January 1, 2011

ಮಂಡ್ಯದಲ್ಲಿ ಕೈ ಕಮಲ ಹಿಡಿದಿದ್ದು ನಿಜವೇ?

''ಈ ಕಾಂಗ್ರೆಸ್ಸಿನವರು ಜಿಲ್ಲಾ ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ'' ಎಂದು ಹೋದಲ್ಲಿಬಂದಲ್ಲಿ ಕೂಗಾಡುತ್ತಿರುವ ಕುಮಾರಣ್ಣ ಮತ್ತು ಚಲುವಣ್ಣನ ಮಾತನ್ನ ಕಾಂಗೈಗಳು ಗಂಭೀರವಾಗಿ ಪರಿಗಣಿಸಿದರಂತಲ್ಲಾ. ಇಂತಹ ಅಪವಿತ್ರ ಮೈತ್ರಿ ನಿಜವೆ ಎಂದು ಅವರು ಪರಿಶೀಲಿಸಿದಾಗ, ಮಂಡ್ಯ  ಜಿಲ್ಲೆ ಮಟ್ಟಿಗೆ ಕುಮಾರಸ್ವಾಮಿ ಪಾಟರ್ಿ ಬಿಜೆಪಿ ಹಂಗಿಗೆ ಬಿದ್ದಿರುವುದು ಪತ್ತೆಯಾಗಿದೆಯಂತಲ್ಲಾ. ಯಾವುದೇ ಪಾಟರ್ಿ ಅಧಿಕಾರಕ್ಕೆ ಬಂದರೂ ತನ್ನ ಅಕ್ರಮ ಮತ್ತು ಕೇಸುಗಳಿಂದ ಬಚಾವಾಗಲು ಆಡಳಿತ ಪಕ್ಷದ ಅಧಿಪತಿಯ ಕಾಲಿಡಿಯುವ ಶಿವರಾಮೇಗೌಡ, ಎಡೂರಪ್ಪನ ಎಡಗೈಯಾಗಿರುವುದಲ್ಲದೆ ''ಮಂಡ್ಯದಲ್ಲಿ ಬಿಜೆಪಿ ಗೆಲ್ಲಿಸಿ ತರುವ ಜವಾಬ್ದಾರಿ ನನಗಿರಲಿ'' ಎಂದು ಯಡ್ಡಿಯಿಂದ ಕಾಸು ಕಿತ್ತು ಪರಾರಿಯಾದವನು ಮಂಡ್ಯದಲ್ಲೂ ಯಾರ ಮೊಬೈಲ್ಗೂ ಸಿಗುತ್ತಿಲ್ಲವಂತಲ್ಲಾ.
ಮಂಡ್ಯದಲ್ಲಿ ಬಿಜೆಪಿ ಅಭ್ಯಥರ್ಿಗಳು ಮಣ್ಣುಮುಕ್ಕುವುದು ಗ್ಯಾರಂಟಿ. ಇಲ್ಲಿ ಬಿಜೆಪಿಗಳು ಸೋಲುವುದರಿಂದ  ಕಾಂಗೈಗಳ ಬಾಯಿಗೆ ಮಣ್ಣು ಹಾಕಲೇಬೇಕೆಂದು ನಿರ್ಧರಿಸಿದ ಶಿವರಾಮೇಗೌಡ, ಚಲುವಣ್ಣನನ್ನು ಸಂಪಕರ್ಿಸಿ ''ಹಲೋ ಬ್ರದರ್, ನೀವೇನೂ ಯೋಚನೆ ಮಾಡಬೇಡಿ. ಈ ಬಿಜೆಪಿ ಓಟುಗಳೆಲ್ಲ ಜೆಡಿಎಸ್ಗೆ ಟನರ್ಾಗಂಗೆ ಮಾಡ್ತಿನಿ'' ಎಂದುಬಿಟ್ಟನಂತಲ್ಲಾ. ಇದರಿಂದ ಪುಲಕಿತನಾದ ಚಲುವಣ್ಣ ''ತುಂಬ ಥ್ಯಾಂಕ್ಸ್ ಬ್ರದರ್. ನಾನೀಗ್ಲೆ ಡವುಟ್ ಬರದಂಗೆ ಸ್ಟೇಟ್ಮೆಂಟ್ ಕೊಡ್ತೀನಿ'' ಎಂದದ್ದೂ ಅಲ್ಲದೆ ''ಸದರಿ ಅಕ್ರಮ ಸಂಬಂಧದ ವಿರುದ್ಧವಾಗಿ ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಳಒಪ್ಪಂದ ಮಾಡಿಕೊಂಡಿವೆ'' ಎಂಬ ಮಾತನ್ನ ಕುಮಾರಣ್ಣನ ಬಾಯಲ್ಲೂ ಹೇಳಿಸಿದರಂತಲ್ಲಾ, ಥೂತ್ತೇರಿ!
****
ಇತ್ತ ಮಂಡ್ಯ ಜಿಲ್ಲೆಯದು ಈ ಕತೆಯಾದರೆ, ಅತ್ತ ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಾಟರ್ಿಯಿಂದ ಕಾಸು ತೆಗೆದು ಕೊಂಡ ಕುಮಾರ್ ಬಂಗಾರಪ್ಪ, ಅಲ್ಲಿ ಚುನಾವಣೆ ಮುಗಿದರೂ ಶಿವಮೊಗ್ಗ ತಲುಪಿಲ್ಲವಂತಲ್ಲಾ. 'ಬಂ' ಸಂಚಿನಿಂದ ಕುಮಾರ್ ಬಂಗಾರಿ ಮನೆ ಹರಾಜಿಗೆ ಬಂದಿತ್ತು. ಬಂಗಾರಪ್ಪನೇನೋ ಕುಮಾರ ಸ್ವಾಮಿ ಕಾಲಿಗೆ ಬಿದ್ದು ಬಚಾವಾದರು. ಆದರೆ 'ಕುಬಂ' ಎಲ್ಲಿಂದ ಹಣ ತರ ಬೇಕು? ಅದಕ್ಕಾಗಿ ಸೂಕ್ತ ಸಂದರ್ಭದಲ್ಲಿ ಸಿಕ್ಕ ಕಾಂಗ್ರೆಸ್ ನಿಧಿಯೊಂದಿಗೆ ಸಾಲ ಕೊಟ್ಟವರ ಮನೆಗೆ ಹೋಗಿರ ಬಹುದೆಂದು ಕಾಂಗೈ ಕಕವಾಗಳು ಅಳುದನಿಯಲ್ಲಿ ಆಡಿಕೊಳ್ಳುತ್ತಿದ್ದಾರಂತಲ್ಲಾ. ಇದನ್ನು ಕೇಳಿದ ಬಂಗಾರಪ್ಪ ತುಂಬ ಖುಷಿಯಿಂದ ''ಕೃಷ್ಣ ನೀ ಬೇಗನೇ ಬಾರೋ. ಬೇಗನೆ ಬಂದೂ ಮುಖವನ್ನು ತೋರೋ ಕೃಷ್ಣಾ...'' ಎಂದು ಶೀಟಿ ಹೊಡೆಯುತ್ತ, ''ನಾನು ನನ್ನ ಹಿರಿಮಗನ್ನ ಯಾಕೆ ದೂರ ಇಟ್ಟಿದ್ದೀನಿ ಅಂತ ಈಗ್ಲಾದ್ರೂ ಗೊತ್ತಾಯ್ತೇನ್ರಿ? ನನ್ನ ಜೀವನದಲ್ಲಿ ನಾನೆಂದೂ ಮತದಾರರಿಗೆ ತೊಂದ್ರೆ ಕೊಟ್ಟಿಲ್ಲ. ನಾನು ತೊಂದ್ರೆ ಕೊಟ್ಟಿರೋದು ಬರೀ ಕಳ್ಳುಬಳ್ಳಿಗೆ. ಇದು ಬಂಗಾಪ್ಪನ ಸ್ಟೈಲ್'' ಎಂದರಂತಲ್ಲಾ. ಕೂಡಲೇ ಇಂಧೋಳ ರಾಗವನ್ನು ತಾರಕದಲ್ಲಿ ಎತ್ತಿಕೊಂಡು ''ಕುಮಾರಣ್ಣ ನನ್ನ ನಾಯಕ. ಅವರಪ್ಪ ಅವನ ನಾಯಕ. ಇನ್ನ ನಾನೇನಿದ್ರು ಅವರ ಸೇವಕ'' ಎಂದು ಕಣ್ಮುಚ್ಚಿ ಹಾಡತೊಡಗಿದರಂತಲ್ಲಾ, ಥೂತ್ತೇರಿ!!
****
ಕನರ್ಾಟಕದ ರಾಜ್ಯಪಾಲರಿಗೂ ಎಡೂರಪ್ಪನಿಗೂ ಬಿದ್ದ ಗುದುಮುರುಗಿ ಬಿಗಿಯಾಗುತ್ತಾ, ಯಾಕೋ ತನಗೇ ಯಡವಟ್ಟಾಗುವುದನ್ನು ಯಡ್ಡಿ ಗಮನಿಸಿದರಂತಲ್ಲಾ. ಆಗ ಮಾಜಿ ವಕೀಲ, ಮಾಜಿ ಕಾಂಗೈ, ಮಾಜಿ ದಳ ಇತ್ಯಾದಿ ಯಾವ್ಯಾವುದರಿಂದಲೂ ಮಾಜಿಯಾಗಿ ಈಗ ಬಿಜೆಪಿಗಳ ಭಾವನಂತಿರುವ ಡಿ.ಬಿ. ಚಂದ್ರೇಗೌಡನೆಂಬ ಹಳೇ ಫುಟ್ರಗ್ಗನ್ನು ಸಂಪಕರ್ಿಸಿ ''ನೀರಾದರೂ ಬಾಯಿಬಿಟ್ಟು ನನಗೆ ಸಹಾಯ ಮಾಡಿ'' ಎಂದು ಬೇಡಿಕೊಂಡರಂತಲ್ಲಾ. ಕೂಡಲೇ ಚಂದ್ರೇಗೌಡ ಮಹಾ ಕಾನೂನು ಪಂಡಿತನ ಹಾವಭಾವ ಮತ್ತು ದನಿಯಲ್ಲಿ ''ರಾಜ್ಯಪಾಲರು ತಮ್ಮ ಕರ್ತವ್ಯದ ವ್ಯಾಪ್ತಿ ಮೀರಿ ಕೆಲಸ ಮಾಡೋದೆ ಆದ್ರೆ, ಅದರ ಪರಿಣಾಮವನ್ನ ಎದುರಿಸಬೇಕಾಗುತ್ತದೆ'' ಎಂದರಂತಲ್ಲಾ. ಇದನ್ನು ಗಮನಿಸಿದ ರಾಜ್ಯಪಾಲರು ''ನಾನು ಕನರ್ಾಟಕಕ್ಕೆ ನೌಕರಿ ಹುಡುಕಿ ಬಂದಿರುವ ನಿರುದ್ಯೋಗಿಯಲ್ಲಾ'' ಎಂದು ಗುಡುಗಿದ ಕೂಡಲೇ ಗೌಡ ಎಂಬ ಫುಟ್ರಗ್ಗಿನ ಸದ್ದು ನಿಂತೇಹೋಯ್ತಂತಲ್ಲಾ, ಥೂತ್ತೇರಿ!!
****
ಯಡ್ಡಿ ಸಕರ್ಾರದಲ್ಲಿ ನಡೆದಿರುವ ಯರ್ರಾಬಿರ್ರಿ ಅಕ್ರಮಗಳ ವಿವರ ಕೊಡಿ ಎಂದು ರಾಜ್ಯಪಾಲರು ಕೇಳಿದ್ದಕ್ಕೆ ಎಡೂರಪ್ಪ ''ನನ್ನ ಸಕರ್ಾರದಲ್ಲಿ ಏನೇನು ನಡೆದಿಲ್ಲ'' ಎಂದು ಒಂದೇ ಸಾಲಿನಲ್ಲಿ ಉತ್ತರಿಸಿದರಂತಲ್ಲಾ. ಇದರಿಂದ ದಂಗುಬಡಿದ ರಾಜ್ಯಪಾಲರು, ''ಈ ನಾಡಿನಲ್ಲಿ ನಡೆಯುತ್ತಿರುವ ಗಣಿ, ಅರಣ್ಯ ಲೂಟಿಯನ್ನು ತಡೆಯಲಾರದ ಅಸಮರ್ಥನಾಗಿರುವ ನನ್ನನ್ನ ಕ್ಷಮಿಸಿ'' ಎಂದು ಯಡ್ಡಿ ಸದನದಲ್ಲೇ ಹೇಳಿದ್ದನ್ನು ನೆನಪಿಸಿಕೊಂಡರಂತಲ್ಲಾ. ಆದರೀಗ ಎಡೂರಪ್ಪನ ಒಂದು ಸಾಲಿನ ವಿವರದಿಂದ ಕೆಂಪಾಗಿರುವ ರಾಜ್ಯಪಾಲರು, ಸಂವಿಧಾನದ ಸುದ್ದಿ ತೆಗೆದು ಯಡ್ಡಿಯನ್ನು ಹೆದರಿಸಿದರಂತಲ್ಲಾ. ಈ ನಡುವೆ ಕೇಂದ್ರದ ದೊಣ್ಣೆನಾಯಕರು ''ನಾವು ಈ ಹಾಳು ಕಾಂಗೈಗಳ ಕಟಕಿ ಮಾತನ್ನು ಕೇಳಲಾಗುವುದಿಲ್ಲ. ನೀವೇ ಇಲ್ಲಿಗೆ ಬಂದು  ಉತ್ತರ ಕೊಡಿ'' ಎಂದು ಯಡ್ಡಿಗೆ ಮೆಸೇಜು ಬಿಟ್ಟರಂತರಲ್ಲಾ. ಕೂಡಲೇ ಪಂಚಾಯ್ತಿ ಚುನಾವಣೆಯ ಉತ್ಸಾಹ ಕಳೆದುಕೊಂಡ ಯಡ್ಡಿ ''ನಾನು ಕೇಂದ್ರಕ್ಕೆ ಹೋಗುತ್ತೇನೆ'' ಎಂದು ಎದುರಿದ್ದ ಜನಗಳನ್ನ ನೋಡಿದಾಗ ಬಿಜೆಪಿ ಪಾಟರ್ಿಯವರ ಮುಖದಲ್ಲೇ ಮಂದಹಾಸ ಮಿನುಗಿತಂತಲ್ಲಾ, ಥೂತ್ತೇರಿ!!
****
''ನಾನು ಕೇಂದ್ರಕ್ಕೆ ಹೋಗುತ್ತೇನೆ'' ಎಂದು ಯಡ್ಡಿ ಹೇಳಿದ ಕೂಡಲೇ ನಿಷ್ಠಾವಂತ  ನಿಷ್ಠರು ಯಡ್ಡಿಗೆ ಅಡ್ಡಮಲಗಿ ಪ್ರತಿಭಟಿಸಬೇಕಿತ್ತು. ಯಡ್ಡಿ ಜೇಬಲ್ಲಿರುವ ಬಾಚಣಿಗೆ ಕಿತ್ತುಕೊಂಡು ಇದರಲ್ಲೇ ಇರಿದುಕೊಂಡು ಸಾಯುತ್ತೇವೆ ಎನ್ನಬೇಕಿತ್ತು. ''ಬರುವ ಸಕರ್ಾರ ನಮ್ಮ ಕಂಟ್ರಾಕ್ಟಿನ ಬಿಲ್ ಮಾಡದಿದ್ದರೆ ಗತಿಯೇನು. ನೀವು ಹೋಗಕೂಡದು. ಇಲ್ಲೇ ಇರಬೇಕು'' ಎನ್ನಬೇಕಿತ್ತು. ಆದರೆ ಅದ್ಯಾವುದೂ ಸಂಭವಿಸದೆ ಯಡ್ಡಿಯನ್ನಾಗಲೇ ಅರ್ಧ ಬೀಳ್ಕೊಟ್ಟಿದ್ದಾರಂತಲ್ಲಾ.
ಇತ್ತ ಪಂಚಾಯ್ತಿ ತೀಮರ್ಾನವೂ ಯಡ್ಡಿಗೆ ವಿರುದ್ಧವಾಗಲಿದೆಯಂತಲ್ಲಾ. ಈ ನಡುವೆ ತಲೆಯಲ್ಲಿ ಮೆದುಳಿನ ಕೊರತೆ ಅನುಭವಿಸುತ್ತಿರುವ ಈಶ್ವರಪ್ಪ, ಯಡ್ಡಿ ನಿರ್ಗಮನದ ಸುದ್ದಿಯಿಂದ ಆಗಿರುವ ಸಂತೋಷವನ್ನು ತೋರಗೊಡದೆ ಶನಿಪೂಜೆಗೆ ತೊಡಗಿದ್ದಾನಂತಲ್ಲಾ. ಆದರೂ ಯಡ್ಡಿ ನಂತರ ಈಶ್ವರಿ ಎಂಬ ಸೊಲ್ಲು ಎಲ್ಲೂ ಇಲ್ಲದ್ದು ನೋಡಿ ಅಂತ ಸೊಲ್ಲು ಸುಳಿದಾಡಲು ಏನು ಮಾಡಬೇಕು ಎಂದು ನಾಲಿಗೆಯಲ್ಲಿ ತುಟಿ ಸವರುತ್ತಾ ಕುಳಿತಿದ್ದಾನಂತಲ್ಲಾ, ಥೂತ್ತೇರಿ!!

- ಯಾಹೂ

1 comment: