆಂಟ್ ಜಣಕ ರಾಡಿಯಾ ಎಂಬುವನ ಹೆಂಡತಿಯಾಗಿದ್ದಳು. ಆದರಿವತ್ತು ಅದೇ ನೀರಾ 500 ಕೋಟಿಗೆ ತೂಗುತ್ತಿದ್ದಾಳೆ. ಇವಳ ಬ್ಯುಸಿನೆಸ್ ದಲ್ಲಾಳಿ ಕೆಲಸದ ಸಂಪರ್ಕಗಳ ಬಗ್ಗೆ, ದೊಡ್ಡ ದೊಡ್ಡ ಜನರೊಂದಿಗಿನ ಖಾಸಗಿ ಸಂಬಂಧಗಳ ಬಗ್ಗೆ ರಾಶಿರಾಶಿ ಮಾಹಿತಿಗಳು ಹೊರಬೀಳುತ್ತಿವೆ.
ಈ ಕಸದ ರಾಶಿಯಲ್ಲೇ ಪೇಜಾವರರ ಮುಖವೂ ಕಾಣಿಸುತ್ತಿದೆ.
ನೀರಾ ರಾಡಿಯಾ ಎಂಬ ಮೆಗಾ ಸೀರಿಯಲ್ಲಿನ ಹೊಸ ಎಪಿಸೋಡು ಇದು.
ಎಲ್ಲಾ ಕಾಪರ್ೊರೇಟ್ ಖದೀಮರೂ ಮಾಡುವಂತೆ ನೀರಾ ಕೂಡಾ ಸಮಾಜ ಸೇವೆ ಮಾಡುತ್ತಾಳೆ. 2001ರಲ್ಲಿ ಸುನಾಮಿ ದುರಂತ ನಡೆದಾಗ ಈ ನೀರಾ ತನ್ನ ದಿವಂಗತ ತಾಯಿಯ ನೆನಪಲ್ಲಿ ಅವರ ಹೆಸರನ್ನು ಹೊಂದಿರುವ ಸುದೇಶ್ ಟ್ರಸ್ಟ್ ಅನ್ನು ಸ್ಥಾಪಿಸಿದಳು. ಬಡವರಿಗೆ ಅಕ್ಕಿ, ಬಟ್ಟೆ, ಔಷಧಿ ಹಂಚಿ ಫೋಟೋ ತೆಗೆಸಿಕೊಂಡು ಸಾಕಷ್ಟು ಪ್ರಚಾರವನ್ನೂ ಪಡೆದಳು. ಮುಗ್ಧ ಜನ ಈ ತರದ ಸೇವೆಯನ್ನು ಮಾಡುವವರು ತಮ್ಮ ಸ್ವಂತದ ಹಣ ಖಚರ್ು ಮಾಡಿರುತ್ತಾರೆಂದು ನಂಬಿರುತ್ತಾರೆ. ಆದರೆ ವಾಸ್ತವ ಬೇರೆಯೇ ಇರುತ್ತದೆ. ಖಾಸಗಿ ಉದ್ಯಮಿಗಳ ವಾಷರ್ಿಕ ವಹಿವಾಟಿನ ಆಧಾರದ ಮೇಲೆ ಅವರು ಪ್ರತಿವರ್ಷ ಇಂತಿಷ್ಟೆಂದು ಆದಾಯ ತೆರಿಗೆ ಕೊಡಬೇಕಿರುತ್ತದೆ. ಬೇಕಿದ್ದರೆ ಅಂತಹ ತೆರಿಗೆಯ ಒಂದಂಶವನ್ನು ಸಮಾಜ ಸೇವೆಗೋ ಶಿಕ್ಷಣದ ಹೆಸರಿನ ಟ್ರಸ್ಟ್ಗಳಿಗೋ ದಾನ ಎಂದು ನೀಡಿದರೆ ಒಂದಷ್ಟು ತೆರಿಗೆ ವಿನಾಯತಿ ಸಿಗುವಂತಿರುತ್ತದೆ. ನೀರಾ ತರದ ಕಾಪರ್ೊರೇಟ್ ದಲ್ಲಾಳಿಗಳಿಗೆ ದೊಡ್ಡ ದೊಡ್ಡ ಕಂಪೆನಿಗಳಿಂದ  ಹಲವು ಕೋಟಿ ರೂ. ದೇಣಿಗೆ ಪಡೆಯುವುದು ಕಷ್ಟವೇನಲ್ಲ. ಜೊತೆಗೆ ಅವಳದ್ದೇ ಸ್ವಂತದ ಕಂಪೆನಿಗಳಿಗೆ ನೂರಾರು ಕೋಟಿ ರೂಪಾಯಿಗಳ ಅಕ್ರಮ ಹಣ ಹರಿದುಬರುತ್ತಿತ್ತು.
ನೀರಾಳ ಸುದೇಶ್ ಟ್ರಸ್ಟ್ ಇದೇ ಕೆಲಸ ಮಾಡುತ್ತಿದೆ. ಈ ಟ್ರಸ್ಟಿನಲ್ಲಿ ನೀರಾ, ಅವಳ ಸೋದರಿ ಕರುಣಾ, ರಾಹುಲ್ ಸಿಂಗ್ ಹಾಗೂ ರಾಜೀವ ಮೋಹನ್ ಎಂಬುವರು ಟ್ರಸ್ಟಿಗಳಾಗಿದ್ದಾರೆ.
ಪೇಜಾವರ ಸ್ವಾಮಿ ಇದರ ಗೌರವ ಪೋಷಕ!
ಇದು ಪೇಜಾವರರ-ನೀರಾಳ ಲಿಂಕ್ನ ಒಂದು ಮುಖ.
ಮತ್ತೊಂದೆಡೆ ಪೇಜಾವರ ಸ್ವಾಮಿ ಶ್ರೀರಾಮ ವಿಠಲ ಟ್ರಸ್ಟ್ ಎಂಬ ಹೆಸರಿನ ಟ್ರಸ್ಟ್ ಒಂದನ್ನು ಮಾಡಿಕೊಂಡಿದ್ದಾರೆ.
''ಈ ನೀರಾ ರಾಡಿಯಾಳನ್ನು ನನ್ನ ಭಕ್ತರೊಬ್ಬರು ನನಗೇ ಪರಿಚಯಿಸಿದರು. ಆದರೆ ನಾನು ಆಕೆಯನ್ನು ಅನಂತ್ಕುಮಾರ್ ಎಂಬುವವರಿಗೆ ಪರಿಚಯಿಸಲಿಲ್ಲ" ಎಂದು ಪೇಜಾವರರು ಈಗ ಹೇಳುತ್ತಿದ್ದಾರೆ.
ದೆಹಲಿಯ ವಸಂತ್ ಕುಂಜ್ ಪ್ರದೇಶದಲ್ಲಿರುವ ಭೂಮಿಯು
ರಾಮವಿಠಲ ಶಿಕ್ಷಣ ಸೇವಾ ಸಮಿತಿಗೆ ಸೇರಿದ್ದೆಂದು, ಈ ಸಮಿತಿಯ ಅಧ್ಯಕ್ಷ ತಾನೆಂದು, ಇದಕ್ಕೆ ಭೂಮಿಯನ್ನು ಮಾಜಿ ಪ್ರಧಾನಿಗಳಾದ ಪಿ.ವಿ. ನರಸಿಂಹರಾವ್ ಮತ್ತು ದೇವೇಗೌಡ ನೀಡಿದ್ದಾರೆಂದು, ಈ ಸಮಿತಿಗೂ ನೀರಾಗೂ ಯಾವುದೇ ಸಂಬಂಧವಿಲ್ಲ ಎಂದು ಪೇಜಾವರರು ಸ್ಪಷ್ಟೀಕರಣ ನೀಡಿದ್ದಾರೆ.
ಇದು ನಿಜವೇ ಇರಬಹುದು. ಆದರೆ ನೀರಾ ಸ್ಥಾಪಿಸಿರುವ ಸುದೇಶ್ ಟ್ರಸ್ಟ್ನೊಂದಿಗೆ ಪೇಜಾವರರು ಕಳ್ಳುಬಳ್ಳಿ ಸಂಬಂಧ ಹೊಂದಿರುವುದು ನಿಜವಲ್ಲವೇ?

ಕೃಷ್ಣ ಮಂದಿರ ಕಟ್ಟಲು - ಕಳ್ಳಿಯ ದುಡ್ಡು

ದೆಹಲಿಯಲ್ಲಿ  ಪೇಜಾವರರು ಇತ್ತೀಚೆಗೆ ಒಂದು ಕೃಷ್ಣ ಮಂದಿರ ಕಟ್ಟಿಸಿದ್ದಾರೆ. ವಾಜಪೇಯಿ ಪ್ರಧಾನ ಮಂತ್ರಿಯಾಗಿದ್ದಾಗ ಈ ಜಾಗವನ್ನು ಡೆಲ್ಲಿ ಡೆವಲಪ್ಮೆಂಟ್ ಅಥಾರಿಟಿಯಿಂದ ಪೇಜಾವರರು ಮಂಜೂರು ಮಾಡಿಸಿಕೊಂಡಿದ್ದರು. ಈ ಜಾಗದಲ್ಲಿ ಈ ಪೇಜಾವರ ಬೃಹತ್ತಾದ  ಶ್ರೀಕೃಷ್ಣ ದೇವಸ್ಥಾನವನ್ನು ಕಟ್ಟಿಸಿದ್ದಾರೆ. ಪೇಜಾವರರು ಈ ಕೃಷ್ಣ ದೇವಸ್ಥಾನ ನಿಮರ್ಾಣಕ್ಕೆ ಕಳ್ಳಿ ನೀರಾಳಿಂದ ಭಾರಿ ಮೊತ್ತದ ಹಣ ಪಡೆದಿದ್ದಾರೆ. ಅಷ್ಟು ಹಣ ನೀರಾಳಿಗೆ ಎಲ್ಲಿಂದ ಬಂತು ಎಂದು ಹುಡುಕಿದರೆ ಅದು 2ಜಿ ಸ್ಟ್ರೆಕ್ಟಂ ಹಗರಣವೋ, ಖಾಸಗಿ ವಿಮಾನ ಕಂಪೆನಿಗಳ ಡೀಲಿನ ಅಕ್ರಮ ಹಣವೋ ಆಗಿರಲು ಸಾಧ್ಯ.
ಈ ನೀರಾ ಎಂತಹ ಖತರ್ನಾಕ್ ವಂಚಕಿ ಎಂದು ಕಳೆದ ಎರಡು-ಮೂರು ತಿಂಗಳುಗಳಿಂದ ಮೀಡಿಯಾಗಳು ವರದಿ ಮಾಡುತ್ತಿವೆ. ನೀರಾ ಒಬ್ಬ 'ಹಣಕಾಸು ಭಯೋತ್ಪಾದಕಿ' ಎಂತಲೂ ಕೆಲವರು ಆಕೆಯನ್ನು ಬಣ್ಣಿಸುತ್ತಿದ್ದಾರೆ.
ಇವೆಲ್ಲಾ ರಾಡಿಯಾಗಿ ಗದ್ದಲವಾದಾಗಲೂ ಪೇಜಾವರರಿಗೆ ಮಾತ್ರ ನೀರಾ ಬಗ್ಗೆ ಇದ್ದ ವಿಶೇಷ ಆಸಕ್ತಿ ಕಡಿಮೆಯಾಗಲಿಲ್ಲ. ಹಾಗಾಗಿ ಕಳೆದ ನವೆಂಬರ್ 19ರಂದು ಕೃಷ್ಣ ದೇವಸ್ಥಾನದ ಉದ್ಘಾಟನೆಯನ್ನು ಪೇಜಾವರರು ನೆರವೇರಿಸಿದ್ದಾರೆ.  ವಿಶೇಷ ಏನೆಂದರೆ ನವೆಂಬರ್ 19 ನೀರಾಳ ಬತರ್್ಡೇ ಆಗಿದೆ.
 
ವೇದಿಕ್ ಕಾಲೇಜ್ ಜಂಟಿ ದಂಧೆ
ಈ ನೀರಾ ಹಾಗೂ ಪೇಜಾವರರು ಸೇರಿಕೊಂಡು ಸುದೇಶ್ ಹಾಗೂ ರಾಮ ವಿಠಲ ಟ್ರಸ್ಟ್ ಹೆಸರಲ್ಲೇ ದೆಹಲಿಯಲ್ಲಿ ವೇದಿಕ್ ಸ್ಟಡೀಸ್ ಟ್ರಸ್ಟ್ ಎನ್ನುವ ಹೊಸ ಅಂಗಡಿ ತೆರೆದಿದ್ದಾರೆ. VISVESA (Virtual University for Vedic Studies and Research) ಎಂಬ ಹೆಸರಿನ ಇದು ಒಂದು ವೇದಾಧ್ಯಯನದ ಕಾಲೇಜು. ಈ ಕಾಲೇಜಿನ ಹೆಸರಲ್ಲೇ 'ವಿಶ್ವೇಷ' ಇದೆ. ಬೆನ್ನ ಹಿಂದೆ ನೀರಾ ಎಂಬ ರಾಡಿಯೂ ಇದೆ.
ಕರ್ನಾಟಕದಲ್ಲೂ ಜಂಟಿ ಬ್ಯುಸಿನೆಸ್
ನೀರಾಳ ಸುದೇಶ್ ಫೌಂಡೇಷನ್ನ ಶಾಖಾ ಕಚೇರಿಗಳು ದೆಹಲಿ, ಕೊಲ್ಕತ್ತಾ, ನೊಯ್ಡಾ, ಮುಂಬೈ, ಚೆನ್ನೈ, ಹೈದರಾಬಾದ್, ಬೆಂಗಳೂರು (ನಂ. 508, ಪ್ರೆಸ್ಟೀಜ್ ಸೆಂಟರ್ ಪಾಯಿಂಟ್ ಕನ್ನಿಂಗ್ಹ್ಯಾಂ ರಸ್ತೆ), ಅಹ್ಮದಾಬಾದ್, ರಾಂಚಿ, ಲಕ್ನೋ ಮತ್ತು ಭುವನೇಶ್ವರಗಳಲ್ಲಿವೆ.
ಪೇಜಾವರರು ಮತ್ತು ನೀರಾ ಸೇರಿ ದುಡ್ಡು ಮಾಡಲು ಕೆಲವು ಹೊಸ ದಾರಿಗಳನ್ನು ಹುಡುಕಿಕೊಂಡರು. ವೇದ, ಸಂಸ್ಕೃತ, ಆಯುವರ್ೆದ ಇತ್ಯಾದಿಗಳಿಗೂ ಸಾಕಷ್ಟು ಡಿಮ್ಯಾಂಡ್ ಇದೆಯಾದ್ದರಿಂದ ಧರ್ಮಕಾರ್ಯ ಮಾಡಿದ ಪುಣ್ಯವೂ ಬಂತು. ತಿಜೋರಿಯೂ ತುಂಬಿತು ಎಂದುಕೊಂಡು ಇದೇ ವಿಚಾರದ ಹೊಸ ಶಿಕ್ಷಣ ಸಂಸ್ಥೆಗಳನ್ನು ತೆಗೆಯಲು ಹೊರಟರು.
ಅದರಂತೆ ದೇಶದ್ರೋಹಿ ನೀರಾಳ ಜೊತೆ ಪೇಜಾವರರು ಶಿವಮೊಗ್ಗದಲ್ಲೊಂದು ಆಸ್ಪತ್ರೆ ಕಟ್ಟಲು ಹೊರಟಿದ್ದಾರೆ. ಶಿವಮೊಗ್ಗ ಸಾಗರ ರಸ್ತೆಯಲ್ಲಿ ತಲೆ ಎತ್ತಲಿರುವ ಆಸ್ಪತ್ರೆಗೆ ನೀರಾ ಭಾರಿ ಬಂಡವಾಳ ಹಾಕುತ್ತಿದ್ದಾಳೆ.
ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ (SUDA) ಮೂಲಕ ಸಾಗರ ರಸ್ತೆಯಲ್ಲಿ ಒಂದೆರಡು ಎಕರೆ ಜಮೀನಿನ ಮಂಜೂರಾತಿಗೂ ಈಗಾಗಲೇ ಪೇಜಾವರರು ಅಜರ್ಿ ಹಾಕಿದ್ದಾರೆ.
ಇದಿಷ್ಟೆ ಅಲ್ಲದೆ ಉತ್ತರ ಕನ್ನಡದ ಸಿದ್ದಾಪುರ ಬಳಿ ಇನ್ನೊಂದು ಆಯುವರ್ೆದಿಕ್ ಕಾಲೇಜು ಹಾಗೂ ಆಸ್ಪತ್ರೆ ಅಂಗಡಿ ತೆರೆಯಲು ಪೇಜಾವರ-ನೀರಾ ಹೊರಟಿದ್ದಾರೆ. ಇವೆಲ್ಲ ಸುದೇಶ ಟ್ರಸ್ಟ್, ಶ್ರೀರಾಮ ವಿಠಲ ಟ್ರಸ್ಟ್ ಎಂಬಿತ್ಯಾದಿ ಹೆಸರುಗಳಲ್ಲಿ ತಲೆ ಎತ್ತಿದರೂ ಇದೆಲ್ಲವೂ ನೀರಾ ಬೇರೆ ಬೇರೆ ಡೀಲುಗಳಲ್ಲಿ ಕದ್ದ ಹಣವೇ ಆಗಿದೆ.
ಅಡ್ವಾಣಿ-ವಾಜಪೇಯಿ ಸಾಚಾ ಅಲ್ಲ.
ಇಂಡಿಯಾ ದೇಶದ ಅತ್ಯಂತ ದೊಡ್ಡ ವಂಚನೆಯ ಹಗರಣದಲ್ಲಿ ಸಿಕ್ಕಿ ಬಿದ್ದಿರುವ ನೀರಾ ರಾಡಿಯಾಗೆ ಮಹಾನ್ ದೇಶಭಕ್ತರಂತೆ ನಟಿಸುವ ಅಡ್ವಾಣಿ, ವಾಜಪೇಯಿಗಳೆಲ್ಲಾ ಗೊತ್ತು. ಮಹಾನ್ ರಾಷ್ಟ್ರ ನಿಮರ್ಾಣಕ್ಕೆ ಟೊಂಕಕಟ್ಟಿ ನಿಂತಂತೆ ಪೋಜು ಕೊಡುವ ಟಾಟಾ, ಅಂಬಾನಿಗಳೂ ಗೊತ್ತು.
ಅದಿಷ್ಟೆ ಅಲ್ಲ
ಮಹಾನ್ ದೈವಭಕ್ತರೂ, ಹಿಂದೂ ಧರ್ಮದ ರಕ್ಷಕರಂತೆ ಓಡಾಡುತ್ತಿರುವ ಪೇಜಾವರರೂ ಗೊತ್ತು.
ಇದು ಬರೀ ಗೊತ್ತಿರುವ ಸಂಗತಿಯಾಗಿದಿದ್ದರೆ, ಅಕಸ್ಮಾತ್ ಸಭೆ ಸಮಾರಂಭದಲ್ಲಿ ಸಿಕ್ಕು ಒಂದು ಫೋಟೋ ತೆಗೆಸಿಕೊಂಡ ಸನ್ನಿವೇಶವಾಗಿದ್ದರೆ ನಿರ್ಲಕ್ಷಿಸಬಹುದಾಗಿತ್ತು.
ಆದರೆ
ಪೇಜಾವರ ಸ್ವಾಮಿ ಈ ಕಳ್ಳಿಯ ಜೊತೆ ಹಣಕಾಸಿನ ವ್ಯವಹಾರ ಇಟ್ಟುಕೊಂಡಿದ್ದಾರೆ. ಅವಳ ಸುದೇಶ್ ಟ್ರಸ್ಟಿನ ಗೌರವ ಪೋಷಕರಾಗಿದ್ದಾರೆ.
ನೀರಾಳಿಂದ ತಮ್ಮ ಕೃಷ್ಣ ದೇವಸ್ಥಾನದ ನಿಮರ್ಾಣಕ್ಕೆ ಹಣ ತೆಗೆದುಕೊಂಡಿದ್ದಾರೆ. ಜಂಟಿ ಬ್ಯುಸಿನೆಸ್ಗೆ ಕೈಹಾಕಿದ್ದಾರೆ.
ನೀರಾ ಅಪರಾಧಿಯಾದರೆ ಪೇಜಾವರರೂ ಅಪರಾಧಿಯಲ್ಲವೇ? ಇದಕ್ಕೆ ಪೇಜಾವರರು ಉತ್ತರಿಸಲಿ.

ಪಾರ್ವತೀಶ

ಉಪೇಂದ್ರನ ಸುತ್ತ ವಿಕೃತಿ

ಉಪೇಂದ್ರ ನಿದರ್ೇಶನದ ಸಿನಿಮಾ 'ಸೂಪರ್' ಕನರ್ಾಟಕದ ಥಿಯೇಟರ್ಗಳಲ್ಲಿ 25 ದಿನಗಳನ್ನು ಪೂರೈಸಿದೆ. ಇದು ಉಪೇಂದ್ರ ಬ್ರಾಂಡ್ನ ಮತ್ತೊಂದು ಟಿಪಿಕಲ್ ಸಿನಿಮಾ. 'ಎ' ಸಿನಿಮಾದಿಂದ ಶುರುವಾದ ಈ ಬ್ರಾಂಡ್ನಲ್ಲಿ ಜನರಿಗೇನೋ ಸಂದೇಶವನ್ನು ನೀಡುತ್ತಿದ್ದಾರೆ ಎಂಬ ಭ್ರಮೆಯನ್ನು ಮೂಡಿಸಲಾಗುತ್ತದೆ. `ಸೂಪರ್' ನಲ್ಲಂತೂ ಅದು ಧಾರಾಳವಾಗಿಯೇ ಇದೆ. ಇಂದು ನಡೆಯುತ್ತಿರುವ ಭ್ರಷ್ಟಾಚಾರವನ್ನು, ರಾಜಕಾರಣಿಗಳ ದುಷ್ಟ ಆಟಗಳನ್ನು ವ್ಯಂಗ್ಯ ಮಾಡುವ ಈ ಸಿನಿಮಾ ಪ್ರಧಾನವಾಗಿ ಟಾಗರ್ೆಟ್ ಮಾಡುವುದು ಸಾಮಾನ್ಯ ಜನರನ್ನು. ಮೇಲ್ನೋಟಕ್ಕೆ ಅದು ಜನಸಾಮಾನ್ಯರ ನಿಷ್ಕ್ರಿಯತೆಯನ್ನು ಲೇವಡಿ ಮಾಡಿ ಅವರನ್ನು ಅನ್ಯಾಯದ ವಿರುದ್ಧ ಹೋರಾಟ ಮಾಡುವಂತೆ ಪ್ರಚೋದಿಸುತ್ತದೆ ಎನ್ನಿಸುತ್ತದೆ. ಈತನದ್ದೇ ನಿದರ್ೇಶನದ 'ಆಪರೇಷನ್ ಅಂತ'ದಲ್ಲೂ ಇದರ ಸೂಚನೆಗಳಿವೆ.
ಆದರೆ ಈ ರೀತಿಯ ಸಿನಿಮಾಗಳಲ್ಲಿ ಒಂದು ಅಪಾಯವಿದೆ. ಏಕೆಂದರೆ ಇವು ವ್ಯವಸ್ಥೆಯ ಕೆಟ್ಟ ಅಂಶಗಳ ವಿರುದ್ಧ ಮಾತನಾಡುತ್ತಲೇ ಅದನ್ನು ಮತ್ತಷ್ಟು ಬಲಪಡಿಸುತ್ತವೆ. ಕೊಳೆತು ಹೋಗಿರುವ ವ್ಯವಸ್ಥೆ ಕುರಿತಂತೆ ಎರಡು ವಿಭಿನ್ನ ದೃಷ್ಟಿಕೋನದ ವಿಮಶರ್ೆಗಳಿರಲು ಸಾಧ್ಯ. ಒಂದು, ಜನರನ್ನು ಜಾಗೃತಿಗೊಳಿಸಿ ಸಾಮೂಹಿಕ ಕ್ರಿಯೆಗಳ ಮೂಲಕ ವ್ಯವಸ್ಥೆಯ ಬದಲಾವಣೆಗೆ ತೊಡಗುವಂತೆ ಮಾಡುವ ಉದ್ದೇಶದ್ದು. ಇನ್ನೊಂದು, ಸಮಾಜವನ್ನು ಬೆತ್ತಲುಗೊಳಿಸುವ ಹೆಸರಿನಲ್ಲಿ ಮತ್ತಷ್ಟು ಪ್ರತಿಗಾಮಿ ಪಯರ್ಾಯಗಳೆಡೆಗೆ ಕೊಂಡೊಯ್ಯುವುದು. ಇಲ್ಲಿ ಉಪೇಂದ್ರ ಮಾಡುತ್ತಿರುವುದು ಎರಡನೆಯದ್ದನ್ನು.
ವ್ಯವಸ್ಥೆ ಬದಲಾವಣೆಗೆ ಸಾಮೂಹಿಕ ಕಾಯರ್ಾಚರಣೆಗೆ ಇಳಿಯದ ಜನರು ಸಿನಿಕರಾಗಿ 'ಇಲ್ಲಿ ಕಮ್ಯುನಿಸಂ ಬರಬೇಕು, ಮಿಲಿಟರಿ ಆಡಳಿತ ಬರಬೇಕು, ಹಿಟ್ಲರ್ ಥರಾ ಆಡಳಿತ ನಡೆಸಬೇಕು' ಅಂತ ಹೇಳುತ್ತಿರುತ್ತಾರೆ. ಅಂಥವರಿಗೆ ಕಮ್ಯುನಿಸಮ್ಮೂ ಗೊತ್ತಿಲ್ಲ, ಹಿಟ್ಲರ್ ಕೂಡಾ ಗೊತ್ತಿಲ್ಲ. ಫ್ಯಾಸಿಸ್ಟ್ ಸವರ್ಾಧಿಕಾರವನ್ನೂ, ಜನಸಾಮಾನ್ಯರ ಬೃಹತ್ ಹೋರಾಟದಿಂದ ನಡೆಯುವ ಕಮ್ಯುನಿಸ್ಟ್ ಕ್ರಾಂತಿಗಳನ್ನೂ ಒಂದೇ ಎನ್ನುವ ರೀತಿಯಲ್ಲಿ ತಿಳಿಯುತ್ತಾರೆ. ಎರಡೂ ಸೈದ್ಧಾಂತಿಕವಾಗಿ, ಆಚರಣೆಯಲ್ಲಿ ಪರಸ್ಪರ ವಿರುದ್ಧದ ಧಾರೆಗಳು ಅಂತ ಅವರಿಗೆ ಗೊತ್ತಿರುವುದಿಲ್ಲ. ಇಂಥವರೇ ಗುಜರಾತ್ನಲ್ಲಿ ಮೋದಿ ಸಕತ್ ಆಗಿ ಆಡಳಿತ ನಡೆಸುತ್ತಿದ್ದಾನಂತೆ, ನಮ್ಮಲ್ಲಿಗೂ ಅಂಥವನೇ ಬೇಕು ಎಂದೂ ಹೇಳುತ್ತಾರೆ.
ಸಾವಿರಾರು ಮುಸ್ಲಿಮರ ನರಮೇಧ ನಡೆಸಿದ ಮೋದಿ ಅದು ಹೇಗೆ ಜನಪರ ಆಡಳಿತ ನೀಡಬಲ್ಲ ಎಂದು ಅವರು ಯೋಚಿಸುವ ಗೊಡವೆಗೇ ಹೋಗುವುದಿಲ್ಲ. ಹಿಟ್ಲರ್ ಎಂದರೆ ಬಲಪ್ರಯೋಗದಿಂದ ಶಿಸ್ತನ್ನು ತಂದ ಸವರ್ಾಧಿಕಾರಿ ಎಂಬ ತಿಳಿವಳಿಕೆಯ ಅವರುಗಳು, ಅವನು ಇತಿಹಾಸ ಕಂಡ ಅತ್ಯಂತ ದುಷ್ಟ ನರಹಂತಕ ಎನ್ನುವ ಮಾಹಿತಿಯನ್ನು ಗಮನಿಸುವುದಿಲ್ಲ; ಗಮನಿಸಿದರೂ ಅದು ಅವರಿಗೆ ಮುಖ್ಯವಾಗಿರುವುದಿಲ್ಲ. ಮೋದಿ, ಹಿಟ್ಲರ್ ಥರದವರು ಮೂಲಭೂತವಾಗಿ ಶೋಷಕರ, ಬಂಡವಾಳಶಾಹಿಗಳ ಪರವಾಗಿ ಆಡಳಿತ ನಡೆಸುವವರು ಎನ್ನುವ ವಾಸ್ತವವೂ ಬೇಕಾಗಿರುವುದಿಲ್ಲ.
ಏಕೆಂದರೆ ಎಲ್ಲಿಂದಲೋ ಅವತರಿಸುವ ಮಹಾಪುರುಷನೊಬ್ಬ ಬದಲಾವಣೆ ತರುವುದು ಅವರಿಗೆ ಬೇಕಾಗಿರುತ್ತದೆ. ಉಪೇಂದ್ರನ ಸಿನಿಮಾ ಜನರ ಈ ಧೋರಣೆಯನ್ನು ಲೇವಡಿ ಮಾಡುವ ರೀತಿ ಕಾಣುತ್ತದೆ. ಜನರು ಅನ್ಯಾಯದ ವಿರುದ್ಧ ರೊಚ್ಚಿಗೆದ್ದು ತಮ್ಮಂತೆ ತಾವೇ ಎಲ್ಲವನ್ನೂ ಬದಲಾಯಿಸಬೇಕು ಎಂಬಂತಹ ಕರೆಗಳನ್ನು ನೀಡಲಾಗುತ್ತದೆ. ಒಂದು ಹುಸಿ ಕ್ರಾಂತಿಕಾರಿ ಸೋಗು ಉಪೇಂದ್ರ ನಿದರ್ೇಶನದ ಇಂತಹ ಸಿನಿಮಾಗಳಲ್ಲಿ ಕಾಣುತ್ತದೆ. ಆದರೆ ಅದಕ್ಕಾಗಿ ವ್ಯವಸ್ಥೆಯ ಬಲಿಪಶುಗಳಾದ ಜನರನ್ನೇ ವಿಪರೀತ ಲೇವಡಿ ಮಾಡಿ ಬಯ್ಯಲಾಗುತ್ತದೆ. ಜೊತೆಗೆ ಬೀದಿಯಲ್ಲಿ ಕಸ ಚೆಲ್ಲುವ, ಗೋಡೆ ಬದಿಯಲ್ಲಿ ಉಚ್ಚೆ ಹೊಯ್ಯುವ ಜನರು ನೂರು ಎಕರೆ ಭೂಮಿ ಡೀನೋಟಿಫೈ ಮಾಡಿದ ಮುಖ್ಯಮಂತ್ರಿಯಷ್ಟೇ ಅಪರಾಧಿಗಳು ಎನ್ನುವ ರೀತಿಯಲ್ಲಿ ಚಿತ್ರಿಸಲಾಗುತ್ತದೆ. ಕೊನೆಗೂ ಜನರು ತಮ್ಮ ಸಾಮೂಹಿಕ ಜನಾಂದೋಲನದಿಂದ ಅಲ್ಲಿ ಬದಲಾವಣೆ ತರುವುದಿಲ್ಲ. ಬದಲಿಗೆ ಈ ಮಹಾಪುರುಷ (ಅದು ನಿದರ್ೇಶಕನ ರೂಪದಲ್ಲೋ, ನಾಯಕನ ರೂಪದಲ್ಲೋ ಇರುವ ಉಪೇಂದ್ರ ಎಂದು ಹೇಳಬೇಕಾಗಿಲ್ಲ) ಮಾಡುವ ಟ್ರಿಕ್ನಿಂದ ಬದಲಾವಣೆ ಬರುತ್ತದೆ. ಹೆಚ್ಚೆಂದರೆ ಇವನಿಂದ ಪ್ರಚೋದನೆಗೊಳಗಾದ ಉದ್ರಿಕ್ತ ಗುಂಪುಗಳು (ಮಾಬ್ಗಳು- ಭಜರಂಗದಳ, ಶಿವಸೇನೆ ಕಲ್ಪಿಸಿಕೊಳ್ಳಿ) ಬೀದಿಬೀದಿಯಲ್ಲಿ ಅವರಿವರಿಗೆ ಚಚ್ಚುತ್ತಾರೆ.
ಹಸೀ ಹಸೀ ಭಾಷಣಗಳಿಂದ, ಬೀದಿ ಬಡಿದಾಟಗಳಿಂದ, ದುಷ್ಟ ಮಾರ್ಗಗಳಿಂದ ಸಂಪಾದಿಸಿದ ಲಕ್ಷ ಕೋಟಿ ಹಣದಿಂದ ಮತ್ತು ಸೂಪರ್ ಟ್ರಿಕ್ಗಳಿಂದ ಉಪೇಂದ್ರನ ಸಿನಿಮಾದಲ್ಲಿ ಬದಲಾವಣೆ ಬರುತ್ತದೆ. `ಸೂಪರ್' ಸಿನಿಮಾದಲ್ಲೂ ಅಂತಿಮವಾಗಿ ಬದಲಾವಣೆ ಬರುವುದು ಇಂತಹುದೇ ರೀತಿಯಲ್ಲಿ. ಕೊಳಕು ಮಾರ್ಗಗಳಿಂದ ಸುಭಾಷ್ಚಂದ್ರ ಗಾಂಧಿ (ಉಪೇಂದ್ರ) ಅಧಿಕಾರಕ್ಕೆ ಬಂದು ಇಡೀ ರಾಜ್ಯವನ್ನು ಹರಾಜು ಹಾಕುತ್ತಾನೆ. ಆಗ ಜನರಿಗೆ ಸಾರ್ವಜನಿಕ ಆಸ್ತಿಯ ಬೆಲೆ ಅರಿವಾಗುತ್ತದೆ. ಒಂದೊಂದು ಊರಿನ ಪಾಕರ್ು, ರಸ್ತೆ, ಮೈದಾನಗಳನ್ನು ಜನರಿಗೆ ವಿಭಾಗ ಮಾಡಿ ಹಂಚಿಬಿಡಲಾಗುತ್ತದೆ. ಅಲ್ಲಿಂದ ಮುಂದೆ ಪ್ರತಿಯೊಬ್ಬರೂ ತಮ್ಮ ತಮ್ಮ ಖಾಸಗೀ ಆಸ್ತಿಯಾದ ತಮ್ಮ ಭಾಗದ ರಸ್ತೆ, ಪಾಕರ್ುಗಳನ್ನು ಅಚ್ಚುಕಟ್ಟು ಮಾಡಿ ಕೊಂಡುಬಿಡುತ್ತಾರೆ. ಆದರೆ ಮುಖ್ಯಮಂತ್ರಿ ಉಪೇಂದ್ರ ಮಾತ್ರ ಹಳ್ಳಿಯಲ್ಲಿ ಬೇಸಾಯ ಮಾಡಿಕೊಂಡು ಇದ್ದುಬಿಡುತ್ತಾನೆ. 20 ವರ್ಷಗಳಲ್ಲಿ ಕನರ್ಾಟಕ ಸಂಪದ್ಭರಿತ ದೇಶವಾಗಿಬಿಡುತ್ತದೆ. ವಿದೇಶೀಯರು ಇಲ್ಲಿ ಬಂದು ಕೂಲಿ ಕೆಲಸ ಮಾಡಲು ಶುರು ಮಾಡುತ್ತಾರೆ, ಭಿಕ್ಷುಕರಾಗಿ ದೇವಸ್ಥಾನಗಳ ಮುಂದೆ, ಬಸ್ಸ್ಟಾಂಡ್ಗಳಲ್ಲಿ ಕಾಣಸಿಗುತ್ತಾರೆ. ಕನರ್ಾಟಕ ಸಂಪದ್ಭರಿತವಾಗುವುದೇನೋ ಸರಿ, ಆದರೆ ಇದ್ದಕ್ಕಿದ್ದಂತೆ ಪಾಶ್ಚಾತ್ಯರು ಇಲ್ಲಿ ಭಿಕ್ಷುಕರಾಗುವುದು ಏಕೋ, ನಿದರ್ೇಶಕನಿಗೇ ಗೊತ್ತು.
ಸಮಾಜದಲ್ಲಿ ಆಗುತ್ತಿರುವ ಶೋಷಣೆಯು ಮೂಲ ಏನು ಎಂಬುದರ ಕುರಿತು ಉಪೇಂದ್ರನಿಗೆ ಕನಿಷ್ಠ ಜ್ಞಾನವಿದ್ದಂತೆ ಸಿನಿಮಾದಲ್ಲಿ ಎಲ್ಲೂ ತೋರುವುದಿಲ್ಲ. ಮಹಿಳೆಯರ ಮೇಲೆ ನಡೆಯು ತ್ತಿರುವ ತಾರತಮ್ಯ ಮತ್ತು ದಬ್ಬಾಳಿಕೆಯು ಈ ಸಮಾಜ ವ್ಯವಸ್ಥೆಯ ಅತ್ಯಂತ ಪ್ರಮುಖ ಶೋಷಣೆ ಗಳಲ್ಲೊಂದು ಎನ್ನುವುದನ್ನು ಆತ ಬಿಂಬಿಸುವುದು ಹೋಗಲಿ, ಆ ಶೋಷಣೆಗೆ ಮತ್ತಷ್ಟು ಮೊನಚನ್ನೂ, ಹೊಸ ಹೊಸ ಮಹಿಳಾ ವಿರೋಧಿ ವಾದಗಳನ್ನೂ ಇವನೇ ಹುಡುಕಿಕೊಡುತ್ತಾನೆ. ಯಾವ ಜನರು ಶೋಷಣೆಯ ಬಲಿಪಶುಗಳಾಗಿರುತ್ತಾರೋ, ಅವರು ಸುಮ್ಮನಿರುವುದೇ ಶೋಷಣೆಗೆ ಕಾರಣವೆಂದು ತೋರಿಸುವುದು `ಸೂಪರ್' ಸಿನಿಮಾದ ಒಂದು ಪ್ರಧಾನ ಎಳೆ. ಜನಸಾಮಾನ್ಯರು ಮಾಡುವ ಸಣ್ಣ ಪುಟ್ಟ ತಪ್ಪುಗಳೂ, ಶೋಷಕ ವರ್ಗಗಳು ಮಾಡುವ ಅಗಾಧ ಲೂಟಿಯೂ ಒಂದೇ ಪ್ರಮಾಣದ ತಪ್ಪು ಎಂದು ಬಿಂಬಿಸುವುದು ಈತನ ಹಿಂದಿನ ಸಿನಿಮಾ ಗಳಲ್ಲೂ ಕಂಡಿದೆ.
ಉಪೇಂದ್ರನ ಹಲವು ಸಿನಿಮಾಗಳಲ್ಲಿ ಹಿಂದೂ ತ್ವದ ವಾಸನೆ ಹೊಡೆಯುತ್ತದೆ. `ಸ್ವಸ್ತಿಕ್' ಸಿನಿಮಾದಲ್ಲಿ ಆತ ಸ್ಪಷ್ಟವಾಗಿ ಮುಸ್ಲಿಂ ವಿರೋಧಿಯಾಗಿ ಕಾಣಿಸಿಕೊಳ್ಳುತ್ತಾನೆ. ಮಹಿಳೆಯರ ಬಗೆಗಿನ ಅವನ ನಿಲುವುಗಳೂ ಇದೇ ನೆಲೆಯಿಂದಲೇ ಬರುತ್ತಿರು ವುದು. ವಿಶೇಷವಾಗಿ ಮಾಡ್ ಡ್ರೆಸ್ ಮಾಡಿಕೊಳ್ಳುವ ಹೆಣ್ಣುಮಕ್ಕಳ ಬಗ್ಗೆ ಅವನ ಸಿನಿಮಾದಲ್ಲಿ ಕಾಣುವ ವರಾತಗಳು  ಕುಪ್ರಸಿದ್ಧವಾಗಿವೆ.  `ನಿಮ್ಮನ್ನು ಯಾರಾದರೂ ರೇಪ್ ಮಾಡಿದರೆ ಅದಕ್ಕೆ ಕಾರಣ ನೀವು ತೊಡುವ ಬಟ್ಟೆ. ನೀವು ಹಾಗೆ ಮಾಡುವುದ ರಿಂದಲೇ ಪ್ರಚೋದನೆಗೊಂಡು ಅತ್ಯಾಚಾರ ಇತ್ಯಾದಿ ಲೈಂಗಿಕ ಕಿರುಕುಳಗಳು ಸಂಭವಿಸುತ್ತವೆ' ಎಂಬುದು ಆತನ ಥಿಯರಿ. ವಾಸ್ತವದಲ್ಲಿ ಅತ್ಯಂತ ಹೆಚ್ಚು ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳಗಳು ಪರಿಚಿತರಿಂದ, ಹತ್ತಿರದ ಸಂಬಂಧಿಗಳಿಂದ ನಡೆಯುತ್ತದೆ ಎಂಬ ಅಂಕಿ-ಅಂಶ ಕಟ್ಟಿಕೊಂಡು ಆತನಿಗೆ ಆಗಬೇಕಾದ್ದೇನೂ ಇಲ್ಲ. ಉಪೇಂದ್ರ ತನ್ನ ಸಿನಿಮಾಗಳಲ್ಲಿ ಮಾಡುತ್ತಿರುವುದೇನು? ಹುಡುಗಿಯ ರನ್ನು ಅರೆನಗ್ನವಾಗಿ ಏಕೆ ತೋರಿಸುತ್ತಾನೆ? ಮಹಿಳೆ ಯರ ಮೇಲೆ ಮತ್ತಷ್ಟು ಅತ್ಯಾಚಾರಗಳು ನಡೆಯಲಿ ಎಂದೇ? ಅಲ್ಲ, ಸಿನಿಮಾ ಜಾಸ್ತಿ ಓಡಲಿ ಎಂದು.
ಅಸಲೀ ವಿಚಾರ ಇರುವುದೇ ಇಲ್ಲಿ. ಇಂತಹ ವಿಕೃತಿಗೊಂದು ಮಾಕರ್ೆಟ್ ಇದೆ. 'ಏನೇ ಆದರೂ ಈ ಸಮಾಜದಲ್ಲಿ ನಡೆಯುತ್ತಿರುವುದನ್ನೇ ತೋರಿಸುತ್ತಾನೆ', 'ಇಂಥದ್ದೂ ನಡೆಯುತ್ತಿದೆ ಅಲ್ಲವಾ? ಕೆಲವು ಹೆಣ್ಣುಮಕ್ಕಳು ಹೀಗೆಯೇ ಇದ್ದಾರಲ್ಲವಾ?' ಅಂತ ಹೇಳುವವರೂ ಇರುತ್ತಾರೆ. ವಿಕೃತಿಗೆ ಇರುವ ಮಾಕರ್ೆಟ್ಅನ್ನು ಬಳಸಿಕೊಳ್ಳುವುದು ಮತ್ತು ವಿಕೃತಿಗೆ ಹೊಸ ಮಾಕರ್ೆಟ್ಅನ್ನು ಸೃಷ್ಟಿಸುವುದು ಉಪೇಂದ್ರನ ಸಿನಿಮಾಗಳ ಫಲಿತಾಂಶವಾಗಿದೆ. ಇಂತಹುದೇ ಕೆಲಸವನ್ನು ಹಲವು ಪತ್ರಿಕೆಗಳು ಮತ್ತು ಟಿವಿ ಚಾನೆಲ್ಗಳು ಮಾಡಿಕೊಂಡು ಬಂದಿವೆ. ಈ ರೀತಿಯದೊಂದು ಮಾಕರ್ೆಟ್ಅನ್ನು ಬೆಳೆಸುವುದು, ನಂತರ 'ಏನು ಮಾಡುವುದು, ಜನ ಇಂಥದ್ದನ್ನೇ ಬಯಸುತ್ತಾರೆ. ಅವರು ಕೇಳಿದ್ದನ್ನು ನಾವು ಕೊಡುತ್ತೇವೆ' ಎನ್ನುವುದು ಇಂಥವರ ಚಾಳಿ.
ಇದರರ್ಥ ಇಂಥದನ್ನು ನೋಡುವ, ಓದುವ ಎಲ್ಲರೂ ಪ್ರಾರಂಭದಿಂದಲೇ ವಿಕೃತಿಯ ಆರಾಧಕರಾಗಿರುತ್ತಾರೆ ಅಂತ ಅಲ್ಲ. ತೌಡು ಕುಟ್ಟುವ ಹಳಸಲು ಸಿನಿಮಾಗಳನ್ನು, ಪತ್ರಿಕೆಗಳನ್ನು ಎಲ್ಲರೂ ಮಾಡುವ ಸಮಯದಲ್ಲಿ ಇವರೇನೋ ವಿಶಿಷ್ಟವಾದದ್ದನ್ನು ಹೇಳುತ್ತಾರೆ ಎಂಬ ಭ್ರಮೆಯನ್ನು ಮೊದಲು ಮೂಡಿಸುತ್ತಾರೆ. ಕಥೆಯನ್ನು ಹೇಳುವ ರೀತಿ, ಭಾಷೆಯನ್ನು ಬಳಸುವ ರೀತಿಯಲ್ಲಿನ ವಿಶಿಷ್ಟತೆಗಾಗಿ ಅದರ ಬಗ್ಗೆ ಕುತೂಹಲ ಮತ್ತು ಮೆಚ್ಚಿಗೆ ಮೂಡುತ್ತದೆ. ಆದರೆ ಒಳಹೂರಣ ಗಲೀಜಾದದ್ದು ಎನ್ನುವುದು ವಾಚಕ/ಪ್ರೇಕ್ಷಕ ಮಹಾಶಯರಿಗೆ ಸುಲಭವಾಗಿ ಗೊತ್ತಾಗುವುದಿಲ್ಲ. ಸಮಾಜ ಇದರಿಂದ ಮತ್ತಷ್ಟು ಗಲೀಜಾಗುತ್ತದೆಯೇ ಹೊರತು, ಯಾವ ರೀತಿಯಿಂದಲೂ ಸುಧಾರಿಸುವುದಿಲ್ಲ ಎನ್ನುವ ಕಾರಣಕ್ಕೆ ನಾವು ತಲೆಕೆಡಿಸಿಕೊಳ್ಳಬೇಕಿದೆ.

ಡಾ.ಎಚ್.ವಿ. ವಾಸು

ಶೆಟ್ಟರ ತಿರುಪತಿ ಲಾಡು

ಹಬ್ಬದ ದಿನಗಳಲ್ಲೇ ಚುನಾವಣೆ ಎಂಬ ಅನಿವಾರ್ಯ ಅನಿಷ್ಠ ಬಂದು ಭಕ್ತರಿಗೆ ಕೊಡಬಾರದ ಕಾಟ ಕೊಡುತ್ತದೆ. ಹೊಸ ವರ್ಷದ ಆಚರಣೇನ ಎಲ್ಲಿ? ಹೇಗೆ ಅದ್ಧೂರಿ ಯಿಂದ ಆಚರಿಸಬೇಕು ಅನ್ನೋ ಯೋಜನೆಯನ್ನ ಕೆಲವರು ವರ್ಷದ ಮೊದಲೇ ಚಚರ್ಿಸಿ ತೀಮರ್ಾನಿಸಿರುತ್ತಾರೆ. ಈಗ ನೋಡಿದರೆ ಡಿಸೆಂಬರ್ 31 ಕ್ಕೆ ಹಾಳಾದ ಚುನಾವಣೆ ಬಂದು ಕುಂತದೆ. ಚುನಾವಣೆಗೂ ಹೊಸ ವರ್ಷದ ಆಚರಣೆಗೂ ಬಾದರಾಯನ ಸಂಬಂಧವೂ ಇಲ್ಲ. ಅದರ ಪಾಡಿಗೆ ಅದು, ಇದರ ಪಾಡಿಗೆ ಇದು ಅನ್ನುವಂತಿಲ್ಲ. ಭರ್ಜರಿಯಾಗಿ ಹೊಸ ವರ್ಷ ಆಚರಿಸಿದೆವು ಅಂದ್ರೆ ಸಖತ್ತಾಗಿ ಕುಡ್ದು ತಿಂದು ಮಜಾ ಉಡಾಯಿಸಿದೊ ಎಂದೇ ಅರ್ಥ ತಾನೆ. ಅವತ್ತು ಮದ್ಯಪಾನ ನಿಷೇಧ ಅಂತೆ! ಅದೇ ಇಲ್ಲದ ಮೇಲೆ ಹೊಸ ವರ್ಷ ಆಚರಿಸುವುದಾದರೂ ಹೆಂಗೆ ಅನ್ನೋದು ಹಲವರ ಚಿಂತೆ. ಆರಂಭದ ಮೊದಲ ದಿನವೇ ಹಿಂಗಾದ್ರೆ ಇನ್ನು ವರ್ಷ ಪೂತರ್ಾ ಇನ್ನೇನು ಅನಿಷ್ಠಗಳು ಕಾದಿರುತ್ತವೋ ಎನ್ನುವುದು ಅವರ ಸಂಕಟ. ಹಂಗಾದ್ರೆ ಅವತ್ತು ಯಾರೂ ಕುಡಿಯೋದೆ ಇಲ್ವ ಅಂದ್ರೆ ಕುಡೀತಾರೆ, ಅವತ್ತು ಹೆಚ್ಚಿಗೇನೆ ಪರಮಾತ್ಮನ ಸೇವನೆ ಆಗಿರುತ್ತೆ. ಇದರಲ್ಲಿ ಯಾರ ಅಪರಾಧನೂ ಇಲ್ಲ. ಪರಮಾತ್ಮನ ಸೇವೆ ಮಾಡದೆ ಇದ್ದರೆ ನಿದ್ರಾದೇವಿ ಮತದಾರ ಬಂಧುವಿನ ಸಮೀಪವೂ ಸುಳಿಯುವುದಿಲ್ಲ ಎಂಬ ಕಟುಸತ್ಯವನ್ನು ಅರಿತ ಅಭ್ಯಥರ್ಿಗಳು ಧಾರಾಳವಾಗಿ ಮದ್ಯ ಸರಬರಾಜು ಮಾಡುವ ಮುಖಾಂತರ ಅವರ ಕಷ್ಟವನ್ನು ಪರಿಹರಿಸು ತ್ತಾರೆ. ಪ್ರಜ್ಞಾವಂತ ಮತದಾರ ಮಹಾಪ್ರಭುವೂ ಈ ಸೇವಾನಿಷ್ಠೆಗೆ ಸಂಪೂರ್ಣ ನ್ಯಾಯ ಒದಗಿಸುತ್ತಾನೆ! ಮದ್ಯ ಪಾನ ನಿಷೇಧ ಅಂತ ಕಾನೂನು ಇರುತ್ತದಲ್ಲ ಅಂದ್ರೆ ಅದರ ಪಾಡಿಗೆ ಅದು ಇರುತ್ತದೆ. ಎಲ್ಲರೂ ಕುಡಿಯೋ ಹಾಗೇನೆ ಹೊಸ ವರ್ಷ ಆಚರಣೆದಾರರೂ ತಾಯಿಯ ಸೇವನೆಮಾಡುತ್ತಾ ಅಮಲಿನ ಸುಖದಲ್ಲಿ ತೇಲಬಹುದಲ್ಲಾ ಅಂದ್ರೆ `ನೈತಿಕ ಪೊಲೀಸು' ಇದ್ನೇ ಕಾಯುತ್ತಾ ಕುಂತಿರ್ತವೆ. `ಬೇಕಾದ್ರೆ ಚುನಾವಣೆ ಹೆಂಡ ಕುಡೀರಿ, ವಷರ್ಾಚರಣೆ ಹೆಂಡ ಕುಡಿದರೆ ಹುಷಾರ್' ಅಂತ ಕೂಗಾಡ್ತವೆ.
`ಏನ್ ಸ್ವಾಮಿ ಇಂತ ಇಕ್ಕಟ್ಟಿಗೆ ಸಿಕ್ಕಿಸಿ ಬಿಟ್ರಿ ನಮ್ನ. ಹೊಸ ವರ್ಷ ಆಚರಿಸೋದು ಹೆಂಗೆ ಹೇಳಿ' ಅಂತ ಯಾರೋ ಚುನಾವಣಾ ಆಯುಕ್ತರ ಮುಂದೆ ತಮ್ಮ ಗೋಳು ತೋಡಿಕೊಂಡ್ರಂತೆ. ಅದ್ಕೆ ಅವ್ರು `ಹೊಸ ವರ್ಷ ಬರೋದು ರಾತ್ರಿ ಹನ್ನೆರಡು ಗಂಟೆಗಲ್ವೇನ್ರಿ.... ಆಮೇಲೆ ಕುಡ್ದು ಕುಪ್ಪಳಿಸಿ ಯಾರು ಬ್ಯಾಡ ಅಂದೋರು' ಅಂದ್ರಂತೆ. ಅಲ್ಲ ಹೊಸ ವರ್ಷ ಆಹ್ವಾನಿಸೋದು ಅಂದ್ರೆ ಸುಮ್ಕೆ ಆಯ್ತದಾ. ಒಳಗೆ ಪರಮಾತ್ಮ ನೆಮ್ಮದಿಯಾಗಿ ಕುಂತಿದ್ರೇ ಅದ್ಕೊಂದು ಇದು. ಅದ್ನೇ ಅವುರ್ಗೆ ಹೇಳಿದ್ಕೆ `ಯಾವ ಸಟ್ಗೆ.... ಹೋಗಿ ರಾತ್ರಿ ಎಂಟು ಗಂಟೆ ಮೇಲೆ  ಅದೇನ್ಮಾಡ್ತೀರೋ ಮಾಡ್ಕಳಿ' ಅಂತ ಧಾರಾಳವಾಗಿ ಹೇಳಿದ್ರಂತೆ. ಕುಡುಕರ ಸಂಕಟ ಅವರಿಗೆ ಗೊತ್ತಿಲ್ಲ. ಅವರಿಗೂ ಸೂರ್ಯಂಗೂ ಆಗ ಬರೋದಿಲ್ಲ. ದಿನಾ ಅವನು ಯಾವಾಗ ಸಾಯ್ತಾನೊ ಅಂತ ಕಾಯ್ತ ಕುಂತಿರ್ತಾರೆ. ಅವನು ಮುಳುಗಿದ ಅಂದ್ರೆ ಇವರು ಬಾಟಲಿ ಮುಂದೆ ಪ್ರತ್ಯಕ್ಷ ಆಗಲೇಬೇಕು. ಡಿಸೆಂಬರ್ ತಿಂಗ್ಳಲಿ ಆ ಸೂರ್ಯ ಅನ್ನೋನು ಸಂಜೆ ಆರು ಗಂಟೆಗೆಲ್ಲ ಕಾಣ್ದಂಗಾಯ್ತನೆ. ಅಲ್ಲಿಂದ ರಾತ್ರಿ ಎಂಟು ಗಂಟೆಯವರೆಗೆ ಕಾಯ್ತಾ ಕುಂತಿರೋದು ಅಂದ್ರೆ.... ಅದೂ ಹೆಂಡ ಮುಂದಿಟ್ಟುಕೊಂಡು ಕುಂತಿರೋದು ಅಂದ್ರೆ. ಆ ಸಂಕಟ ಅನುಭವಿಸಿದೋರ್ಗೆ ಗೊತ್ತು.
ಇದು ಹೊಸ ವರ್ಷ ಆಚರಿಸುವವರ ಪಾಡಾದ್ರೆ ಇನ್ನು ವೈಕುಂಠ ಏಕಾದಶಿ ಆಚರಿಸಿದ ಕೆಲವರ ಪಾಡಂತೂ ನಾಯಿಪಾಡೇ ಸರಿ. ನಮ್ಮ ಲಾಡು ಶೆಟ್ಟರು ಪಟ್ಟ ಸಂಕಟಾನೆ ನೋಡಿ. ಯಾರು ಈ ಶೆಟ್ಟರು ಅಂದ್ರಾ... ಅದೇ ಕೃಷ್ಣಯ್ಯ ಶೆಟ್ಟರು ಕಣ್ರಿ. ಇನ್ನೂ ಗೊತ್ತಾಗಲಿಲ್ವ... ಅದೇ ಕಣ್ರಿ ಗಂಗಾಜಲ ಗೋಮೂತ್ರದ ಶೆಟ್ಟರು. ಅವ್ರು ಭಕ್ತರಿಗೆ ತಿರುಪತಿ ಲಾಡು ಹಂಚೋದ್ರಲ್ಲಿ ಬೋ ಫೇಮಸ್ಸಲ್ವಾ. ಈ ಸಲಾನೂ ಜನರಿಗೆ ತಿರುಪತಿ ಲಾಡು ಹಂಚಾನ ಅಂತ ಅದೆಷ್ಟೋ ಲಕ್ಷ ತಿರುಪತಿ ಲಾಡು ಮಾಡಿಸಿದ್ರಂತೆ. ವೈಕುಂಠ ಏಕಾದಶಿ ದಿವಸ ಕೃಷ್ಣಯ್ಯ ಶೆಟ್ಟರು ತಿರುಪತಿ ಲಾಡು ತಿನ್ನಿಸಿ ಭಕ್ತರಿಗೆ ವೈಕುಂಠದಲ್ಲಿ ಸೀಟ್ ರಿಸವರ್್ ಮಾಡಿ ನೇರವಾಗಿ ಲಕ್ಷುರಿ ಟ್ರಾವೆಲ್ಸ್ನಲ್ಲಿ ಕಳಿಸುವ ಏಪರ್ಾಡು ಮಾಡಿದ್ದರಂತೆ. ಆಗ ಬಂತು ನೋಡಿ ಈ ಹಾಳಾದ ಚುನಾವಣೆ ಶನಿ. ಭಕ್ತರಿಗೆ ತಿರುಪತಿ ಲಾಡು ಹಂಚುವುದನ್ನೂ  ತಡೀತು, ನೀತಿಸಂಹಿತೆ ಉಲ್ಲಂಘನೆ ಆಗ್ತದೆ ಅಂತ! ಪಾಪ ಎಷ್ಟು ನೊಂದುಕೊಳ್ಳಬೇಡ ಲಾಡು ಶೆಟ್ಟರು.
ಅಲ್ಲ ಕಣ್ರಿ ತಿರುಪತಿ ಲಾಡು ಅಂತೀರಿ. ಕೃಷ್ಣಯ್ಯ ಶೆಟ್ಟರು ಇಲ್ಲೇ ಮಾಡ್ಸಿದ್ರು ಅಂತೀರಿ. ಎಲ್ಲಾ ಬೊಗಳೆ ಕಣ್ರೀ ನಿಂಮಾತು ಅನ್ನಬೇಡಿ. ಇಲ್ಲೇ ಮಾಡ್ಸಿದ್ರೂ ಅದು ತಿರುಪತಿ ಲಾಡುನೇ ಕಣ್ರಿ. ಹೆಂಗೆ ಅಂತೀರಾ....
ಈ ತಿರುಪತಿ ತಿಮ್ಮಪ್ಪ ಇದಾನಲ್ಲ ಬಲೇ ಸಾಲಗಾರ. ಸಾಲ ಪಡೆಯೋದೆ ತನ್ನ ಹಕ್ಕು ಅಂತಿದ್ದೋನಿಗೆ ಒಂದು ಸಲ `ಥೂ ಈ ದರಿದ್ರದ ಸಾಲ ತೀರಿಸಬಿಡಬೇಕು' ಅನ್ನೊ ಕೆಟ್ಟ ಆಲೋಚನೆ ಬಂತಂತೆ. ಏಳುಮಲೆ ಮೇಲೆ ಕುಂತ್ರೆ ವ್ಯಾಪಾರವೇನೋ ಪೊಗದಸ್ತಾಗಿ ನಡೀತದೆ ನಿಜ. ಸಾಲ ತೀರ್ಸೋಕೆ ಇದೇನೇನೂ ಸಾಲ್ದು. ಹೇಳಿಕೇಳಿ ಇದು ಐಟಿ, ಬಿಟಿಯುಗ. ನಮ್ಮೋರೆಲ್ಲ ಹೋಗಿ ಅಮೆರಿಕದಲ್ಲಿ ಕುಂತವ್ರೆ. ಸ್ವದೇಶಕ್ಕೆ ಬಂದ್ರೂ ನನ್ನ ಕಡೆಗೆ ಕ್ಯಾರೆ ಅಂತ ತಿರುಗೂ ನೋಡಲ್ಲೊ. ಆ ಬಡ್ಡೆತ್ತವು ನಾನ್ ರೆಸಿಡೆಂಟ್ ಇಂಡಿಯನ್ಸ್ ಆದಂಗೆ ನಾನೂ ಎನ್ಆರ್ಟಿ ಅಥರ್ಾತ್ ನಾನ್ ರೆಸಿಡೆಂಟ್ ತಿರುಪತಿಯನ್ ಆಗಿಬುಟ್ರೆ ಬಲೇ ಭರ್ಜರಿ ಆಗಿರುತ್ತಲ್ವಾ ಅಂತ  ಯೋಚಿಸಿದ್ನಂತೆ. ಅದ್ಕೇ ಅಲ್ಲಿ ಒಂದು ಬ್ರಾಂಚ್ ಓಪನ್ ಮಾಡಿದ. ಪರದೇಶಿಗಳಿಗೆ ತಮ್ಮ ದೇವರ ಮೇಲೆ ಭಕ್ತಿ ಅನ್ನೋದು ಉಕ್ಕುಕ್ಕಿ ಹರಿಯುತ್ತಲ್ವಾ. ಈಗಲೂ ಹಂಗೆ ಆಯಿತು. ಬ್ರಾಂಚ್ ಆಫೀಸಿನಲ್ಲೂ ಬಿಸಿನೆಸ್ಸು ಭರ್ಜರಿ ಆಗೇ ನಡೀತಿತ್ತು. ಆಮೇಲೆ ಅವನಿಗಿನ್ನೊಂದು ಆಲೋಚನೆ ಬಂತಂತೆ. ಬೆಂಗಳೂರು ಅನ್ನೋದು ಐಟಿ ಸೆಂಟರಾಗದೆ. ಪ್ರಪಂಚದ ಮೂಲೆಮೂಲೆಯಿಂದಲೂ ಜನ ಇಲ್ಲಿಗೆ ಬರ್ತಿರ್ತಾರೆ.  ಬಂದೋರು ತಿರುಪತಿ ಕಡೆಗೆ ತಿರ್ಗೂ ನೋಡೊಲ್ರು. ಆಯಾ ದೇಶದಲ್ಲೇ ಬ್ರಾಂಚ್ ಓಪನ್  ಮಾಡೋದಕ್ಕಿಂತ ಬೆಂಗಳೂರಲ್ಲೇ ಒಂದು ಓಪನ್ ಮಾಡಿದ್ರೆ ಹೆಂಗೆ ಅಂತ ಮನಸ್ಸಿನಲ್ಲೇ ಮಂಡಿಗೆ ತಿಂದನಂತೆ. ಭಗವಂತ ಅಲ್ವಾ ತಿರುಪತಿ ತಿಮ್ಮಪ್ಪ. ಯೋಚನೆ ಬಂದದ್ದೇ ತಡ, ಬೆಂಗಳೂರಿನಲ್ಲೂ ಒಂದು ಬ್ರಾಂಚ್ ತೆಗೆದನಂತೆ. ಅವನು ಬೆಂಗಳೂರಲ್ಲಿರಲಿ ಇಲ್ಲ ಅಮೆರಿಕದಲ್ಲಿರಲಿ ತಿರುಪತಿ ತಿಮ್ಮಪ್ಪನೇ ಅಲ್ವ. ಹಂಗೇನೆ ತಿರುಪತೀಲಿ ಮಾಡಲಿ ಇಲ್ಲ ಕೊಳಗೇರೀಲಿ ಮಾಡಲಿ. ಅವನ ಹೆಸರಿದ್ದ ಮೇಲೆ ಮುಗೀತು. ಅದು ತಿರುಪತಿ ಲಾಡೂನೆ!
ಸರಿ ಕೃಷ್ಣಯ್ಯ ಶೆಟ್ಟರ ಲಾಡು ವಿಚಾರಕ್ಕೆ ಬರೋಣವಂತೆ. ಅವ್ರು ಹಿಂಗೆ ಲಾಡು ಮಾಡಿ ಗುಡ್ಡೆ ಹಾಕಿದ್ರಲ್ಲಾ ಅವ ಹಂಚೋಕೋದ್ರೆ `ಬಿಲ್ಕುಲ್ ಆಗಕ್ಕಿಲ್ಲ' ಅಂದಿದ್ರಲ್ಲಾ. ಬೆಂಗಳೂರಿನ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೇ ಅವ ಕೊಡಬಹುದಾಗಿತ್ತು. ಆದ್ರೆ ಅವು ಬಡ ಭಕ್ತರಿಗೆ ಅಂತ ಮಾಡಿಸಿದ್ದೋವು. ಅವುರ್ಗೇ ಅವ ತಲುಪಿಸಬೇಕು. ಬೆಂಗಳೂರಿನ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಯಾವ ಬಡವ ಬಂದಾನು ಅನ್ನೋ ಚಿಂತೆಯಲ್ಲಿ `ಏನಪ್ಪ ತಿಮ್ಮಪ್ಪ ನಿನ್ನ ಲೀಲೆ. ನಿನ್ನೆಸರು ಇದ್ರೂ ಹಿಂಗೆ ತರಲೆ ತಗೀತಾವ್ರಲ್ಲ. ನೀನೇ ದಾರಿ ತೋರಿಸ್ಬೇಕು' ಅಂತ ಆ ದಯಾಮಯನಿಗೇ `ಗೈಡ್ ಮಾಡು ತಂದೆ' ಅಂತ ಗೋಗರಿದಿರಬೇಕು. ಆ ಭಗವಂತನಿಗೂ ಇದು ಕೇಳಿಸಿರಬೇಕು. `ಅದಕ್ಯಾಕೆ ಹಿಂಗೆ ಹ್ಯಾಪುಮೋರೆ ಹಾಕೊಂಡು ಕುಂತ್ಲಾ ಶೆಟ್ಟಿ. ಸ್ಕೂಲುಡ್ರುಗೆ ಹಂಚು' ಅಂದಿರಬೇಕು. ತಿಮ್ಮಪ್ಪನಾಜ್ಞೆಯಂತೆ ಶೆಟ್ಟರು ಮಾಲೂರು ಸ್ಕೂಲಿಗೆ ಹೋದರು. ಮಾಲೂರೇ ಯಾಕೆ ಅಂದ್ರೆ ಅದು ಕಣ್ಣಿಗೆ ಬಿತ್ತು ಅದ್ಕೆ.  ಅವರು ಆ ಕ್ಷೇತ್ರದ ಶಾಸಕರಾಗಿದ್ದದು ಆಕಸ್ಮಿಕ ಅಷ್ಟೆ! ಶಾಲೆಯ ಮಕ್ಕಳಿಗೆ ಹಂಚಬೇಕು ಅಂತಿದ್ರು. ಮತ್ತೆ ಭಗವಂತ `ಎಲಾ ಶೆಟ್ಟಿ ಬರೀ ಲಾಡು ಹಂಚಿದ್ರೆ ಏನು ಬಂದಂಗೆ ಆಯಿತ್ಲ. ಬಾಯಿ ಸೀ  ಆಯ್ತದೆ ಅಷ್ಟೇಯ. ವಸಿ ಹೊತ್ತಾದ ಮೇಲೆ ಮೊದಲಂಗೇ ಆಯ್ತದೆ. ಆ ಐಕ್ಳಿಗೆ ಹೊತ್ತೊತ್ಗೆ ಉಂಡೇ ಗೊತ್ತಿಲ್ಲ. ಯಾಕೇಂದ್ರೆ ಅವರ ತಾವ ವಾಚ್ ಇಲ್ಲ. ಅದ್ಕೇ ಲಾಡು ಜೊತೆ ವಾಚ್ನೂ ಕೊಡು' ಅಂದಿರಬೇಕು. ದೇವರ ಆಜ್ಞೆ ಅಲ್ವ. ಇದೂ ನಿಜವೇಯ. ವಾಚಿದ್ರೆ ತಿಮ್ಮಪ್ಪನ ಸೇವೇನೂ ಟೈಮಿಗೆ ಸರಿಯಾಗಿ ಮಾಡ್ತವೆ ಅಂತಾವ ಲಾಡೂ ಜೊತೆ ವಾಚನ್ನೂ ಹಂಚಿದರು. ಅಲ್ಲ ಇದನ್ನೂ ನೀತಿ ಸಂಹಿತೆ ಉಲ್ಲಂಘನೆ ಅಂತಾರಲ್ಲಾ... ದೇವರ ಸೇವೇಗೂ ಹಿಂಗಂದ್ರೆ... ಆ ತಿರುಪತಿ ತಿಮ್ಮಪ್ಪನೇ ಕಾಪಾಡಬೇಕು....
ಕೋಳಿ ಚುರಮುರಿ
ಚುನಾವಣೆ ಬಂದಾಗ ರೂಪಾಯಿ, ಹೆಂಡದ ಸೇವೆ ಮಾಡೋದು ಹಳೆ ಕಾಲದ ಮಾತಾಯಿತು. ಜನಕ್ಕೂ ಇದ ನೋಡಿನೋಡಿ ವಾಕರಿಕೆ ಬಂದೋಗದೆ. ಹೆಂಡ ಒಂದೇ ಕೊಟ್ರೆ ಆಯ್ತದಾ ನಂಚಿಕೊಳ್ಳೋಕೂ ಕೊಡಬೇಕು ಅನ್ನೋದು ಇತ್ತೀಚಿನ ಸುಧಾರಣೆ. ಒಂದು ದಿನ ಆದ್ರೂ ನೆಮ್ಮದಿಯಾಗಿ ಕುಡ್ದು ತಿಂದು ತೇಗಲಿ ಅಂತ ಹೆಚ್ಚುವರಿಯಾಗಿ ಒಂದೋಟಿಗೆ ಬಂದು ಉಂಡೇ ಕೋಳೀನೇ ಕೊಡ್ತಾ ಅವ್ರಂತೆ! ಇದು ಜನರ ಕಷ್ಟಕ್ಕೆ ಆಗೋದು ಅಂದ್ರೆ!
ಕೆಲವರಿರುತ್ತಾರೆ. ಆರು ತಿಂಗಳಿಗೆ ಹುಟ್ಟಿದೋವು. ಕೋಳಿ ಕೊಟ್ಟರೆ `ಅಯ್ಯೋ ಅದ ಕೂದು ಸಾರು ಮಾಡೋ ಹೊತ್ಗೆ ಸರೊತ್ತಾಗ್ತದೆ' ಅಂತ ಗೊಣಗುಟ್ಯವಂತೆ.  ಅವರ ಕಷ್ಟ ನೋಡಿ. ಚುನಾವಣೆ ಹೆಂಡ ಅದೆ. ಅದು ಕುಡಿಯಾನ ಅಂದ್ರೆ ಸೈಡ್ಗೇನೂ ಇಲ್ಲ. ಬ್ಯಾರೆ ದಿಸಾಗಿದ್ರೆ ಒಂದು ತರ. ಹೆಂಡ ಬಾಯಿಗೆ ಸುರ್ಕಂಡು ಒಂಡೆರ್ಡಳ್ಳು ಉಪ್ಪ ಎಸಗಂಡ್ರೆ ಸೈಡ್ ಕತೆ ಮುಗೀತಿತ್ತು. ಇವತ್ತೂ ಹಂಗೆ ಮಾಡ್ಲಿ ಅಂದ್ರೆ ಪ್ರಜ್ಞಾವಂತ ಮತದಾರನ ಹಕ್ಕಿಗೇ ಅವಮಾನ! ಅದ್ಕೇ ಕೆಲ ಸೇವಕರು ಸೈಡ್ ಡಿಷ್ಗೆ ಅಂತ ಕೋಳಿ ಚುರಮುರಿ ಕೊಟ್ತಾರಂತೆ! ಇದೇನಪ್ಪ ಕೋಳಿ ಚುರಮುರಿ ಅಂದ್ರೆ.... ಚುರಮುರಿಗೆ ಒಗ್ಗರಣೆ ಹಾಕುವಾಗಲೇ ಕೋಳಿಮಾಂಸದ ಚೂರುಗಳನ್ನೂ ಹಾಕುತ್ತಾರದಂತೆ! ಬಲೇಟೇಸ್ಟಾಗಿರ್ತದಂತೆ! ಜನ ಸೇವೆ ಅಂದ್ರೆ ಇದಕ್ಕೆ ಅನ್ನಬೇಕು!


ಎಚ್.ಎಲ್.ಕೇಶವಮೂರ್ತಿ

ಹೇಳು

ಹೇಳು ನನ್ನ ತುಟಿಗಳು ಇನ್ನೂ ಸ್ವತಂತ್ರವಾಗಿವೆ ಎಂದು
ಹೇಳು ನನ್ನ ಭಾಷೆಗಿನ್ನೂ ತಾಕತ್ತಿದೆ ಎಂದು
ಹೇಳು ಸತ್ಯವಿನ್ನೂ ಜೀವಂತವಾಗಿದೆ ಎಂದು
ಹೇಳು ಹೇಳಬೇಕಾಗಿರುವುದನ್ನು ಹೇಳಲೇಬೇಕಿದೆ ಎಂದು

ಉರ್ದು ಮೂಲ: ಫೈಜ್ ಅಹಮದ್ ಫೈಜ್
ಕನ್ನಡಕ್ಕೆ: ಹಸನ್ ನಯೀಂ ಸುರಕೋಡು

ಜೈ ಬಿನಾಯಕ್ ಸೇನ್ ತೀರ್ಪಿಗೆ ಜೈ!

ಜೈ
ಬಿನಾಯಕ್ ಸೇನ್ ತೀರ್ಪಿಗೆ ಜೈ!
ನಮ್ಮ ದೇಶವನ್ನು ರಕ್ಷಿಸಲಾಗಿದೆ
ಆತನಿಗೆ ಜೀವಾವಧಿ ಶಿಕ್ಷೆಯನ್ನು ನೀಡುವ ಮೂಲಕ.

ವೀರಚರಿತ್ರೆಗಳ ಈ ಪುರಾತನ ಪುಣ್ಯ ಭೂಮಿಯಲ್ಲಿ
ಬದುಕಿದ್ದ ಆ ಪಾತಕಿಗೆ
ಮರಣದಂಡನೆಯನ್ನೇ ನೀಡಬೇಕಿತ್ತು

ಇದು
ಹರಿಶ್ಚಂದ್ರರ ತಾಯಿನಾಡು,
ಭ್ರಷ್ಟಾಚಾರರಹಿತ ಭೂಮಿ,
ಬಡತನವೆಂಬುದೇ ಇರದ ದೇಶ,
ಅಣ್ಣ-ಅಕ್ಕಂದಿರ ವಿಶಿಷ್ಟ ರಾಷ್ಟ್ರ,
ಅಪಾರ ಸ್ವಾತಂತ್ರ್ಯಗಳಿರುವ ದೇವಗಿರಿ,
ಜಾತಿ/ಧರ್ಮ ಎಂಬ ಭೇದಭಾವಗಳಿರದ ಪವಿತ್ರ ಭೂಮಿ....
ಇಂತಹ ದೇಶವನ್ನು ಛಿದ್ರಗೊಳಿಸಲು
ಆತ ಸಂಚು ಹೂಡಿದ್ದ....

ಅಂಥವನಿಗೆ ಜೀವಾವಧಿ ಶಿಕ್ಷೆ
ನೀಡಿರುವ ನಮ್ಮ
ಪ್ರಜಾಪ್ರಭುತ್ವ ಮತ್ತು ನ್ಯಾಯಾಲಯಕ್ಕೆ
ಜೈ!

ಇಂಗ್ಲಿಷ್ ಮೂಲ: ಸಾಬು ಶಣ್ಮುಗಂ
ಕನ್ನಡಕ್ಕೆ: ಸಾವಂತ್ರಿ